ಡಿಕೆಶಿ ಜನ್ಮದಿನ, ಅಭಿಮಾನಿಗಳ ಸಂಭ್ರಮ
ಕನಕಪುರ: ಶಾಸಕ ಡಿ.ಕೆ. ಶಿವಕುಮಾರ್ರವರ 53ನೇ ಜನ್ಮದಿನಾಚರಣೆಯನ್ನು ಕನಕಪುರದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು.
ಅದ್ಧೂರಿ ಆಚರಣೆ ಮಾಡಬಾರದೆಂಬ ಶಾಸಕರ ವಿನಂತಿಯ ಮೇರೆಗೆ ಅಭಿಮಾನಿಗಳು ತಾಲೂಕಿನ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪುರಸಭೆಯ 18 ನೇ ವಾರ್ಡ್ನ ಮುಖಂಡ ಪುಟ್ಟಸ್ವಾಮಿ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಇಲ್ಲಿನ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ಪೂಜೆ ನೆರವೇರಿಸಿದರು. ಕನಕಪುರದ ಐಪಿಪಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು,ಹಣ್ಣು, ಬ್ರೆಡ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜು, ದೇವರಾಜು, ಚಂದ್ರ, ಮಹಲಿಂಗಯ್ಯ, ಗೋವಿಂದ ರಾಜು, ಮುತ್ತುರಾಜು, ಅಂದಾನಿ, ಬಾಬು, ರವಿ,ಸ್ವಾಮಿ,ರಾಜು ಮೊದಲಾದವರು ಪಾಲ್ಗೊಂಡಿದ್ದರು.
ಶಾಸಕ ಡಿ.ಕೆ.ಶಿವಕುಮಾರ್ ಜನ್ಮದಿನಾಚರಣೆಗೆ ಕನಕಪುರದ ಪ್ರಮುಖ ಮುಖಂಡರುಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಮಾಜಿ ವಿಪ ಸದಸ್ಯ ಎಸ್.ರವಿ, ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ವಿಜಯದೇವ್, ದಿಲೀಪ್, ಎಂ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷರುಗಳಾದ ಪುರುಷೋತ್ತಮ್, ಸುಕನ್ಯಾರಂಗಸ್ವಾಮಿ, ರಾಯಸಂದ್ರರವಿ, ಯೂತ್ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಕೆಂಪರಾಜು, ಸಿದ್ಧವೀರ್, ಅರುಣದೇವ್ ಶುಭಾಷಯಗಳನ್ನು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

