ಬೆಂಗಳೂರು ಗ್ರಾಮಾಂತರ

'ವರ್ಲ್ಡ್ 10 ಕೆ ಬೆಂಗಳೂರು 2013': ನಾಳೆ ವಾಹನ ಸಂಚಾರ ಬದಲು

Published On :

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ 'ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2013' ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 11 ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಸಂಚಾರ ವ್ಯವಸ್ಥೆ ಬದಲಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಾರ್ಯಕ್ರಮ ಮುಗಿಯುವವರೆಗೂ ಸಂಚಾರ ವ್ಯವಸ್ಥೆ ತಾತ್ಕಾಲಿಕವಾಗಿ ಬದಲಿಸಲಾಗಿದ್ದು, ಸಾರ್ವಜನಿಕರು ಸಹಕರಿಹಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.ಸಂಚಾರ ನಿಷೇಧ:ಕಸ್ತೂರಬಾ ರಸ್ತೆ, ಎಂ.ಜಿ.ರಸ್ತೆ, ಕಾಮರಾಜ ರಸ್ತೆ, ಡಿಕಿನ್ಸನ್ ರಸ್ತೆ, ಹಲಸೂರು ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ರಸ್ತೆ, ಗೋಪಾಲಗೌಡ ವೃತ್ತ, ಅಂಬೇಡ್ಕರ್ ಬೀದಿ, ಕಬ್ಬನ್‌ಪಾರ್ಕ್ ಒಳಗೆ ಹೋಗುವುದನ್ನು ಹಾಗೂ ಹಡ್ಸನ್ ವೃತ್ತದಲ್ಲಿ ಸಂಚಾರ ನಿಷೇಧಿಸಲಾಗಿದೆ.ಸಂಚಾರಕ್ಕೆ ಪರ್ಯಾಯ ರಸ್ತೆ:-ಜೆ.ಸಿ.ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವವರು ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ, ಕೆ.ಆರ್.ವೃತ್ತದ ಮೂಲಕ ಸಂಚರಿಸಬಹುದು.-ಜೆ.ಸಿ.ರಸ್ತೆ, ನೃಪತುಂಗ ರಸ್ತೆ ಕಡೆಯಿಂದ ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಹಲಸೂರು, ಮಾರತ್‌ಹಳ್ಳಿ ಕಡೆಗೆ ಹೋಗುವವರು ಹಡ್ಸನ್ ವೃತ್ತದಿಂದ ದೇವಾಂಗ ರಸ್ತೆ, ಮಿಷನ್ ರಸ್ತೆ, ರಿಚ್‌ಮಂಡ್ ರಸ್ತೆಯ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆ ಮೂಲಕ ಸಾಗಬಹುದು.- ಶಿವಾಜಿನಗರ ಕಡೆಯಿಂದ ಹೋಗುವ ವಾಹನ ಸವಾರರು ಬಾಳೇಕುಂದ್ರಿ ವೃತ್ತ, ಕನ್ನಿಂಗ್‌ಹ್ಯಾಂ ರಸ್ತೆ, ಚಂದ್ರಿಕಾ ಹೋಟೆಲ್, ಎಲ್.ಆರ್.ಡಿ.ಇ, ಬಸವೇಶ್ವರ ವೃತ್ತದ ಮುಖಾಂತರ ಸಂಚರಿಸಬಹುದು.- ಬಾಳೆಕುಂದ್ರಿ ವೃತ್ತದಿಂದ ಬರುವ ವಾಹನ ಸವಾರರು ಸಂಚಾರ ವಿಭಾಗದ ಮುಖ್ಯಕಚೇರಿಯ ಜಂಕ್ಷನ್, ಇನ್‌ಪೆಂಟ್ರಿ ರಸ್ತೆ ಮೂಲಕ ಸಂಚರಿಸುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.