ಬೆಂಗಳೂರು ಗ್ರಾಮಾಂತರ

ಪಿರಮಿಡ್ ವ್ಯಾಲಿಯಲ್ಲಿ 4 ದಿನಗಳ ಬುದ್ಧ ಪೂರ್ಣಿಮಾ

Published On :

ಕನಕಪುರ: ತಾಲೂಕು ಕೆಬ್ಬೆದೊಡ್ಡಿ ಗ್ರಾಮದಲ್ಲಿರುವ ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ಆವರಣದಲ್ಲಿ ದಶಮಾನೋತ್ಸವದ ಅಂಗವಾಗಿ ಮೇ23ರಿಂದ 26ರವರೆಗೆ ನಾಲ್ಕು ದಿನಗಳ ಬುದ್ಧಪೂರ್ಣಿಮಾ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.  
ಪ್ರತಿ ದಿನ ಪ್ರಾತಃಕಾಲ 5 ಗಂಟೆಗೆ ಬ್ರರ್ಹರ್ಷಿ ಸುಭಾಷ್ ಪತ್ರೀಜಿ ನೇತೃತ್ವದಲ್ಲಿ ಸಂಗೀತ ಧ್ಯಾನ, ಮಧ್ಯಾಹ್ನ 11 ಗಂಟೆಗೆ ಹಾಗೂ ಸಂಜೆ 3 ಗಂಟೆಗೆ ಆಧ್ಯಾತ್ಮಿಕ ತಜ್ಞರಿಂದ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಆಧ್ಯಾತ್ಮಿಕ ಉಪನ್ಯಾಸಗಳು, ಸಂಜೆ 6 ಗಂಟೆಗೆ ಹೆಸರಾಂತ ಚಿಂತಕರಿಂದ ಆಧ್ಯಾತ್ಮಿಕ ಸಂದೇಶಗಳು, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬುದ್ಧಪೂರ್ಣಿಮೆಯಂದು ರಾತ್ರಿ 9-30 ರಿಂದ 12-30 ರವರೆಗೆ ಅಖಂಡ ಹುಣ್ಣಿಮೆ ಧ್ಯಾನ ಕಾರ್ಯಕ್ರಮಗಳು ನಡೆಯುತ್ತವೆ ಎಂದು ವ್ಯವಸ್ಥಾಪಕ ಕೆಬ್ಬೆದೊಡ್ಡಿ ನಾಗರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.