ಬೆಂಗಳೂರು ಗ್ರಾಮಾಂತರ

ಪಡಿತರ ನೋಂದಣಿಯಲ್ಲಿ ನ್ಯೂನತೆ

Published On :

ಸೂಲಿಬೆಲೆ: ಗ್ರಾಪಂದ ಪಂಚತಂತ್ರದ ವೈಬ್ಸೈಟಿನಲ್ಲಿ  ಹತ್ತಾರು ನ್ಯೂನತೆಗಳು ಕಂಡು ಬಂದಿದ್ದು ಸರ್ಕಾರ ಸೂಚಿತ ಮಾರ್ಗದರ್ಶಿ ಅನ್ವಯ ನೋಂದಣಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರಿಂದ ನಿತ್ಯ ಕಂಪ್ಯೂಟರ್ ಆಪರೇಟರ್ಗಳು ಬೈಗುಳ ಕೇಳುವಂತಾಗಿದೆ. ಕೂಡಲೇ ನ್ಯೂನತೆಗಳನ್ನು ಸರಿಪಡಿಸಿ ಎಂದು ಹೊಸಕೋಟೆ ತಾಲೂಕಿನ 26 ಗ್ರಾಪಂದ ಕಂಪ್ಯೂಟರ್ ಆಪರೇಟರ್ಗಳು ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಜನರ ಬೈಗುಳದಿಂದ ಹೈರಾಣಾಗಿದ್ದ ಸಿಬ್ಬಂದಿ ಕೊನೆಗೂ ನ್ಯೂನತೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ.  ಪಂಚತಂತ್ರದಲ್ಲಿ ಪಡಿತರ ಕಾರ್ಡು ಸ್ವೀಕೃತಿ ಜನರೇಟ್ ಆಗುತ್ತಿಲ್ಲ, ಬದಲಾಗಿ ಎರರ್ ತೋರಿಸುತ್ತದೆ. ಪಡಿತರ ಚೀಟಿದಾರರಿಗೆ ನೀಡುವ ಜಾಮೀನುದಾರರ ಬೆರಳಚ್ಚು ನಮೂದಾಗುತ್ತಿಲ್ಲ. 2010ರ ಪಡಿತರ ಚೀಟಿಗಳ ಕುಟುಂಬದವರ ಭಾವ ಚಿತ್ರಗಳ ಅಪ್ ಲೋಡ್ಮಾಡಲು ಮತ್ತು ಬೆರಳಚ್ಚು  ಆಯ್ಕೆ ಬರುತ್ತಿಲ್ಲ. 10 ಗಂಟೆಯಾದರೂ ಗ್ರಾಪಂಗಳಲ್ಲಿ ವೈಬ್ ಸೈಟ್ ಚಾಲನೆಗೆ ಬರುವುದಿಲ್ಲ. ಪಡಿತರ ಚೀಟಿಗಳಲ್ಲಿ ಹೆಸರು ತಿದ್ದುಪಡಿ ಮಾಡಲು ಆಯ್ಕೆ ಲಭ್ಯವಿಲ್ಲ. ರೇಷನ್ ಕಾರ್ಡುನಲ್ಲಿ ಸ್ವಯಂ ಘೋಷಣಿ ಸ್ವೀಕೃತಿ ಬರುತ್ತಿಲ್ಲ. ಹಳೇ ರೇಷನ್ ಕಾರ್ಡಿಗೆ ಬೆರಳಚ್ಚು ತೆಗೆದುಕೊಳ್ಳಲು ಆಯ್ಕೆ ಬರುತ್ತಿಲ್ಲ. ಈಎಲ್ಲ ದೋಷಗಳಿಂದ ದಿನಕ್ಕೆ 3ರಿಂದ 5ಪಡಿತರ ಚೀಟಿಗಳನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ಪ್ರತನಿತ್ಯ ನೂರಾರು ಜನರು ಗ್ರಾಪಂಗಳ ಮುಂದೆ ಕ್ಯೂ ನಿಂತು ಸಾಕಾಗಿ ಅಧಿಕಾರಿಗಳನ್ನು ಶಪಿಸುಸುತ್ತಿದ್ದಾರೆ ಎಂದು ಹೊಸಕೋಟೆ ತಾಲೂಕಿನ 26 ಗ್ರಾಪಂದ ಕಂಪ್ಯೂಟರ್ ಆಪರೇಟರ್ಗಳು ಮೇ 28 ರಂದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು, ಜಿಪಂ ಸಿಇಓಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.