ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಚಾಲನೆ
ಆನೇಕಲ್ಲು: ಪ್ರಾಥಮಿಕ ಶಿಕ್ಷಣದ ಸರ್ವಶಿಕ್ಷ ಅಭಿಯಾನ ದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯಕ್ಕೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ಶೇಖರಪ್ಪ ತಿಳಿಸಿದರು. ಅವರು 6 ರಿಂದ 16 ವರ್ಷದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿವ ಸಲುವಾಗಿ ನ. 6 ಮತ್ತು 7 ರಂದು ಶಾಲಾ ಸಮೀಕ್ಷೆ ನಡೆಸಲಾಗಿದೆ. ಹಲವು ತಂಡಗಳು ಶಾಲೆಗೆ ಭೇಟಿ ನೀಡಿ 2012-13 ನೇ ಸಾಲಿನ 1 ರಿಂದ 9 ನೇ ತರಗತಿಯಲ್ಲಿದ್ದ ಮಕ್ಕಳು 2013-14 ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸುತ್ತಿರುವ ಬಗ್ಗೆ ಚೈಲ್ಡ್ ಟ್ರ್ಯಾಕ್ ಮುಖಾಂತರ ತಿಳಿಯುವುದು. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುಗು ಎಂದು ತಿಳಿಸಿದರು. ಈ ಸಮೀಕ್ಷಾ ಕಾರ್ಯವನ್ನು ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು, ಭಾಗೀದಾರ ಇಲಾಖೆಗಳು ಮತ್ತು ಎನ್ಜಿಒ ತಂಡಗಳು ನಿರ್ವಹಿಸಿವೆ ಎಂದರು. ಆನೇಕಲ್ ತಾಲೂಕಿನ 10 ಕ್ಲಸ್ಟರ್ಗಳನ್ನು ವಿಭಿನ್ನತೆ ಮತ್ತು ವೈಪರಿತ್ಯ ಹೊಂದಿರುವ ಪ್ರದೇಶ ಎಂದು ಗುರುತಿಸಿ ಇಲ್ಲಿನ ಎಲ್ಲಾ ಕುಟುಂಬಗಳ ಸಮೀಕ್ಷೆ ಮಾಡಲಾಗುವುದು. ಆ ಸಮೀಕ್ಷಾ ಕಾರ್ಯ ನವೆಂಬರ್ 13 ರಿಂದ ಚಾಲನೆ ನೀಡಿ 17 ರವರಗೆ ನಡೆಯಲಿದೆ ಎಂದರು. ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಪೋಷಕರು ಗಣತಿದಾರರ ತಂಡಗಳಿಗೆ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಯಾಗಲು ಸಹಕರಿಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಮನ್ವಯಾಧಿಕಾರಿಗಳು ಕೋರಿದ್ದಾರೆ.
ನಿರಂತರ ಧರಣಿ ಅಂತ್ಯ
ರಾಮನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಡೆದ ನಿರಂತರ ಧರಣಿ ಶುಕ್ರವಾರ ಅಂತ್ಯಗೊಂಡಿತು. ಕಂದಾಯ ಭವನದ ಎದುರು ಗುರುವಾರ ಬೆಳಗ್ಗೆಯಿಂದ ಪ್ರತಿಭಟಿಸುತ್ತಿದ್ದ ಕಾರ್ಯಕರ್ತರನ್ನು ಭೇಟಿಯಾದ ಅಧಿಕಾರಿಗಳು ಒಂದು ವಾರದಲ್ಲಿ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಭೂ ರಹಿತರಿಗೆ ನಿವೇಶನ, ಅರಣ್ಯ ಸಾಗುವಳಿ ಸಕ್ರಮೀಕರಣ ಸೇರಿದಂತೆ ಹತ್ತಾರು ಬೇಡಿಕೆಗಳ ಈಡೇರಿಕೆಗೆ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ ನಡೆಸಿದ್ದರು.
ಪುಸ್ತಕಗಳ ಆಯ್ಕೆ: ಅರ್ಜಿ ಆಹ್ವಾನ
ರಾಮನಗರ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಎರಡು ಹಂತದಲ್ಲಿ ಪುಸ್ತಕ ಸ್ವೀಕರಿಸಲು ತೀರ್ಮಾನಿಸಲಾಗಿದ್ದು, ಮೊದಲನೇ ಹಂತದಲ್ಲಿ 2013ರ ಜನವರಿಯಿಂದ ಜೂನ್ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಲಲಿತ ಕಲೆ, ವಿಜ್ಞಾನ, ಮಾನವಿಕ, ವೈದ್ಯಕೀಯ, ತಾಂತ್ರಿಕ, ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವ ಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆ ಗ್ರಂಥಗಳ ಆಯ್ಕೆಗೆ ಲೇಖಕ, ಪ್ರಕಾಶಕ, ಸಂಸ್ಥೆಗಳು ಹಾಗೂ ವಿತರಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.
32ಕ್ಕಿಂತ ಕಡಿಮೆ ಪುಟಗಳಿರುವ ಪುಸ್ತಕಗಳನ್ನು ತಿರಸ್ಕರಿಸಲಾಗುವುದು. ಶೇ.80ರಷ್ಟು ಕನ್ನಡ ಪುಸ್ತಕಗಳು ಹಾಗೂ ಶೇ.20 ರಷ್ಟು ಆಂಗ್ಲ ಭಾಷೆ ಮತ್ತು ಇತರೆ ಭಾರತೀಯ ಭಾಷೆಗಳ ಪುಸ್ತಕಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಪುಸ್ತಕಗಳನ್ನು ನ.21 ರೊಳಗಾಗಿ ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಕಾಪಿರೈಟ್ ಮಾಡಿಸತಕ್ಕದ್ದು.
ಆಯ್ಕೆಗಾಗಿ ನಿಯಮಿತ ಅರ್ಜಿಯನ್ನು ರಾಜ್ಯದ ಎಲ್ಲಾ ನಗರ, ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ ಪಡೆದು ಸ್ವಲಿಖಿತ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಹಾಗೂ ಅವಶ್ಯಕ ದಾಖಲಾತಿಗಳೊಂದಿಗೆ ನ.30 ರೊಳಗೆ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಅಂಬೇಡ್ಕರ್ ಬೀದಿ, ಬೆಂಗಳೂರು-560 001 ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಖುದ್ದಾಗಿ ರಾಮನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಯನ್ನು ಅಥವಾ ದೂ.080-27275084 ಸಂಪರ್ಕಿಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

