ಪರಭಾಷಾ ನಾಮಫಲಕ ಕಿತ್ತೆಸೆಯುವ ಚಳವಳಿ
ದೊಡ್ಡಬಳ್ಳಾಪುರ: ಕನ್ನಡ ಅನುಷ್ಠಾನದ ಮೂಲೋದ್ದೇಶಗಳಲ್ಲಿ ಒಂದಾದ ವ್ಯಾವಹಾರಿಕ ಕನ್ನಡ ಬಳಕೆ ಮತ್ತು ಜಾರಿಗೆ ಒತ್ತಾಯಿಸಿ ಕನ್ನಡ ನಾಮಫಲಕ ಅಭಿಯಾನವನ್ನು ಇಲ್ಲಿನ ಭುವನೇಶ್ವರಿ ಕನ್ನಡ ಸಂಘ ಹಮ್ಮಿಕೊಂಡಿದೆ. ನ.11ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಸಿದ್ಧಲಿಂಗಯ್ಯ ವೃತ್ತದಿಂದ ಅಭಿಮಾನ ಆರಂಭವಾಗಲಿದ್ದು, ವಿವಿಧ ವಾಣಿಜ್ಯ ಬೀದಿಗಳಲ್ಲಿ ಕಾರ್ಯಕರ್ತರು ಅಭಿಯಾನ ನಡೆಸಲಿದ್ದಾರೆ. ಪರಭಾಷಾ ನಾಮಫಲಕಗಳನ್ನು ತೆರವು ಗೊಳಿಸಿ ತಂದು ಎಲ್ಲ ಪರಭಾಷಾ ನಾಮಫಲಕಗಳನ್ನು ತಾಲೂಕು ಕಚೇರಿ ಮುಂದೆ ಸುರಿದು ಧರಣಿ ನಡೆಸಲಾಗುವುದು.
ಕನ್ನಡ ರಾಜ್ಯೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನ.11ರಂದು ಸೋಮವಾರ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಕಾಲೇಜಿನ ಇಸಿಇ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಎಸ್.ನಾರಪ್ಪ, ಗಾಯಕ ಹಾಡೋನಹಳ್ಳಿ ನಾಗರಾಜ್, ಸಂಸ್ಥೆಯ ಸಿಇಓ ಗಂಗಾಧರಪ್ಪ, ಟ್ರಸ್ಟಿ ರಾಜೇಂದ್ರ ಮತ್ತಿತರರು ಭಾಗವಹಿಸಲಿದ್ದು, ಪ್ರಾಂಶುಪಾಲ ಡಾ.ನಂದಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

