ಆಟದ ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ
ಕ.ಪ್ರ ವಾರ್ತೆ , ಸೂಲಿಬೆಲೆ , ನ.13
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಣಿಕ ಪಾಠಶಾಲೆ ಆವರಣದಲ್ಲಿರುವ ಆಟದ ಮೈಧಾನದಲ್ಲಿ ಉರ್ದು ಪ್ರೌಢಶಾಲೆ ಕೊಠಡಿಗಳನ್ನು ಕಟ್ಟಲು ಮುಂದಾಗಿರುವುದನ್ನು ವಿರೋಧಿಸಿ ಬುಧವಾರ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.
1930ರಲ್ಲಿ ಪ್ರಾರಂಭಗೊಂಡಿರುವ ಕನ್ನಡ ಸರ್ಕಾರಿ ಶಾಲೆ ಆವರಣದ ವಿಸ್ತೀರ್ಣ 1.30 ಗುಂಟೆ. ಇದರಲ್ಲಿ 28 ಕ್ಕೂ ಹೆಚ್ಚು ತರಗತಿ ಕೊಠಡಿಗಳಿದ್ದು, ಕನ್ನಡ ಶಾಲೆಯ ಜೊತೆಗೆ ಉರ್ದು ಹಿರಿಯ ಶಾಲೆ ಕಾರ್ಯನಿರ್ವಹಿಸುತ್ತಿದೆ. ಎರಡು ಶಾಲೆಗಳಿಂದ 450ಕ್ಕೂ ಹೆಚ್ಚು ಮಕ್ಕಳು ಕಲಿಕೆಗೆ ಬರುತ್ತಿದ್ದು, ಇವರಿಗೆ ಆಟ ಮೈದಾನವಾಗಿ ಕೇವಲ 30 ಗುಂಟೆ ಮಾತ್ರವಿದೆ. ಇದೇ ಅಂಗಳದಲ್ಲಿ ಪ್ರತಿವರ್ಷ ನಡೆಯುವ ಹೋಬಳಿ ಮಟ್ಟದ ಕ್ರೀಡಾಕೂಟಕ್ಕಾಗಿ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ಲಸ್ಟರ್ ವ್ಯಾಪ್ತಿಯ 22 ಶಾಲೆಗಳಿಂದ ಬರುತ್ತಾರೆ. ಹೊಸದಾಗಿ ಉರ್ದು ಪ್ರೌಡಶಾಲೆ ಕಟ್ಟಡಗಳು ಮಂಜೂರಾಗಿದ್ದು,ಇವುಗಳ ನಿರ್ಮಾಣಕ್ಕೆ ಅಧಿಕಾರಿಗಳು ಹೊಸ ಸ್ಥಳವನ್ನು ನಿಗದಿ ಮಾಡದೇ ಹಾಲಿ ಮೈದಾನದ ಜಾಗದಲ್ಲಿ ಕಟ್ಟಲು ಹುನ್ನಾರಗಳು ನಡೆಸಿದ್ದು ವಿರೋಧಕ್ಕೆ ಕಾರಣವಾಗಿ ಪ್ರತಿಭಟನೆಗೆ ನಾಂದಿಯಾಯಿತು.
ಧರಣಿ,ರಸ್ತೆ ತಡೆ: ಆಟದ ಮೈದಾನದಲ್ಲಿ ಕಟ್ಟಡ ಕಟ್ಟುವ ಹುನ್ನಾರವನ್ನು ವಿರೋಧಿಸಿ ವೀರ ಮದಕರಿ ಸಂಘ,ಅಂಬೇಡ್ಕರ್ ಸಂಘ, ಎಸ್ಎಫ್ಐ, ಡಿವೈಎಫ್ಐ, ಮೈಡ್ರೀಮ್ ವಿಲೇಜ್ ಫೌಂಡೇಷನ್, ವರ್ಣ ರಂಜಿತ ಕಲಾವಿದರ ಸಂಘ, ಆಜಾದ್ ಯುವಕರ ಸಂಘ ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಸಂಘಟನೆಗಳು ಸ್ವಾತಂತ್ರ್ಯ ಹೋರಾಟಗಾರ ಸೂ.ರಾಮಯ್ಯ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆಕಾರರು ಶಾಲೆ ಮುಂಭಾಗದಲ್ಲಿ ಧರಣಿ ಕುಂತು ಮೈದಾನ ಉಳಿಸುವಂತೆ ಘೋಷಣೆ ಕೂಗಿದರು. ಜಂಗಮಕೋಟೆ, ಹೊಸಕೋಟೆ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.
ಕ್ರಮದ ಭರವಸೆ: ಸ್ಥಳಕ್ಕೆ ಬಂದ ತಹಸೀಲ್ದಾರ್ ಕುಮಾರಸ್ವಾಮಿ, ಬಿಇಓ ಬೈಲಾಂಜಿನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸೂ.ರಂ ರಾಮಯ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮಕ್ಕಳ ಮೈದಾನದಲ್ಲಿ ಆಟದ ಹಕ್ಕನ್ನು ಕಸಿದು ಇನ್ನೊಬ್ಬರಿಗೆ ಅನುಕೂಲ ಮಾಡಲು ಹೊರಟಿದ್ದು ಯಾವ ಶಿಕ್ಷಣದ ನೀತಿ ಮೈದಾನದ ವ್ಯಾಪ್ತಿಯಲ್ಲಿ ಕಟ್ಟಡಗಳಾದರೆ ಮಕ್ಕಳ ದೈಹಿಕ ಮತ್ತು ಭೌತಿಕ ವಿಸಕನ ಹೊಂದಲು ಅಗತ್ಯವಾಗಿರುವ ಆಟೋಟಗಳಿಗೆ ಧಕ್ಕೆಯಾಗುತ್ತದೆ. ಪ್ರೌಢಶಾಲೆಗೆ ಕಡ್ಡಾಯವಾಗಿ 5 ಎಕರೆ ಜಾಗವಿರಬೇಕು ಎಂದರು. ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

