ಬೆಂಗಳೂರು ಗ್ರಾಮಾಂತರ

ಕೃಷಿಕ್ಷೇತ್ರಕ್ಕೆ ನವೀನ ತಂತ್ರಜ್ಞಾನ ಅಗತ್ಯ

Published On :

ಕ.ಪ್ರ.ವಾರ್ತೆ ,   ಕನಕಪುರ  ,  ನ.13.
ಕೃಷಿಕಾರ್ಮಿಕರ ಅಲಭ್ಯತೆಯಿಂದ ಸೊರಗಿರುವ ಕೃಷಿಕ್ಷೇತ್ರಕ್ಕೆ ನವೀನ ತಂತ್ರಜ್ಞಾನ ಹಾಗೂ ಯಾಂತ್ರೀಕರಣಗಳು ಅತ್ಯಗತ್ಯವಾಗಿವೆ ಎಂದು ಕೃಷಿಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಅವರು ಕನಕಪುರದ ಆರ್‌ಇಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ರೈತಕಲ್ಯಾಣ ಕೃಷಿ ಉತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
 ರೈತರು ಸ್ವಾವಲಂಬಿಗಳಾಗಬೇಕಾದರೆ ಬೆಳೆಗೆ ತಕ್ಕ ಸೂಕ್ತ ಬೆಂಬಲ ಬೆಲೆ ದೊರೆಯಬೇಕು, ಇದನ್ನು ಅರಿತಿರುವ ಸರ್ಕಾರ ಒಂದು ಸಾವಿರ ಕೋಟಿ ಮೂಲಧನವನ್ನು ಇಟ್ಟು ಕೃಷಿಬೆಲೆ ಆಯೋಗವನ್ನು ರೂಪಿಸಿ
ಬೆಳೆಗಳಿಗೆ ತಕ್ಕ ಬೆಂಬಲಬೆಲೆ ಸಿಗುವಂತೆ ಮಾಡುತ್ತದೆ. ಹಿಂದಿನ ಸರ್ಕಾರ ರೂಪಿಸಿದಂತೆ ಬೂಟಾಟಿಕೆಯ ಕೃಷಿ ಬಜೆಟ್‌ಮಂಡಿಸದೆ ರೈತರ ಬದುಕಿನಲ್ಲಿ ಪರಿವರ್ತನೆ ತರುವ ಪರಿಣಾಮಕಾರಿ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೃಷ್ಣಭೈರೇಗೌಡ ನುಡಿದರು.
ರೈತರು ಹೆಚ್ಚಿನ ಇಳುವರಿ ಪಡೆಯಲು ನವೀನ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು, ನವೀನ ತಂತ್ರಜ್ಞಾನ ಹಾಗೂ ಉಪಕರಣಗಳ ಬಳಕೆಯಿಂದ ಖಂಡಿತವಾಗಿಯೂ ಹೆಚ್ಚಿನ ಇಳುವರಿ ಪಡೆಯಬಹುದು. ಅನಿಶ್ಚಿತ ಕೃಷಿಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಸರ್ಕಾರ ನಿರ್ಧರಿಸಿದ್ದು ಮಳೆ ಆಧಾರಿತ ಕೃಷಿಗೆ ವಿಶೇಷಯೋಜನೆ ರೂಪಿಸುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಕನಸು ನನಸು: ಅಧ್ಯಕ್ಷತೆ ವಹಿಸಿದ್ದ ಸಂಸದ ಡಿ.ಕೆ.ಸುರೇಶ್‌ಮಾತನಾಡಿ, ಕನಕೋತ್ಸವದಲ್ಲಿ ಕೃಷಿಮೇಳ ನಡೆಸುವ ಮೂಲಕ ರೈತರಿಗೆ ನವೀನ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಒದಗಿಸಿ ಅನುಕೂಲ ಮಾಡಿಕೊಡಬೇಕೆನ್ನುವ ಶಾಸಕ ಡಿ.ಕೆ.ಶಿವಕುಮಾರರ ಕನಸು ಈ ಉತ್ಸವದ ಮೂಲಕ ನನಸಾಗುತ್ತಿದೆ. ಮೇಳದ ಸದುಪಯೋಗವನ್ನು ರೈತರು ಪಡೆದು ತಮ್ಮ ಕೃಷಿಯಲ್ಲಿ ನಾವೀನ್ಯತೆಯನ್ನು ಸಾಧಿಸಿದಾಗ ಮಾತ್ರ ಮೇಳ ಯಶಸ್ಸಾಗುತ್ತದೆ. ಪ್ರತೀವರ್ಷ ನಿರಂತರವಾಗಿ ಕೃಷಿಮೇಳ ನಡೆಸುವ ಇಚ್ಛೆಯಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಮಾಜಿ  ಸದಸ್ಯ ಎಸ್.ರವಿ, ರಘುನಂದನ್ ರಾಮಣ್ಣ, ಕೃಷಿಮೇಳದ ಸಂಚಾಲಕ ಹಾಗೂ ಜಿಪಂಸದಸ್ಯ ಇಕ್ಬಾಲ್ ಹುಸೇನ್, ವೆಂಕಟೇಶಯ್ಯ, ತಾಪಂ ಅಧ್ಯಕ್ಷೆ
ನಾಗರತ್ನ, ಮಾಜಿ ಅಧ್ಯಕ್ಷ ಪುರುಷೋತ್ತಮ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್, ಕೃಷಿ ಆಯುಕ್ತ ಧರ್ಮರಾಜ್, ಕೃಷಿ ವಿವಿ ಕುಲಪತಿ ಡಾ.ನಾರಾಯಣಗೌಡ, ಮಾಜಿ ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಆರ್‌ಇಎಸ್ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ, ಉಪಾಧ್ಯಕ್ಷ ಲಕ್ಷ್ಮಣ್, ಹೊನ್ನಿಗನಹಳ್ಳಿ ಶ್ರೀಕಂಠು, ರಾಮಣ್ಣ ಆಗಮಿಸಿದ್ದರು. ರಾಮನಗರ ನೂತನ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಸ್ವಾಗತಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ. ನಾಯಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.