ಬೆಂಗಳೂರು ಗ್ರಾಮಾಂತರ

'ಮಹಿಳಾ ಸಂಘಟನೆಯಿಂದ ಸಮಾಜದ ಏಳಿಗೆ ಸಾಧ್ಯ'

Published On :

ಆನೇಕಲ್ಲು: ರಾಜ್ಯದಲ್ಲಿ 3.7 ಲಕ್ಷ ವಿಶ್ವಕರ್ಮ ಬಂಧುಗಳಿದ್ದು ಸರ್ಕಾರವು ಎಲ್ಲ ರೀತಿಯ ರಾಜಕೀಯ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ನೀಡಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ  ಕೋರಿದ್ದಾರೆ. ಅವರು ತಾಲೂಕಿನ ಕಿತ್ತಿಗಾನಹಳ್ಳಿಯಲ್ಲಿ ನಡೆದ ವಿಶ್ವಕರ್ಮ ಮಹಿಳಾ  ಮಹಿಳಾ ಸಮಾವೇಶದಲ್ಲಿ ಸಾವಿರಾರು ಮಹಿಳಾ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿ ಸರ್ಕಾರವು ಮಹಿಳೆಯರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಆರೋಗ್ಯ, ಶಿಕ್ಷಣ ಪಡೆಯುವ ಮೂಲಕ ಯೋಜನೆಗಳ ಪೂರ್ಣ ಪ್ರಮಾಣದ ಸದುಪಯೋಗ ಪಡೆಯಬೇಕೆಂದರು. ಇಂದು ಯಾವುದೇ ಸಂಘ ಸಂಸ್ಥೆ ಮುನ್ನಡೆಸಬೇಕಾದಲ್ಲಿ ಮಹಿಳೆಯರ ಪಾತ್ರ ಗುರುತರವಾಗಿದ್ದು ಸಾಮಾಜಿಕ ಜವಾಬ್ದಾರಿಯಿಂದ ಮುಂದೆ ಬರಬೇಕೆಂದು ಕೋರಿದರು.  ರಾಜ್ಯ ಮಟ್ಟದಲ್ಲಿ ಮಹಿಳಾ ಸಮ್ಮೇಳನವನ್ನು ನಡೆಸಲು ಮಹಾಸಭಾ ಉದ್ದೇಶಿಸಿದ್ದು ರಾಜ್ಯದ ಪ್ರತಿ ತಾಲೂಕಿನಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಆನೇಕಲಲ್ತಾಲೂಕಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದು ರಾಜ್ಯದ ಇತರ ತಾಲೂಕಿಗೆ ಮಾದರಿಯಾಗಿದೆ. ಮಹಿಳಾ ಸಂಘಟನೆಗಾಗಿ ಎಲ್ಲರೂ ಅಮೂಲ್ಯ ಸಹಕಾರ ನೀಡಬೇಕೆಂದು ಕೋರಿದರು. ಶಾಸಕ ಬಿ. ಶಿವಣ್ಣ ಮಾತನಾಡಿ ವಿಶ್ವಕರ್ಮ ಬಂಧುಗಳು ಪಂಚಶೀಲ ಕರ್ಮಗಳ ಕಲಿಕೆ ಮೂಲಕ ದೇಶದ ಸಂಸ್ಕಾರ ಮತ್ತು ಸಂಪ್ರದಾಯವನ್ನು ಜಗತ್ತಿಗೆ ತೋರಿಸಿದ ವಿಶಿಷ್‌ಠ ಪಂಗಡವಾಗಿದೆ. ರಾಜ್ಯ ಸರ್ಕಾರ ಹಾಗೂ ಶಾಸಕರ ನಿಧಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ರಾಜ್ಯ ಮುಖಂಡರಾದ ಆನೇಕಲ್ ಶ್ರೀನಿವಾಸಾಚಾರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾಧ್ಯಕ್ಷೆ ಮಾಲಾ, ಸುಬ್ರಹ್ಮಣ್ಯಾಚಾರ್, ಅತ್ತಿಬೆಲೆ ರಮೇಶ್, ಗಂಗಾಧರ್, ಜಯಶಂಕರ್ ಇದ್ದರು.
ಅಂತರ ಕಾಲೇಜು ಮಟ್ಟದಚರ್ಚಾ ಸ್ಪರ್ಧೆ
ಮಾಗಡಿ: ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆಯ ಜಿಲ್ಲಾ ಜನಾಂದೋಲನಾ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ.15 ರಂದು ಬೆಳಿಗ್ಗೆ 10 ಗಂಟೆಗೆ ಅಂತರ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.  ಚರ್ಚಾ ಸ್ಪರ್ಧೆಗೆ ತಾಲೂಕಿನಲ್ಲಿರುವ ಕಾಲೇಜಿನ 6  ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವ ಅವಕಾಶವಿದೆ. ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳು ಹೆಸರನ್ನು ಸ್ಪರ್ಧೆ ನಡೆಯುವ ಕಾಲೇಜಿನಲ್ಲಿ ಅರ್ಧ ಗಂಟೆ ಮೊದಲು ನೋಂದಾಯಿಸಿಕೊಳ್ಳಬೇಕು. ಚರ್ಚೆಗೆ ಕೇವಲ 5 ನಿಮಿಷಗಳು ಮಾತ್ರ ಇರುತ್ತದೆ. ಚರ್ಚಾ ವಿಷಯ... ಶಿಕ್ಷಣ ವ್ಯಾಪಾರೀಕಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂಬ ವಿಷಯವಾಗಿ  ಚರ್ಚೆ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾಗರತ್ನ ಬಜೆಗೆರೆ ಮೊ.9449166224., ಕೆ. ಸವಿತಾ ಮೊ.918971678409 ಸಂಪರ್ಕಿಸಬಹುದು.
ಶಾಲಾ ಆಟದ ಮೈದಾನ ಕಾಮಗಾರಿಗೆ ಇಂದು ಚಾಲನೆ
ದೊಡ್ಡಬಳ್ಳಾಪುರ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ, ದೊಡ್‌ಡಬಳ್ಳಾಪುರ ತಾಲೂಕು ಪಂಚಾಯಿತಿ ಮತ್ತು ಬಾಶೆಟ್ಟಿಹಳ್ಳಿ ಗ್ರಾ.ಪಂ ನೇತೃತ್ವದಲ್ಲಿ ನರೇಗಾ ಯೋಜನೆಯಡಿ ಶಾಲಾ ಆಟಕದ ಮೈದಾನ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನ.14ರ ಗುರುವಾರ ಬೆಳ್ಗಗೆ 11 ಗಂಟೆಗೆ ಕಸವನಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸಲಿದ್ದು, ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಕೃಷಿ ಸಚಿವ ಕೃಷ್ಣಬೈರೇಗೌಡ, ಕ್ರೀಡಾ ಸಚಿವ ಅಭಯಚಂದ್ರಜೈನ್, ಜಿ.ಪಂ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಶಾಸಕ ಪಿಳ್ಳಮುನಿಶಾಮಪ್ಪ, ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ಪುಟ್ಟಣ್ಣ, ಇ.ಕೃಷ್ಣಪ್ಪ, ಜಿ.ಪಂ ಉಪಾಧ್ಯಕ್ಷ ಹನುಮಂತಗೌಡ, ತಾ.ಪಂ ಪ್ರಭಾರ ಅಧ್ಯಕ್ಷೆ ರಮಾದೇವಿ, ಗ್ರಾ.ಪಂ ಅಧ್ಯಕ್ಷ ಗೋವಿಂದಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
'ಭೂ ಮಾಫಿಯಾ ವಿರುದ್ಧ ಕ್ರಮ'
ನೆಲಮಂಗಲ: ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಭೂ ಮಾಫಿಯಾಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.
ಅವರು ಬುಧವಾರ ತಾಲೂಕಿನ  ಬಿನ್ನಮಂಗಲ ಹಾಗೂ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಜಮೀನುಗಳು ಒತ್ತುವರಿಯಾಗಿರುವುದನ್ನು ಸ್ಥಳ ಪರಿಶೀಲಿಸಿ ಶೀಘ್ರವೇ ಜೆ.ಸಿ.ಬಿ.ಮೂಲಕ ತೆರವುಗೊಳಿಸುವಂತೆ ತಹಸೀಲ್ದಾರ್ ವಿ.ರಾಜೇಂದ್ರ ಅವರಿಗೆ ಆದೇಶಿಸಿದರು. ಪ್ರಭಾವಿ ವ್ಯಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ದಂದೆ ನಡೆಸುವವರು ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಗೋಮಾಳ ಕೆರೆಗಳನ್ನು ಒತ್ತುವರಿ ಮಾಡಿರುವುದನ್ನು ಪಟ್ಟಿ ಮಾಡಿ ಜಮೀನನ್ನು ವಶಕ್ಕೆ ಪಡೆದು ಕೊಳ್ಳುತ್ತೇವೆ ಎಂದರು.
ತಹಸೀಲ್ದಾರ್ ವಿ.ರಾಜೇಂದ್ರ, ರಾಜಸ್ವ ನಿರೀಕ್ಷಕ ನಂಜಪ್ಪ, ತಾಲೂಕು ಸರ್ವೆಯರ್ ಭದ್ರೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಉಚಿತ ತರಬೇತಿ
ರಾಮನಗರ: ಬಿಡದಿ ಬಳಿಯ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭ ಕಲೆಯಲ್ಲಿ(ಟೆರ್ರಾಕೋಟಾ) 6 ತಿಂಗಳ ಅವಧಿಯ ಉಚಿತ ತರಬೇತಿ ನೀಡಲಿದೆ.
ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ಉಪಕರಣಗಳು, ಕಚ್ಚಾ ಸಾಮಗ್ರಿಗಳನ್ನು ಒದಗಿಸಲಾಗುವುದು. ತರಬೇತಿ ಅಂಗವಾಗಿ ಪ್ರವಾಸ ಏರ್ಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ಅವರ ಮೊ.9900158885 ಸಂಪರ್ಕಿಸಬಹುದು.
ಕಂಬಾರಗೆ ಅಭಿನಂದನಾ ಸಮಾರಂಭ
ಕ.ಪ್ರ.ವಾರ್ತೆ  ರಾಮನಗರ ನ.13
ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ನಗರಸಭೆ ಸಂಯುಕ್ತಾಶ್ರಯದಲ್ಲಿ ನ.16ರಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನಾ ಸಮಾರಂಭ, ಪುಸ್ತಕಗಳ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 9ಕ್ಕೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಚಂದ್ರಶೇಖರ್ ಮೆರವಣಿಗೆಗೆ ಚಾಲನೆ ನೀಡುವರು.
ಬೆಳಗ್ಗೆ 10.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿ.ಪಂ.ಅಧ್ಯಕ್ಷ ಎಚ್.ಸಿ.ರಾಜು ಉದ್ಘಾಟಿಸುವರು. ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಡಾ.ಮಧುಸೂಧನ ಜೋಷಿ ಭಾಗವಹಿಸುವರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.