ಬೆಂಗಳೂರು ಗ್ರಾಮಾಂತರ

ಮಕ್ಕಳಲ್ಲಿ ಸಾಂಸ್ಕೃತಿಕ ಕಲೆ ನಿರಂತರವಾಗಿ ಸಾಗಲಿ: ನಟರಾಜ್

Published On :

ನೆಲಮಂಗಲ: ಮಕ್ಕಳಲ್ಲಿ ಕನ್ನಡ ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಸಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಪಟ್ಟಣದಲ್ಲಿ ರುದ್ರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಕನ್ನಡ ಗೆಳೆಯರ ಬಳಗದ 31ನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯಲ್ಲಿ ಮಾತನಾಡಿ, ಗುರು-ಹಿರಿಯರಲ್ಲಿ ಅಪಾರವಾದ ಶ್ರದ್ಧಾಭಕ್ತಿ ಹೊಂದಿದವರು ಸಮಾಜದಲ್ಲಿ ಮುಂದಿನ ಉತ್ತಮ ಭವಿಷ್ಯವೊಂದಿ ಕನ್ನಡ ನಾಡಿನ ಕಣ್ಮಣಿಗಳಾಗುತ್ತಾರೆ. ಪ್ರತಿ ಮನೆ ಮನದಲ್ಲಿ ಕನ್ನಡ ಜ್ಯೋತಿ ಬೆಳಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಸಚ್ಚಿದಾನಂದಮೂರ್ತಿ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಗಳಲ್ಲಿ ಆಯ್ದ ಮಕ್ಕಳಿಂದ ಭಕ್ತಿಗೀತೆ, ಭಾವಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನವನ್ನು ಕಾರ್ಯದರ್ಶಿ ಹೊ. ಪುಟ್ಟರಾಜು ನೀಡಿದರು. ಸುಪ್ರಸಿದ್ಧ ಗಮಕ ಕಲಾವಿದ ವಿದ್ವಾನ್ ಎ.ವಿ. ನಾರಾಯಣರಾವ್ ಅವರಿಗೆ ಗಮಕ ಕಲಾನಿಧಿ ಎಂಬ ಬಿರುದನ್ನು ಕನ್ನಡ ಗೆಳೆಯರ ಬಳಗ ನೀಡಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಸರಸ್ವತಿ ಭೂಷಣ್, ಸಂಸ್ಥೆ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಉಪಾಧ್ಯಕ್ಷ ವಿಜೇಂದ್ರರಾವ್, ಸಂಸ್ಥೆ ಸಹ ಕಾರ್ಯದರ್ಶಿ ರಾಮಮೋಹನ್, ಖಜಾಂಚಿ ಎಂ.ವಿ. ರಾಘವೇಂದ್ರರಾವ್ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷರಾಗಿ ಸಿ.ಮುನಿರಾಜು
ದೇವನಹಳ್ಳಿ: ದೇವನಹಳ್ಳಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನೆಯನ್ನು ಅ.25 ರಂದು  ಅಧಿಕೃತವಾಗಿ ನೋಂದಣಿ ಮಾಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಮುನಿರಾಜು ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಕಾಗೋಷ್ಠಿಯಲ್ಲಿ  ತಿಳಿಸಿದರು.  ಹಿಂದುಳಿದ ವರ್ಗಗಳಲ್ಲಿ ಸುಮಾರು 102 ಜಾತಿಗಳಿದ್ದು ದೇವನಹಳ್ಳಿ ತಾಲೂಕಿನಲ್ಲಿ ಪ್ರಮುಖವಾಗಿ ಗೊಲ್ಲರು, ಕುರುಬರು, ತಿಗಳರು, ಭಜಂತ್ರಿ, ತೊಗಟವೀರರು, ಕುಂಬಾರರು, ಈಡಿಗರು, ಗಾಣಿಗರು, ವಿಶ್ವಕರ್ಮ,  ದೇವಾಂಗ ಹಾಗೂ ಇತರೆಯವರು ಸೇರಿ ಒಟ್ಟು 13 ಜಾತಿಗಳಿಗೆ ಸೇರಿದವರು ಪ್ರಮುಖವಾಗಿ ವಾಸಿಸುತ್ತಿದ್ದು ಈ ಎಲ್ಲ ಜನಾಂಗದವರನ್ನು ಸಂಘಟಿಸಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಡುವುದು ಮತ್ತು ಸಂಘಟನೆಗೆ ಹೆಚ್ಚು ಒತ್ತುಕೊಡಲಾಗುವುದು ಎಂದು ಸಿ.ಮುನಿರಾಜು ತಿಳಿಸಿದರು. ಬೂದಿಗೆರೆ ಕೃಷ್ಣಪ್ಪ - ಗೌರವಾಧ್ಯಕ್ಷ, ಸಿ.ಮುನಿರಾಜು -ಅಧ್ಯಕ್ಷ,ಜಿ.ರಂಗಸ್ವಾಮಿ, ಆಂಜಿನಪ್ಪ, ಕುಮಾರಸ್ವಾಮಿ, ರಾಮಮೂರ್ತಿ, ಎನ್.ಶಶಿಕುಮಾರ್ -ಉಪಾಧ್ಯಕ್ಷರುಗಳು, ದಾಸಪ್ಪ -ಪ್ರಧಾನ ಕಾರ್ಯದರ್ಶಿ, ಆರ್.ಹನುಮಂತಪ್ಪ- ಸಂಘಟನಾ ಕಾರ್ಯದರ್ಶಿ, ಡಿ.ವಿ.ಸಿ. ಕುಮಾರ್- ಖಜಾಂಚಿ, ವಿ.ಎಂ.ರಾಮಕೃಷ್ಣಪ್ಪ- ಲೆಕ್ಕ ಪರಿಶೋಧಕರು, ಎಂ.ಪ್ರಕಾಶ್ - ಕಾನೂನು ಸಲಹೆಗಾರರು ಹಾಗೂ ರಾಘವೇಂದ್ರ ನಿದೇಶಕರಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.