ನಿವೇಶನ ದುರ್ಬಳಕೆ ತಡೆಗೆ ಆಗ್ರಹ
ಮಾಗಡಿ: ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಿಟ್ಟ ನಿವೇಶನದಲ್ಲಿ ಹಾಲಿನ ಡೈರಿ ಮತ್ತು ರಾಜೀವ್ಗಾಂಧಿ ಭವನ ನಿರ್ಮಿಸಲು ಮುಂದಾಗಿರುವುದನ್ನು ಪಂಚಾಯ್ತಿ ಕೈಬಿಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಬಿ.ಜೆ. ನರಸಿಂಹಮೂರ್ತಿ ಎಚ್ಚರಿಸಿದ್ದಾರೆ.
ತಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ಡಾ. ವೆಂಕಟೇಶ್ಗೆ ಬಿ.ಜೆ. ನರಸಿಂಹಮೂರ್ತಿ ಈ ವಿಷಯ ಪ್ರಸ್ತಾಪಿಸಿ ನಿವೇಶನ ದುರ್ಬಳಕೆಯಾಗದಂತೆ ತಡೆಯುವಂತೆ ಸಿಇಒ ಅವರಲ್ಲಿ ಮನವಿ ಮಾಡಿದರು.
ತಾಲೂಕಿನ ಬೆಳಗುಂಬ ಗ್ರಾಮದಲ್ಲಿರುವ ಹರಿಜನ ಕಾಲೋನಿಯಲ್ಲಿ ತಗ್ಗೀಕುಪ್ಪೆ ಪಂಚಾಯ್ತಿ ವತಿಯಿಂದ ಸೈಟ್ ನಂ.31ನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ನಿವೇಶನವನ್ನು ನೀಡಿದ್ದು, ದಾಖಲಾತಿ ಸಹ ಮಾಡಿಕೊಡಲಾಗಿತ್ತು. ದುರಂತವೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಟ್ಟ ನಿವೇಶನದಲ್ಲಿ ಹಾಲಿನ ಡೈರಿ ಮತ್ತು ರಾಜೀವ್ಗಾಂಧಿ ಭವನ ನಿರ್ಮಿಸಲು ಮುಂದಾಗಿರುವ ಗ್ರಾಪಂ ಕ್ರಮ ಖಂಡನೀಯವಾದುದು. ಒಂದು ವೇಳೆ ಡೈರಿ ಮತ್ತು ರಾಜೀವ್ ಗಾಂಧಿ ಭವನ ನಿರ್ಮಿಸಲು ಮುಂದಾದರೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳುವುದಾಗಿ ಬಿ.ಜೆ. ನರಸಿಂಹಮೂರ್ತಿ ತಿಳಿಸಿದರು.
ಬೆಳಗುಂಬ ಗ್ರಾಮದಲ್ಲಿರುವ ಹರಿಜನ ಕಾಲೋನಿಯ ನಿವೇಶನವನ್ನು ಕಬಳಿಸುವ ಮತ್ತು ದಲಿತರನ್ನು ಒಕ್ಕಲೆಬ್ಬಿಸುವ ಮೂಲಕ ಅಸ್ಪಶ್ಯತೆಗೆ ಇಂಬು ನೀಡುವ ಹುನ್ನಾರವಾಗಿದೆ. ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಆಲೋಚನೆ ಸಹ ಮಾಡಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ಮತ್ತು ಸಿಇಒ ಅವರಿಗೆ ಮನವರಿಕೆ ಮಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕಾರ್ಯಾಧ್ಯಕ್ಷ ಜಿ. ಪ್ರಕಾಶ್, ನರಸಿಂಹಯ್ಯ, ಗೋಪಾಲ್, ಬಿ.ವಿ. ಶ್ರೀನಿವಾಸಮಮೂರ್ತಿ, ಓಬಳಯ್ಯ, ಉಮೇಶ್, ಮಂಜುನಾಥ್, ಶ್ರೀನಿವಾಸಮೂರ್ತಿ, ಗೋವಿಂದರಾಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

