ಬೆಂಗಳೂರು ಗ್ರಾಮಾಂತರ

ವಿಕಲಚೇತನರಿಗೆ ಅರಿವು ಕಾರ್ಯಾಗಾರ

Published On :

ಮಾಗಡಿ: ವಿಕಲಚೇತನರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಪ್ರೋತ್ಸಾಹಿಸಬೇಕಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ನುಡಿದರು. ಇಲ್ಲಿನ ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿ, ಕೆಂಪೇಗೌಡ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಇವರು ಸಂಯುಕ್ತಾಶ್ರಯಲ್ಲಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ. ಧನಂಜಯ ಮಾತನಾಡಿದರು. ತಾಲೂಕು ಅಂಗವಿಕಲರ ಸಂಘದ ಸಂಚಾಲಕ ಅಸ್ಲಂಪಾಷಾ ಮಾತನಾಡಿರು. ಅಂಗವಿಕಲ ಕಲ್ಯಾಣಾಧಿಕಾರಿ ರಾಮಚಂದ್ರಯ್ಯ ಸರ್ಕಾರದ ಯೋಜನೆಗಳು ಅದರ ಮಹತ್ವದ ಬಗ್ಗೆ ವಿವರಿಸಿದರು. ಚೈತನ್ಯ ಪುರೋಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವಣ್ಣ, ಭಾರತಿ ಮಾತನಾಡಿದರು. ಚಿಕ್ಕಮುದಿಗೆರೆ ಗ್ರಾ.ಪಂ. ಅಧ್ಯಕ್ಷ ಜೆ.ಆರ್. ರವೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಅಂಗವಿಕಲರಿಗೆ ಎರಡು ಮತ್ತು ಮೂರು ಚಕ್ರದ ಸೈಕಲ್‌ಗಳನ್ನು ರವೀಶ್ ವಿತರಿಸಿದರು. ಉಪಾಧ್ಯಕ್ಷೆ ಚಿಕ್ಕಮ್ಮ, ತಾ.ಪಂ. ಮಾಜಿ ಅಧ್ಯಕ್ಷ ಜಿ.ವಿ. ರಾಮಣ್ಣ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಸದಸ್ಯೆ ವೇದಾವತಿ ನಾಗರಾಜು,ನಿಂಗಣ್ಣ, ಮುನಿಯಪ್ಪ, ಚಲುವಯ್ಯ, ಪಿಡಿಒ ಸವಿತಾ, ಕಾರ್ಯದರ್ಶಿ ರಮೇಶ್, ನೂರಾರು ಅಂಗವಿಕಲರು ಭಾಗವಹಿಸಿದ್ದರು.

ಶರಣರ ಕಾಯಕ ತತ್ವ ಎಲ್ಲರಿಗೂ ಆದರ್ಶವಾಗಲಿ
ನೆಲಮಂಗಲ: ಶರಣರ ಕಾಯಕ ತತ್ವ  ಸಮಾಜದಲ್ಲಿ ನಮಗೆಲ್ಲರಿಗೂ ಆದರ್ಶವಾಗಬೇಕಿದೆ ಎಂದು ಮಹಾರಾಷ್ಟ್ರ ವಿಶ್ವ ವಿದ್ಯಾಲಯದ ಪ್ರೊ.ಶಂಕರೇಗೌಡ ಬೀರಾದಾರ ಹೇಳಿದರು ಅವರು ಸೋಮವಾರ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಶರಣ ಸಂಘಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಶರಣರ ತತ್ವಗಳ ಅರಿವು ಮೂಡಿಸಿ ಅವರ ಜೀವನದಲ್ಲಿ ಸಮಾನತೆ ಸಹಬಾಳ್ವೆ ಕರ್ತವ್ಯ ಪ್ರಜ್ಞೆ ಮೂಡಿಸಿದಾಗ ಮಾತ್ರ ಮುಂದಿನ ಯುವ ಜನಾಂಗ ಉತ್ತಮ ಪ್ರಜೆಗಳಾಗಲು ಸಹಕಾರಿಯಾಗುತ್ತದೆ ಎಂದು ವನಕಲ್ಲು ಮಲ್ಲೇಶ್ವರದ ಬಸವರಮಾನಂದ ಸ್ವಾಮೀಜಿ ತಿಳಿಸಿದರು.  ನಿಡವಂದ ಶಾಖೆಯ ಕರವೆ ಅಧ್ಯಕ್ಷ ಸಂತೋಷ್ ಕುಮಾರ್, ರಮೇಶ ಸೇವಾ ಸಮಿತಿಯ ಅಧ್ಯಕ್ಷ ರವಿಕುಮಾರ್, ಕಿಸಾನ್ ಸಂಘದ ಅರುಣ್‌ಕುಮಾರ್, ಗಂಗಾಧರ್, ಸಮಾಜ ಸೇವಕರಾದ ರಾಮಣ್ಣ, ಬಸವರಾಜು ಹಾಗೂ ವನಕಲ್ಲು ಕ್ಷೇತ್ರದ ಅಧ್ಯಕ್ಷ ಚನ್ನಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.