ಬೆಂಗಳೂರು ಗ್ರಾಮಾಂತರ

ನಂದಗುಡಿಯಲ್ಲಿ ವ್ಯಾಪಾರಿ ಕತ್ತು ಸೀಳಿ ಬರ್ಬರ ಕೊಲೆ

Published On :

ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ವ್ಯಾಪಾರಿಯೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಕೊಲೆಯಾದ ವ್ಯಾಪಾರಿ ನಾಗರಾಜಪ್ಪ (48) ಎಂದು ಪೊಲೀಸರು ತಿಳಿಸಿದ್ದಾರೆ.
 ನಂದಗುಡಿ ಬಸ್ ನಿಲ್ದಾಣದಲ್ಲಿ ಚಿಲ್ಲರೆ ಅಂಗಡಿಯಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ನಾಗರಾಜಪ್ಪ,ಬುಧವಾರ ಸಂಜೆ ಮನೆಯಿಂದ ಹೊರ ಹೋದವನು ಗುರುವಾರ ಬೆಳಿಗ್ಗೆ ನಂದಗುಡಿಯ ಗ್ರೀನ್ ವ್ಯಾಲಿ ಶಾಲೆ ಹಿಂಭಾಗದಲ್ಲಿರುವ ಮುಳ್ಳಿನ ಪೊದೆಗಳಲ್ಲಿ  ಶವವಾಗಿ ಪತ್ತೆಯಾಗಿದ್ದಾನೆ. ರಾತ್ರಿ 8 ಗಂಟೆ ಸುಮಾರಿಗೆ ಈತ ಮೊಬೈಲ್ ರಿಂಗಣಿಸಿದ್ದು, ರಾತ್ರಿ 10 ಗಂಟೆ ನಂತರ ಸ್ವೀಚ್ ಆಫ್ ಆಗಿದೆ. ಈ ವೇಳೆ ಕೊಲೆಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೊಲೆಯಾದ ನಾಗರಾಜಪ್ಪ ಇಸ್ಪೀಟ್ ಆಟದಲ್ಲಿ ಆಸಕ್ತಿಹೊಂದಿದ್ದ ಎನ್ನಲಾಗಿದ್ದು, ಸಣ್ಣಪುಟ್ಟ ಹಣಕಾಸು ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಕೊಲೆಯಾದ ಸ್ಥಳ ಮುಳ್ಳಿನ
ಪೊದೆಯಿಂದ ಕೂಡಿದ್ದು, ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣದಂತಿದೆ. ಯುಗಾದಿ ಹಬ್ಬ ಕಳೆದು ಮೂರು ದಿನಗಳಾದರೂ ನಾಗರಾಜುವಿಗೆ ಜೂಜಾಟದ ಮೋಹವಿದ್ದ ಕಾರಣ ಆಟವಾಡಲು ಬಂದಾಗ ಈ ಕೊಲೆ ನಡೆದಿರುವ ಅನುಮಾನವನ್ನು ಮೃತರ ಸಂಬಂಧಿಕರು ವ್ಯಕ್ತಪಡಿಸಿದ್ದಾರೆ.
ಕೊಲೆ ನಡೆದ ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್ ಭಾನೋಟ್, ಸಿಪಿಐ ತಿಮ್ಮಯ್ಯ, ಪಿಎಸ್ಐ ಪ್ರಕಾಶ್, ಹೊಸಕೋಟೆ ಪಿಎಸ್ಐ ಬಾಲಾಜಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.