ಮಹಿಳೆಯರು ದಕ್ಷತೆ ಪ್ರಚುರಪಡಿಸಲಿ
ತುಮಕೂರು: ಮಹಿಳೆಯರು ಸಾಮರ್ಥ್ಯ, ದಕ್ಷತೆಯನ್ನು ಪ್ರಚುರಪಡಿಸಬೇಕು ಎಂದು ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ ಕರೆ ನೀಡಿದರು.
ಅವರು ತುಮಕೂರಿನ ಎಂಜಿ ರಸ್ತೆಯ ಮಹಿಳಾ ಸಮಾಜದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಎಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸುವ ಮಾನಸಿಕ ದಾರ್ಢ್ಯ ಹೆಣ್ಣು ಮಕ್ಕಳಿಗಿದೆ. ಆದರೂ ಹಲವು ರೀತಿಯ ಶೋಷಣೆಗೊಳಗಾಗುತ್ತಲೇ ಇದ್ದಾರೆ. ಮಹಿಳೆಯರ ಮೂಲಭೂತ ಗುಣಗಳಾದ ವಾತ್ಸಲ್ಯ ಸಹನೆ, ಮಮತೆಗಳ ಜತೆ ಉತ್ತಮ ಶಿಕ್ಷಣ, ತರಬೇತಿ ಪಡೆದು ಸ್ವಾವಲಂಬಿಯಾಗಿ, ಸಾಮರ್ಥ್ಯ, ದಕ್ಷತೆ ತೋರಿಸುವಂತಾಗಬೇಕು ಎಂದರು.
ಸಮಾನ ಅವಕಾಶಗಳಿಗಾಗಿ ಹಕ್ಕೊತ್ತಾಯ ಮಾಡುವ ಈ ಮಹಿಳಾ ದಿನದಂದು, ಪ್ರತಿಯೊಬ್ಬ ಮಹಿಳೆಯೂ ಜಾಗೃತಳಾಗಿ, ದಿಟ್ಟ ಹೆಜ್ಜೆಯನ್ನಿಡುವಂತಾಗಲಿ ಎಂದರು.
ಆಶಯ ನುಡಿಗಳನ್ನಾಡಿದ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ಈ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವಸಂಸ್ಥೆ ನೀಡಿರುವ ಘೋಷವಾಕ್ಯ ಪರಿವರ್ತನೆಗಾಗಿ ಪ್ರೇರಣೆಯ ವ್ಯಾಖ್ಯಾನ ಮಾಡಿ, ಸಮಾಜ ಹೆಣ್ಣನ್ನು ನೋಡುತ್ತಿರುವ ದೃಷ್ಟಿ ಬದಲಾಗಬೇಕು. ಮಹಿಳೆಯ ಸಾಮರ್ಥ್ಯಕ್ಕೆ ತಕ್ಕ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ ಎಂದು ಪ್ರತಿಪಾದಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಮಾಜದಲ್ಲಿ 25 ಕ್ಕೂ ಹೆಚ್ಚು ವರ್ಷ ಶಿಶುವಿವಾರ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಪ್ರಮೀಳಮ್ಮ ಅನಂತಾಚಾರ್ಯಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ರಮಾರಘು, ಖಜಾಂಚಿ ಗಿರಿಜಾ ಸುರೇಶ್ ಅವರನ್ನು ಅಭಿನಂದಿಸಲಾಯಿತು. ಸುಭಾಷಿಣಿ ಆರ್. ಕುಮಾರ್ ಅಭಿನಂದನಾ ನುಡಿಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಟಿ.ಎನ್. ಶೀಲವತಿ ಮಾತನಾಡಿ, ವ್ಯವಸ್ಥಿತ ಸಮಾಜದ ಎರಡು ಕಣ್ಣುಗಳು ಸ್ತ್ರೀ-ಪುರುಷ. ಯಾರು ಹೆಚ್ಚಲ್ಲ, ಕಡಿಮೆಯಲ್ಲ. ಸರಿ ಸಮಾನ ಅವಕಾಶಗಳು ಈರ್ವರಿಗೂ ದೊರೆಯಬೇಕು. ಚಿಕ್ಕಂದಿನಿಂದಲೇ ಮಾತೆಯರು ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸರಿ ಸಮಾವಾಗಿ ಕಾಣಬೇಕು. ಬೆಳೆಸಬೇಕು ಎಂದು ಕರೆ ನೀಡಿದರು.
ಟ್ರಸ್ಟ್ನ ಕಾರ್ಯದರ್ಶಿ ಸುಭಾಷಿಣಿ ಆರ್. ಕುಮಾರ್ ಸ್ವಾಗತಿಸಿ, ಸಂಧ್ಯಾ ರವಿಶಂಕರ್ ಪ್ರಾರ್ಥಿಸಿ, ಕಾರ್ಯದರ್ಶಿ ಉಷಾ ಅನಂತರಾಮಯ್ಯ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

