ಎತ್ತಿನಹೊಳೆ; ಮೊಯ್ಲಿ ಸುಳ್ಳಿನ ಕಂತೆ
ವಿಜಯಪುರ: ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಸಿಗುವುದು ಸುಳ್ಳಿನ ವಿಚಾರ ಇದರ ಬಗ್ಗೆ ಸರ್ವ ಪಕ್ಷ ಸಭೆ ನಡೆದಿಲ್ಲ. ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ವೀರಪ್ಪಮೊಯ್ಲಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಇವರು ಇಲ್ಲಿನ ಟೌನ್ಹಾಲ್ ವೃತ್ತದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಮೇಕೆದಾಟುವಿನ ಬಳಿ ನೀರು ಸಂಗ್ರಹಿಸಿ ಜಲಾಶಯ ನಿರ್ಮಿಸಿ ಇಲ್ಲಿನಿಂದ ಗುರುತ್ವಾಕರ್ಷಣ ಬಲದಿಂದ ಬಯಲುಸೀಮೆಗೆ ನೀರು ನೀಡಬಹುದಾಗಿದೆ. ಇದರ ಬಗ್ಗೆ ಮಾತನಾಡಲು ರಾಜ್ಯದ ಮುಖ್ಯಮಂತ್ರಿ ಸಿದ್ಧರಿಲ್ಲ ಎಂದು ಗುಡುಗಿದರು. ಇಲ್ಲಿ ಜಲಾಶಯ ನಿರ್ಮಿಸಲು ಯಾರ ಅನುಮತಿ ಬೇಕಿಲ್ಲ ರಾಜ್ಯದ ಹಣಕಾಸಿನಲ್ಲಿ ನಿರ್ಮಿಸಬಹುದಾಗಿದೆ ಎಂದು ವಿವರಿಸಿದರು. ತಮ್ಮ 20 ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಮಾಡಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಜೆಡಿಎಸ್ 13ರಿಂದ14 ಸ್ಥಾನ ಗೆಲ್ಲಿಸಿಕೊಟ್ಟಲ್ಲಿ ಮತ್ತೆ ನಿಮ್ಮೆಲ್ಲ ಮಣ್ಣಿನ ಮಗ ದೇವೇಗೌಡರು ದೇಶದ ಪ್ರಧಾನಿಯಾಗುವ ಸಂಭವವಿದೆ ಎಂದು ಮನವಿ ಮಾಡಿದರು.
ಆಗಮನಕ್ಕಾಗಿ ಕಾದಿದ್ದರು ಜನ: ಟೌನ್ಹಾಲ್ ಸರ್ಕಲ್ನಲ್ಲಿ ಮಧ್ಯಾಹ್ನ 3 ಘಂಟೆಯಿಂದಲೇ ಜನರು ಕುಮಾರಸ್ವಾಮಿ ಬರುವಿಗಾಗಿ ಕಾಯ್ದುಕುಳಿತ್ತಿದ್ದು ಎಲ್ಲರ ಗಮನ ಸೆಳೆಯಿತು. ಕೊನೆಗೆ ರಾತ್ರಿ 9 ಘಂಟೆಗೆ ದೇವನಹಳ್ಳಿ ಪ್ರಚಾರ ಮುಗಿಸಿ ವಿಜಯಪುರಕ್ಕೆ ತಡವಾಗಿ ಬಂದು ಜನಸ್ತೋಮ ಉದ್ದೇಶಿಸಿ ಅವರು ಮಾತನಾಡಿದರು. ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಶಿಡ್ಲಘಟ್ಟ ಶಾಸಕ ರಾಜಣ್ಣ, ಟೌನ್ ಜೆಡಿಎಸ್ ಅಧ್ಯಕ್ಷ ಬೂದಿಹಾಳ ಮುನಿಶಾಮಪ್ಪ, ಟಿಎಂಸಿಎಂಎಸ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಪುರಸಭಾ ಸದಸ್ಯರಾದ ಕೇಶವಪ್ಪ, ಎಸ್.ಭಾಸ್ಕರ್, ರವೀಂದ್ರ, ಚಿ.ಮಾ.ಸುಧಾಕರ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

