ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; ವ್ಯಕ್ತಿ ಬಂಧನ
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅನಂತ್ಕುಮಾರ್ (39) ಎಂಬಾತನನ್ನು ಬಂಧಿಸಿ 23 ಸಾವಿರ ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಿಇಎಂಎಲ್ ಬಡಾವಣೆ ಮನೆಯೊಂದರಲ್ಲಿ ಶುಕ್ರವಾರ ನಡೆದ ಭಾರತ ಮತ್ತು ದ.ಆಫ್ರಿಕಾ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸಲಾಗುತ್ತಿತ್ತು.
ಸೀಮೆ ಎಣ್ಣೆ ವಶ: ಪಡಿತರ ಚೀಟಿದಾರರಿಗೆ ವಿತರಣೆಯಾಗಬೇಕಿದ್ದ ನೀಲಿ ಸೀಮೆ ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೆದ್ದಲಹಳ್ಳಿ ನಿವಾಸಿ ಸೀತಾರಾಮು (70) ಬಂಧಿತ ವ್ಯಕ್ತಿ. ಈತನಿಂದ 40 ಸಾವಿರ ಬೆಲೆಬಾಳುವ 2 ಬ್ಯಾರಲ್ ಸೀಮೆ ಎಣ್ಣೆ ವಶಪಡಿಸಿಕೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿ ಹೊಂದಿರುವ ಸಿದ್ದಪ್ಪ ಎಂಬಾತನಿಂದ ಸೀಮೆ ಎಣ್ಣೆ ಖರೀದಿಸುತ್ತಿದ್ದ ಸೀತರಾಮು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಪಡಿತರ ಸೀಮೆಎಣ್ಣೆ ಅಕ್ರಮ ಮಾರಾಟ ಮಾಡುತ್ತಿದ್ದ ಸಿದ್ದಪ್ಪ ತಲೆಮರೆಸಿಕೊಂಡಿದ್ದಾನೆ.
ಬ್ಲಾಕ್ಮೇಲ್; ನಾಲ್ವರ ಸೆರೆ
ಬೆಂಗಳೂರು: ಕಳ್ಳತನ ಮಾಡಿ ಮಹಿಳೆಯರನ್ನ ವಿವಸ್ತ್ರಗೊಳಿಸಿ ವೀಡಿಯೋ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದರೆ ಫೇಸ್ಬುಕ್ ಹಾಗೂ ಅಂತರ್ಜಾಲಕ್ಕೆ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ ನಾಲ್ವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ. ಹಳ್ಳಿ ನಿವಾಸಿ ಸೈಯ್ಯದ್ ತನ್ವೀರ್ (28), ಆರ್.ಟಿ. ನಗರ ನಿವಾಸಿ ಅಬ್ದುಲ್ ಮತೀನ್ (23), ಭಾರತಿ ನಗರ ನಿವಾಸಿ ಚಾಂದ್ ಅತೀನ್ (30) ಹಾಗೂ ಭುವನೇಶ್ವರಿ ನಗರ ನಿವಾಸಿ ಸೈಯದ್ ವಸೀಂ (21) ಬಂಧಿತರು. ಆರೋಪಿಗಳಿಂದ 1.1 ಲಕ್ಷ ಚಿನ್ನಾಭರಣ, 45 ಸಾವಿರ ನಗದು, 2 ದ್ವಿಚಕ್ರ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಚ್ಬಿಆರ್ ಬಡಾವಣೆ ಬ್ಯೂಟಿ ಪಾರ್ಲರ್ಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಅವರಿಂದ ಚಿನ್ನಾಭರಣ ದೋಚಿ, ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

