ಬೆಂಗಳೂರು ಗ್ರಾಮಾಂತರ

ಚನ್ನಕೇಶವ ನಗರಕ್ಕೆ ಮೋದಿ ಇಂದು

Published On :

ಆನೇಕಲ್ಲು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಎಲೆಕ್ಟ್ರಾನಿಕ್‌ಸಿಟಿ ಚನ್ನಕೇಶವ ನಗರದ  ಮೈದಾನಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ಆಗಮಿಸುತ್ತಿದ್ದು ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು  ಬಿಜೆಪಿ ಮುಖಂಡ ಅತ್ತಿಬೆಲೆ ಬಸವರಾಜು ಕೋರಿದ್ದಾರೆ.
20 ಎಕರೆ ವಿಶಾಲ ಮೈದಾನದಲ್ಲಿ ಏರ್ಪಡಿಸಿರುವ ಬೃಹತ್ ವೇದಿಕೆಯಲ್ಲಿ  ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಹಾಗೂ ಗ್ರಾಮಾಂತರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಮೋದಿಯವರು ಮತಯಾಚನೆ ಮಾಡಲಿದ್ದಾರೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿದ್ದು ತಮಗೆ ಮೀಸಲಾದ ಆಸನದಲ್ಲಿ ಅರ್ಥ ಗಂಟೆ ಮೊದಲು ಆಸೀನರಾಗಿ ಶಿಸ್ತು ಪ್ರದರ್ಶನ ಮಾಡಬೇಕೆಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಿದರಗುಪ್ಪೆ ಆಂಜಿನಪ್ಪ ಮಾತನಾಡಿ ಬೆಂಗಳೂರು ಹೊರವಲಯದಲ್ಲಿ ಇದೇ  ಮೊದಲ ಬಾರಿಗೆ ಏರ್ಪಡಿಸಿರುವ ಬಹಿರಂಗ ಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ಬರುವ ಜನರಿಗೆ ಪ್ರತ್ಯೆಕ ವಾಹನ ಪಾರ್ಕಿಂಗ್ ವ್ಯವಸ್ಥೆಯಿದೆ.
ಆನೇಕಲ್ ಭಾಗದಿಂದ ಬರುವ ಕಾರ್ಯಕರ್ತರಿಗೆ ಪಿಇಎಸ್ ಕಾಲೇಜು ಆವರಣವನ್ನು ನಿಗದಿ ಪಡಿಸಿದ್ದು ವಾಹನ ನಿಲುಗಡೆ ನಂತರ ವೇದಿಕೆಯ ಬಳಿ ಶಿಸ್ತಿನಿಂದ ಬರಲು ಮನವಿ ಮಾಡಿದ್ದಾರೆ. ಮೋದಿ ವರ್ಚಸ್ಸು ದೇಶದಾದ್ಯಂತ ದಿನೇ ದಿನೇ ಹೆಚ್ಚುತ್ತಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಚಿತವಾಗಿದೆ. ಕಾಂಗ್ರೆಸ್‌ನ ಹುರಿಯಾಳುಗಳು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದು ದೇಶದಲ್ಲಿ ಕಾಣಬಹುದಾಗಿದೆ. ರಾಜ್ಯದಲ್ಲಿ ನಾಲ್ಕು ಜನ ಚಿಂತಕರು ಬಿಟ್ಟು ಉಳಿದ ಲೇಖಕ ಹಾಗೂ ಕವಿ ಸಮುದಾಯ ನಮ್ಮೊಂದಿಗಿದೆ. ಕನ್ನಡ ಚಿತ್ರ ರಂಗದ ತಾರೆಯರೂ ಪ್ರಚಾರ ಕಣದಲ್ಲಿ ಭಾಗವಹಿಸಲಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.