ಬೆಂಗಳೂರು ಗ್ರಾಮಾಂತರ

ರಾಮನ ಜಪಕ್ಕೆ ಬಾಬಾ ಪಲ್ಲಕಿ ಉತ್ಸವ

Published On :
ಸೂಲಿಬೆಲೆ: ಪಟ್ಟಣದ ಪ್ರಸಿದ್ದ ಶಿರಡಿ ಸಾಯಿಬಾಬಾ  ಮಂದಿರದಲ್ಲಿ ಮಂಗಳವಾರ ಶ್ರೀರಾಮನವಮಿ ಅಂಗವಾಗಿ ನಡೆದ ನಾನಾ ಪೂಜಾ ಕಾರ್ಯಕ್ರಮಗಳೊಂದಿಗೆ ಪಲ್ಲಕಿ ಉತ್ಸವ ಅಪಾರ ಸಂಖ್ಯೆಯ ಭಕ್ತರ ಕಣ್ಮನಸೆಳೆಯಿತು. ಪಟ್ಟಣದ Ú ಮಧ್ಯ ಭಾಗದಲ್ಲಿರುವ ಶಿರಡಿ ಸಾಯಿ ಬಾಬಾಮಂದಿರದಲ್ಲಿ ಪ್ರತಿ ವರ್ಷ ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮ ನವಮಿಗೆ ವಿಶೇಷವಾದ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರಾದಾಯವನ್ನು ಬೆಳೆಸಿಕೊಂಡು ಬಂದಿದ್ದು, ಈ ಬಾರಿಯ ದೇಗುಲವನ್ನು ದೀಪಾಲಂಕಾರಗಳಿಂದ ಶೃಂಗರಿಸಿ ಹೋಮ, ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಂಗಳವಾರ ರಾತ್ರಿ ನಡೆದ ಬಾಬಾ ವಿಗ್ರಹ ಮೂರ್ತಿ ಪಲ್ಲಕಿ ಉತ್ಸವ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯ ನಡೆಯಿತು.
ದೇವನಹಳ್ಳಿ ದೇಗುಲದಲ್ಲಿ...
ದೇವನಹಳ್ಳಿ:  ದೇವನಹಳ್ಳಿಯ ಎಲ್ಲ ದೇವಾಲಯಗಳಲ್ಲಿ ಶ್ರೀರಾಮ ನವಮಿ ಅಂಗವಾಗಿ ವಿಶೇಷ ಪೂಜೆ  ಅಭಿಶೇಕ, ಪಾನಕ, ಕೋಸಂಬರಿ ಮಜ್ಜಿಗೆಗಳ ವಿತರಣೆ ನಡೆಯಿತು.
   ಇಲ್ಲಿನ ಕೋಟೆ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿನ ಸೀತಾರಾಮ ಲಕ್ಷ್ಮಣ ಸಮೇತಶ್ರೀ ವೀರಾಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.   ಇಲ್ಲಿನ ಹಳೇ ತಾಲೂಕು ಕಚೇರಿ ಬಳಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿರುವ  ಆಂಜನೇಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಪೂಜೆಗಳು ನಡೆದು ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಪಟ್ಟಣದ ಅಶ್ವತ್ಥಕಟ್ಟೆಗಳಲ್ಲಿ ಶ್ರೀರಾಮನ ಫೋಟೋ ಇರಿಸಿ ಪೂಜೆ ಸಲ್ಲಿಸಿದರಲ್ಲದೆ ಕೋಸಂಬರಿ ಪಾನಕ ವಿತರಣೆ ಮಾಡಿದರು. ಬುಧವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಶಿಲ್ಪಕಲಾ ಶಾಲೆಯಲ್ಲಿ ಶ್ರೀರಾಮ ನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮೋತ್ಸವ ನಡೆಯಲಿದೆ  ಎಂದು ಸಂಚಾಲಕ ಮಧೂಸೂಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.