ಬೆಂಗಳೂರು ಗ್ರಾಮಾಂತರ

ಮಾಫಿಯಾ, ಹಗರಣಗಳ ಪಕ್ಷಗಳಿಂದ ದೇಶ ಲೂಟಿ

Published On :

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಅವಕಾಶವಾದಿ ರಾಜಕಾರಣ ಮಿತಿಮೀರಿದೆ. ಮಾಫಿಯಾ ಮತ್ತು ಹಗರಣಗಳ ಪಕ್ಷಗಳು ದೇಶವನ್ನು ಲೂಟಿ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ಚಿಂತನೆ ಅನಿವಾರ್ಯ ಎಂದು ಜೆಡಿಯು ಅಭ್ಯರ್ಥಿ ಜಿ.ಕೆ.ಸಿ.ರೆಡ್ಡಿ ಹೇಳಿದರು.
ಇಲ್ಲಿನ ಖಾಸಗಿ ಸ್ಥಳಮೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಸುಮಾರು 10 ಮಂದಿ ಜೆಡಿಎಸ್ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ನದಿ ಜೋಡಣೆ ವಿಚಾರವಾಗಿ ಹಲವು ಮನವಿಗಳನ್ನು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಯುಪಿಎ ಸರ್ಕಾರ ಕೂಡ ಅದನ್ನು ನಿರ್ಲಕ್ಷಿಸಿದೆ. ನಮ್ಮಲ್ಲಿ ನಿಜವಾಗಿಯೂ ನೀರಿನ ಸಮಸ್ಯೆ ಇಲ್ಲ. ನೀರು ಕೊಡುವಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಯ ಕೊರತೆ ಎದ್ದುಕಾಣುತ್ತಿದೆ. ಎಲ್ಲ ಪಕ್ಷಗಳೂ ಈ ಹಂತದಲ್ಲಿ ಸಮಾನ ವೈಫಲ್ಯ ಕಂಡಿವೆ ಎಂದು ಕಿಡಿಕಾರಿದರು.
ಎಚ್‌ಡಿಕೆ ರೈತವಿರೋಧಿ: ನಂದಗುಡಿಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ 18 ಸಾವಿರ ಎಕರೆ ಕಬಳಿಸಲು ಮುಂದಾದ ಕುಮಾರಸ್ವಾಮಿ ರೈತವಿರೋಧಿ. ಅವರಿಗೆ ರೈತರ ಬಗ್ಗೆ ಯಾವ ಕಾಳಜಿ ಇದೆ ಎಂದು ಪ್ರಶ್ನಿಸಿದ ಅವರು ಸ್ವಾರ್ಥ ಸಾಧನೆಗಾಗಿ ವಲಸೆ ಬಂದಿದ್ದಾರೆ. ಅದೇ ರೀತಿ ಬಚ್ಚೇಗೌಡರು ಸಚಿವರಾಗಿ ಅವರ ಕ್ಷೇತ್ರಕ್ಕೊಂದು ಬಸ್ ನಿಲ್ದಾಣ ಕೂಡ ಮಾಡಿಸಿಲ್ಲ. ಮೊಯ್ಲಿ ಅವರಿಗೆ ಎತ್ತಿನಹೊಳೆ ಶಂಕುಸ್ಥಾಪನೆ ಮಾಡಲು 5 ವರ್ಷ ಸಾಕಾಗಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.