ಆನೇಕಲ್ಲಿನಲ್ಲೊಬ್ಬ ಅಪರೂಪದ ಕಾರ್ಮಿಕ
ಆನೇಕಲ್ಲು: ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸುವುದು ವಾಡಿಕೆ. ಆದರೆ, ಇಲ್ಲಿ ಆ ದಿನ ಕಾರ್ಮಿಕರು ಒಂದಡೆ ಕಲೆತು ದುಡಿಮೆ, ಬೆವರು, ಬೆಲೆ ಏರಿಕೆ, ಕುಟುಂಬ ನಿರ್ವಹಣೆ ಬಗ್ಗೆ ಚರ್ಚಿಸುತ್ತಾರೆ. ಆದರ ಜೊತೆಗೆ ಸಾಹಿತ್ಯ ಮೈಗೂಡಿಸಿಕೊಂಡಿರುವ ಅಪರೂಪದ ವ್ಯಕ್ತಿ ಮಹೇಶ್ ಊಗಿನಹಳ್ಳಿ ಎಂದು ಆನೇಕಲ್ ಸಾಹಿತಿ ಬಳಗದ ಆದೂರು ಪ್ರಕಾಶ್ ತಿಳಿಸಿದ್ದಾರೆ.
ಇಲ್ಲಿದೆ ಸಮೀಪದ ಚಂದಾಪುರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಆಸಕ್ತಿ ಮತ್ತು ಸಾಮಾಜಿಕ ಕಳಕಳಿ ಇದ್ದಲ್ಲಿ ಎಲ್ಲ ರಂಗದಲ್ಲಿಯೂ ಸಾಧನೆ ಮಾಡಬಹುದು. ಖಾಸಗಿ ಕಾರ್ಖಾನೆಯಲ್ಲಿ ಬದುಕು ಕಂಡುಕೊಂಡರೂ ಅಲ್ಲಿನ ಸಮಸ್ಯೆಗಳನ್ನು ಕವನಗಳ ರೂಪದಲ್ಲಿ ಬರೆದು ಸೈ ಎನಿಸಿಕೊಂಡ ಮಹೇಶ್ ಕಾರ್ಮಿಕರ ಕೋರಿಕೆ ಮೇರೆಗೆ ದುಡಿಮೆಗೆ ತಕ್ಕ ಭತ್ಯೆ ಯೋಜನೆ ಜಾರಿಗೆ ಹೋರಾಟ ಮಾಡಿದರು. ಮಹಿಳಾ ಕಾರ್ಮಿಕರ ಸವಲತ್ತುಗಳ ಬಗ್ಗೆ ಮಾಲೀಕರ ಮನವೊಲಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ರಕ್ತದಾನ ಶಿಬಿರ, ಏಡ್ಸ್ ಜಾಗೃತಿ ಬಗ್ಗೆ ಬೀದಿ ನಾಟಕ ಆಡಿ ಜಾಗೃತಿ ಅಭಿಯಾನದಲ್ಲಿ ಸೈ ಎನಿಸಿಕೊಂಡರು. ಜೇನುಗೂಡು ಸಾಹಿತ್ಯ ವೇದಿಕೆ ಮೂಲಕ ನಾಡಿನ ಸುಪ್ರಸಿದ್ಧ ಕವಯತ್ರಿ ಹಾಗೂ ಬರಹಗಾರರ ಚಿಂತನೆ ಸಭೆ ನಡೆಸಿ ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ನೀಡಿದ ಅಪರೂಪ ಗುಣಗಳ ಮಹೇಶ್ ಸಮಾಜಕ್ಕೆ ಆದರ್ಶ ಕಾರ್ಮಿಕ ಎಂದರು.
ಶಿಕ್ಷಕರ ಸಂಘದ ಚಂದ್ರಶೇಖರ್, ಗವಿ ರಂಗಯ್ಯ, ಶಿವಣ್ಣ, ಪತ್ರಕರ್ತರ ಸಂಘದ ಮಂಜುನಾಥ್, ಕಾರ್ಮಿಕರ ಬಳಗದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

