ಚರಂಡಿ, ರಸ್ತೆ ನಿರ್ಮಾಣಕ್ಕೆ ಶಾಸಕರ ಸೂಚನೆ
ಭೇರ್ಯ: ಯಾವುದೇ ಮುಲಾಜಿಲ್ಲದೆ ನಿಮ್ಮ ಅಳತೆ ಏನು ಇದೆ ಅದರ ಪ್ರಕಾರ ಚರಂಡಿ ನಿರ್ಮಿಸಿ, ರಸ್ತೆ ವಿಸ್ತರಿಸುವಂತೆ ಮಾಡುವಂತೆ ಶಾಸಕ ಸಾ.ರಾ.ಮಹೇಶ್ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.
ಭೇರ್ಯ- ಕೆ.ಆರ್. ಪೇಟೆ ರಸ್ತೆಯನ್ನು ಸುಮಾರು 11 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಮಾಡಲಾಗುತ್ತಿದ್ದು, ಕೆಲವರು ತಡೆಯೊಡಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದ್ದ ಕಾರಣ ಭೇಟಿ ನೀಡಿ ಪರಿಶೀಲಿಸಿದರು. ಈ ರಸ್ತೆಯನ್ನು ಸುಮಾರು 11 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಡಾಂಬರೀಕರಣ ಮಾಡಲಾಗುತ್ತಿದ್ದು, ಚರಂಡಿ ಕಾಮಗಾರಿಗೆ ಕೆಲ ಮನೆಯವರು ತಡೆಯೊಡ್ಡಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲದೆ ಈ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡುವುದೇ ಕಷ್ಟವಾಗಿದ್ದು, ಮಳೆ ಬಂತು ಎಂದರೆ ವಾಹನಗಳ ಸಂಚಾರ ಕೂಡ ಕಷ್ಟ ಸಾಧ್ಯ ಎಂದು ರಸ್ತೆಯ ಅವ್ಯವಸ್ಥೆ ಬಗ್ಗೆ ಸ್ಥಳೀಯ ಗ್ರಾಮದ ಮುಖಂಡರು ಶಾಸಕರ ಗಮನಕ್ಕೆ ತಂದರು.
ಲೋಕೋಪಯೋಗಿ ಎಇಇ ರವಿಕುಮಾರ್ ಶಾಸಕರಿಗೆ ರಸ್ತೆ ಗ್ರಾಮ ಮಿತಿಯಲ್ಲಿ 11 ಮೀಟರ್ನಷ್ಟು ಅಳತೆ ಇದ್ದು, ಚರಂಡಿ ನಿರ್ಮಿಸಿ ನಂತರ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಮಾಹಿತಿ ನೀಡಿದರು. ನಂತರ ಕುದ್ದು ಶಾಸಕರೆ ಟೇಪ್ ಹಿಡಿದುಕೊಂಡು ಅರ್ಧ ಕಿ.ಮೀ. ನಷ್ಟು ದೂರ ಆಳತೆ ಮಾಡಿ ನಂತರ ಅವರು ಯಾವುದೇ ಮುಲಾಜಿಲ್ಲದೆ 11 ಮೀಟರ್ನಷ್ಟು ನಿಮ್ಮ ಇಲಾಖೆ ಏನು ಅಳತೆ ಇದೆ ಅದರಂತೆ ಕಾಮಗಾರಿ ಪ್ರಾರಂಭಿಸುವಂತೆ ಲೋಕೋಪಯೋಗಿ ಎಇಇ ರವಿಕುಮಾರ್ ಅವರಿಗೆ ಆದೇಶಿಸಿದರು. ಅವರು ಇದನ್ನು ಮೀರಿ ತಡೆಯೊಡ್ಡಿದ್ದರೆ ಪೊಲೀಸ್ ಬಂದೋಬಸ್ ಪಡೆದುಕೊಂಡು ಕಾಮಗಾರಿ ಮಾಡುವಂತೆ ಹೇಳಿದರು.
ತಾಪಂ .ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಾದೀಕ್ ಖಾನ್, ತಹಸೀಲ್ದಾರ್ ಶಿವಶಂಕರಪ್ಪ, ತಾಪಂ ಇಒ ಸಿದ್ದಲಿಂಗಮೂರ್ತಿ, ಜಿಪಂ ಎಇಇ ಸತೀಶ್, ಆರ್ಐ ತನುರಾಜ್, ಗ್ರಾಪಂ ಸದಸ್ಯರಾದ ಬಿ.ಕೆ.ಕುಮಾರ್, ಸೋಮು, ಮುಂಜನಹಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಅನೀಫ್ಕುಮಾರ್, ಜೆಡಿಎಸ್ ಮುಖಂಡರಾದ ಲೋಕೇಶ್, ಶಿವಕುಮಾರ್, ವಕೀಲ ಶಿವಶಂಕರ್, ಜುನೇದ್ಬೇಗ್, ಕಾಶಿ, ರಾಘು, ಬಿ.ಎಸ್. ನಟರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

