ಬೆಂಗಳೂರು ಗ್ರಾಮಾಂತರ

ಅಜ್ಞಾನದಿಂದ ಮೂಢನಂಬಿಕೆ: ಮಂಜುನಾಥ ಶೆಟ್ಟಿ

Published On :


ನೆಲಮಂಗಲ: ಅಜ್ಞಾನ, ಕಡು ಬಡತನ ಹಾಗೂ ಶಿಕ್ಷಣದ ಕೊರತೆಯಿಂದಾಗಿ ಸಮಾಜದಲ್ಲಿ ಮೂಢನಂಬಿಕೆಗಳು ತಾಂಡವವಾಡುತ್ತಿವೆ ಎಂದು ರೋಟರಿ ಸಂಸ್ಥೆ ಗೌರ್ನರ್ ಮಂಜುನಾಥ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ಪಟ್ಟಣದ ಬಸವಣ್ಣದೇವರ ಮಠದಲ್ಲಿ ರೋಟರಿ ಸಂಸ್ಥೆಯು ಆಯೋಜಿಸಿದ್ದ ನೂತನ 2014-15ನೇ ಸಾಲಿನ  ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದರು. ನೂತನ ಅಧ್ಯಕ್ಷ ಎಸ್. ಮುನಿರಾಜಯ್ಯ ಮಾತನಾಡಿ, ಸಂಘದ ಸದಸ್ಯರು ತಮ್ಮ ಸುತ್ತಮುತ್ತಲಿನವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳುವಳಿಕೆ ನೀಡುವ ಮನೋಭಾವನೆ ಬೆಳೆಸಿಕೊಳ್ಳ ಬೇಕೆಂದರು.  ಉತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದಂತಹ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಬೊಮ್ಮಲಿಂಗಯ್ಯ ಅವರಿಗೆ ಸಹಾಯಕ ಗೌರ್ನರ್ ಇ.ಟಿ.ಕೆ.ರಾಜು  ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಗೋಪಾಲಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಮ್ಮಶೆಟ್ಟಹಳ್ಳಿ, ಗೋಪಾಲಪುರ, ಶಾಮಭಟ್ಟರಪಾಳ್ಯ, ಕುಕ್ಕನಹಳ್ಳಿ, ಹೊಸಹಳ್ಳಿಪಾಳ್ಯದ  ಸರ್ಕಾರಿ ಶಾಲೆಗಳಿಗೆ ಒಟ್ಟು 15 ಕಂಪ್ಯೂಟರ್‌ಗಳನ್ನು ಉಚಿತವಾಗಿ ರೋಟರಿ ಸಂಸ್ಥೆ ವತಿಯಿಂದ ಕೊಡುಗೆ ನೀಡಿದರು.
ಗೋಪಾಲಪುರ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಮಸ್ವಾಮಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎನ್. ಮಂಜುನಾಥ್, ಎಚ್.ಜಿ.ರಾಜು, ಪೃಥ್ವಿರಾಜ್,  ಪದಾಧಿಕಾರಿಗಳಾದ ಟಿ.ನಾಗರಾಜ್, ಎನ್.ಎಸ್.ಮೂರ್ತಿ, ಹರೀಶ್ ಕುಮಾರ್, ಗಂಗರಾಜ್, ಮಂಜುನಾಥಗೌಡ, ಖಜಾಂಚಿ ಸುರೇಂದ್ರನಾಥ್, ಕಾರ್ಯದರ್ಶಿ  ಕೆ.ಆರ್ .ವನರಾಜ ಹಾಗೂ ಸದಸ್ಯರುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.