ರಾಸು ಆರೋಗ್ಯ ಕಾಪಾಡುವಲ್ಲಿ ಅಜೋಲ ಸಸ್ಯ ಪರಿಣಾಮಕಾರಿ
ಚನ್ನಪಟ್ಟಣ: ಕಡಿಮೆ ಖರ್ಚಿನಲ್ಲಿ ಉತ್ತಮ ಗುಣ ಮಟ್ಟದ ಹಾಲು ಉತ್ಪಾದನೆ ಜತೆಗೆ ರಾಸುಗಳ ಆರೋಗ್ಯ ಕಾಪಾಡುವಲ್ಲಿ ಅಜೋಲ ಸಸ್ಯ ಪರಿಣಾಮ ಕಾರಿಯಾಗಿದ್ದು ಈಬಗ್ಗೆ ರೈತರು ಮುಂದಾಗ ಬೇಕೆಂದು ಜಿ.ಕೆ.ವಿಕೆ ಪ್ರಾಧ್ಯಾಪಕ ಡಾ. ಕೆ.ಪಿ. ರಘುಪ್ರಸಾದ್ ತಿಳಿಸಿದರು.ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರೈತರಿಗೆ ಅಜೋಲ ಕುರಿತ ಮಾಹಿತಿ ನೀಡಿದ ಅವರು, ಇದು ನೀರಿನಲ್ಲಿ ಬೆಳೆಯುವ ಪಾಚಿ ಜಾತಿಯ ಸಸ್ಯವಾಗಿದ್ದು ಮನೆಯ ಮುಂದೆ ಚಿಕ್ಕ ತೊಟ್ಟಿಗಳನ್ನು ನಿರ್ಮಿಸಿಕೊಂಡು ಅಜೋಲ ಬೆಳೆಯಬಹುದಾಗಿದೆ ಎಂದು ತಿಳಿಸಿದರು.ಅಜೋಲವನ್ನು ರಾಸುಗಳಿಗೆ ನೀಡುವುದರಿಂದ ಅತಿಹೆಚ್ಚು ಹಾಲು ಕರೆಯುವ ಜತೆಗೆ ಹಾಲಿನಲ್ಲಿ ಪ್ರೊಟೀನ್ ಅಂಶ ಹೆಚ್ಚಲುಸಹಕಾರಿಯಾಗುತ್ತದೆ. ಇಂದರಿಂದ ಹಾಲಿನ ಗುಣಮಟ್ಟದಲ್ಲಿ ಸುಧಾರಣೆ ಕಂಡು ರೈತರು ಹೆಚ್ಚು ಲಾಭ ಗಳಿಸ ಬಹುದಾಗಿದೆ ಎಂದು ತಿಳಿಸಿದರು.ಅಜೋಲವನ್ನು ರಾಸುಗಳಿಗೆ ನೀಡುವುದರಿಂದ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ. ಜತೆಗೆ ರೈತರು ಪಶುಆಹಾರಗಳಿಗೆ ಹೆಚ್ಚಿನ ಹಣ ಸುರಿಯುವುದು ತಪ್ಪುತ್ತದೆ ಎಂದು ಮಾಹಿತಿ ನೀಡಿದ ಅವರು ಅಜೋಲವನ್ನು ಬತ್ತದ ಗದ್ದೆಯಲ್ಲೂ ಬೆಳೆಯ ಬಹುದು ಎಂದು ತಿಳಿಸಿದರು.ಕೃಷಿವಿದ್ಯಾರ್ಥಿಗಳು ಗ್ರಾಮದಲ್ಲಿ ರೈತರಿಗೆ ಅಜೋಲ ಹೊಂಡದ ಮಾದರಿಯನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಿದರು. ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಂದ ಮಾಹಿತಿ ಪಡೆದುಕೊಂಡರು.
ಜನಸ್ಪಂದನಕ್ಕೆ ಸಿದ್ಧರಾಗಿ ಬನ್ನಿ: ಶಾಸಕ ಶ್ರೀನಿವಾಸಮೂರ್ತಿ
ನೆಲಮಂಗಲ: ಜನಸ್ಪಂದನ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಭಾಗವಹಿಸುವಾಗ ಪೂರ್ಣ ತಯಾರಿ ಯೊಂದಿಗೆ ಬರಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರುಅವರು ಸೋಮವಾರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಮಳೆ ಸರಿಯಾಗಿ ಬರದೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಅಭಾವವಾಗಿದೆ. ಅದನ್ನು ನೀಗಿಸುವುದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅಧಿಕಾರಿಗಳು ಕೆಲಸ ಮಾಡಬೇಕು. ಪಕ್ಷಾತೀತವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಅವರ ಜೊತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳು ಕೆಲಸ ಮಾಡಬೇಕು ಎಂದು ಹೇಳಿದರು.ಸಭೆಯಲ್ಲಿ ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕೆಂಪಣ್ಣ ಮಾತನಾಡಿ, ಗ್ರಾಮಕ್ಕೆ ಒಬ್ಬ ಲೆಕ್ಕಿಗರನ್ನು ಕೊಡಲು ಕೇಳಿಕೊಂಡರು. ಕೃಷಿ ಇಲಾಖೆಯಲ್ಲಿ ಹಾಲಿ ಇರುವ ಯೋಜನೆಗಳು ಸರಿಯಾಗಿ ಜನರನ್ನು ತಲುಪುತ್ತಿಲ್ಲ ಎಂದು ಓಬಳಾಪುರದ ಕಾಶಿಪತಯ್ಯ ದೂರಿದರು. ಹಳಗೆರೆ ದಾಖಲೆ ಗುಟ್ಟಹಳ್ಳಿ ಪಾಳ್ಯದ ಮಹಿಳೆಯರು ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಎಂದು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಹಾಜರಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೆ ನಿರ್ದೇಶನ ನೀಡಿ ಎರಡು ದಿನದಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲು ತಿಳಿಸಿದರು.ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಮಾವಿನ ಸಸಿಗಳನ್ನು ವಿತರಿಸಿದರು. ಕಂದಾಯ ಇಲಾಖೆಯಿಂದ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಮತ್ತು ಸಂಧ್ಯಾ ಸುರಕ್ಷಾ ಮಾಸಾಶನದ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.ಸಭೆಗೆ ಗೈರು ಹಾಜರಾದ ಸಮಾಜ ಕಲ್ಯಾಣ, ಲೋಕೋಪಯೋಗಿ, ಅರಣ್ಯ, ಬೆಸ್ಕಾಂ, ಅಬಕಾರಿ, ಪಶು ಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ನೀಡಲು ಇ.ಓ.ನಾರಾಯಣಸ್ವಾಮಿಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ ಮಾತನಾಡಿದರು.ಇ.ಓ.ನಾರಾಯಣಸ್ವಾಮಿ, ಉಪ ತಹಸೀಲ್ದಾರ್ ಹನುಮಂತರಾಯಪ್ಪ, ಕಂದಾಯ ನಿರೀಕ್ಷಕ ಗಿರೀಶ್, ಬಸವರಾಜು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅಜ್ಜೆಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ರಂಗಸ್ವಾಮಿ, ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

