ಬೆಂಗಳೂರು ಗ್ರಾಮಾಂತರ

ಫುಟ್ಪಾತ್ ವ್ಯಾಪಾರಿಗಳಿಂದ ರಸ್ತೆ ಅತಿಕ್ರಮಣ

Published On :

ಕನಕಪುರ : ಪಟ್ಟಣವು ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ವಾಹನದಟ್ಟಣೆ ಹೆಚ್ಚಾಗಿದೆ. ರಸ್ತೆ ಅಗಲೀಕರಣದಿಂದಾಗಿ ವಿಸ್ತಾರವಾದ ರಸ್ತೆಯನ್ನು ಫುಟ್ಪಾತ್ ವ್ಯಾಪಾರಿಗಳು ಅತಿಕ್ರಮಿಸಿಕೊಡು ವ್ಯವಹರಿಸುತ್ತಿರುವುದು, ಮುಖ್ಯ ವೃತ್ತಗಳಲ್ಲಿ ತಳ್ಳುಗಾಡಿಗಳು, ಆಟೋಸ್ಟಾಂಡ್ಗಳು ಆಕ್ರಮಿಸಿಕೊಂಡು ಸಮಸ್ಯೆ ತಂದೊಡ್ಡಿವೆ.
ಕನಕಪುರದ ಹೃದಯ ಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 206 ಸುಮಾರು 3 ಕಿಮೀ ಹಾದುಹೋಗಿದ್ದು ವಾಹನಗಳ ದಟ್ಟಣೆಯನ್ನು ಹೆಚ್ಚಿಸಿದೆ. ಅಲ್ಲದೆ ಪಟ್ಟಣದ ಮಧ್ಯೆಯಿರುವ ರೂರಲ್ ಕಾಲೇಜು ಸಮಚ್ಚಯದ ಸಾವಿರಾರು ವಿದ್ಯಾರ್ಥಿಗಳು ಶಾಲಾ ಪ್ರಾರಂಭ ಹಾಗೂ ಬಿಡುವ ಸಮಯದಲ್ಲಿ ದಟ್ಟಣೆಯನ್ನು ವಿಪರೀತವಾಗಿಸಿದ್ದಾರೆ.
ಪ್ರಮುಖವಾಗಿ ಬಸ್ ಸ್ಟಾಂಡ್ ವೃತ್ತ, ಚನ್ನಬಸಪ್ಪ ವೃತ್ತ ಹಾಗೂ ಕೆಂಗಲ್ ಹನುಮಂತಯ್ಯ ವೃತ್ತಗಳಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸುವುದರಿಂದ ಅಪಘಾತಗಳು ಹೆಚ್ಚಳವಾಗಿವೆ. ದ್ವಿಚಕ್ರ ವಾಹನ ಚಾಲಕರು ಹಾಗೂ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾದ ಸಂಚಾರಿ ದೀಪಗಳ ವ್ಯವಸ್ಥೆಯಿಲ್ಲದೆ ಜನರು ಹಾಗೂ ವಾಹನಗಳ ದಟ್ಟಣೆಯನ್ನು ಉಲ್ಬಣಗೊಳಿಸಿದೆ.  ಪಟ್ಟಣದ ಜನಸಂಖ್ಯೆ ಲಕ್ಷದ ಆಸುಪಾಸಿನಲ್ಲಿದ್ದು ಇಂದಿಗೂ ಇಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲದಿರುವುದು ವಿಪರ್ಯಾಸವಾಗಿದೆ. ಪುರಠಾಣೆಯು ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದು ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿ ಇಲ್ಲದಂತಾಗಿದೆ.
ಪೊಲೀಸ್ ಇಲಾಖೆ ಹಾಗೂ ಸಚಿವರು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಂಡು ಕನಕಪುರ ಪಟ್ಟಣಕ್ಕೆ ಸಂಚಾರ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.