ಮರಳು ದಂಧೆ: ಹೊರಾಟ ಕೈ ಬಿಡಲ್ಲ
ಚನ್ನಪಟ್ಟಣ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಮಾಜಿ ತಾ.ಪಂ ಸದಸ್ಯ ಸಿದ್ದರಾಮ ಹೆಗ್ಗಡೆ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 14 ದಿನಗಳನ್ನು ಪೂರ್ಣ ಗೊಳಿಸಿದ್ದು ಲೋಕಾಯುಕ್ತ ತನಿಖೆಗೆ ಸರ್ಕಾರ ಆದೇಶಿಸದ ಹೊರತು ಧರಣಿ ಕೈ ಬಿಡುವುದಿಲ್ಲ ಎಂದು ಸಿದ್ದರಾಮಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಪ್ರತಿಭಟನಾ ನಿರತ ಹೆಗ್ಗಡೆ ಜತೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನುಸೂಯಮ್ಮ, ಸ್ವರಾಜ್ ನೆಟ್ ವರ್ಕ್ನ ಸುಕನ್ಯಾ, ರೈತಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ, ಕಾರ್ಯದರ್ಶಿ ಕೆ.ಎನ್.ರಾಜು ಬೆಂಬಲ ನೀಡಿದರು. ಇವರೊಂದಿಗೆ ಹಲವಾರು ಜನಪರ ಸಂಘಟನೆಯ ಮುಖಂಡರು ಪ್ರಗತಿ ಪರ ಚಿಂತಕರು ಹೆಗ್ಗಡೆ ಹೋರಾಟಕ್ಕೆ ಶುಭ ಕೋರಿದರು.
ನೆಪ ಮಾತ್ರದ ಸಭೆ: ಮೂರು ದಿನಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ನಿಷೇಧಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರಾದರೂ ಇನ್ನೂ ಮರಳು ಗಣಿಗಾರಿಕೆ ನಿಲ್ಲಿಸುವ ಕನಿಷ್ಠ ಪ್ರಯತ್ನ ಮಾಡುತ್ತಿಲ್ಲ. ರಾತ್ರಿ ವೇಳೆ ಲಾರಿಗಳು ಸಂಚರಿಸುತ್ತಿದ್ದು ಮರಳು ತಡೆಗೆ ರಚಿಸಲಾಗಿರುವ ಟಾಸ್ಕ್ ಫೋರ್ಸ್ನ ಇಲಾಖಾ ಸಿಬ್ಬಂದಿಗಳಲ್ಲಿ ಪರಸ್ಪರ ಸಾಮರಸ್ಯದ ಕೊರತೆ ಕಾಣುತ್ತಿದ್ದು ಮರಳು ನಿಷೇಧ ಮಾಡುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಚಳವಳಿಗಾರರು ಕಿಡಿಕಾರಿದರು.
ಹೋರಾಟಕ್ಕೆ ಹೊಸ ಸ್ವರೂಪ: ಮರಳು ಗಣಿಗಾರಿಕೆ ವಿರೋಧಿ ಹೋರಾಟಕ್ಕೆ ಹೊಸ ಸ್ವರೂಪ ಕೊಡಲು ತಾಲೂಕಿನ ಪ್ರಗತಿಪರ ಚಿಂತಕರು ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಸಮಾನ ಮನಸ್ಕರ ಸಭೆಕರೆದು ಮರಳು ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಹೋರಾಟದ ಮುಂದಿನ ಹಾದಿ ಬಗ್ಗೆ ಚರ್ಚಿಸಿ ಸ್ಪಷ್ಟ ತೀರ್ಮಾನ ತಳೆಯುವುದಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನುಸೂಯಮ್ಮ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

