ಬೆಂಗಳೂರು ಗ್ರಾಮಾಂತರ

ಆನೇಕಲ್ಲಿನಲ್ಲಿ ಕನಕ, ಪುರಂದರ, ತ್ಯಾಗರಾಜರ ಆರಾಧನೆ

Published On :

ಆನೇಕಲ್ಲು: ಕೀರ್ತನೆಗಳ ಮೂಲಕ ಭಗವಂತ ಹಾಗೂ ಭಕ್ತರ ನಡುವಿನ  ಕೊಂಡಿಯನ್ನು ಭದ್ರ ಗೊಳಿಸಿ ಸೇತುವೆ ನಿರ್ಮಿಸಿದ ದೈವಾಂಶ ಸಂಭೂತರು ದಾಸ ಶ್ರೇಷ್ಠರಾದ ಕನಕ, ಪುರಂದರ ಹಾಗೂ ತ್ಯಾಗರಾಜರು ಎಂದು ಮೃದಂಗ ವಿದ್ವಾನ್ ಎಲ್. ಕೃಷ್ಣಪ್ಪ ತಿಳಿಸಿದರು.
ಅವರು ಆನೇಕಲ್ಲಿನ ಕಲ್ಯಾಣ ಮಂಟಪ ರಸ್ತೆಯ ಶ್ರೀ ರಾಮ ಭಜನಾ ಮಂಡಳಿಯಲ್ಲಿ ಆಯೋಜಿಸಿದ್ದ  ಕನಕ-ಪುರಂದರ-ತ್ಯಾಗರಾಜರ ಆರಾಧನೆಯಲ್ಲಿ ಮಾತನಾಡಿ ಸ್ತೋತ್ರ ಹಾಗೂ ಶ್ಲೋಕಗಳು ದೇವನಾಗರಿ ಭಾಷೆಯಲ್ಲಿದ್ದು ದೇವರ ಪೂಜೆಗೆ ಸಲ್ಲುತ್ತದೆ. ಗೀತೆಗಳು, ಭಜನೆ ಹಾಗೂ ಸಂಗೀತ ಕೀರ್ತನೆಗಳ ನೈವೇದ್ಯ ದೇವರ ಆರಾಧನೆಗೆ ನೇರ ಸಾಧನಗಳಾಗಿವೆ. ಹಾಡುಗಾರಿಕೆಯಿಂದ ನೆಮ್ಮದಿ ಸಿಕ್ಕು ಭಗವಂತನ ಸಾಮಿಪ್ಯ ಹಾಗೂ ಸಾನಿಧ್ಯ ಸೇರಲು ಉತ್ತಮ ಮಾರ್ಗವಾಗಿದೆ ಎಂದರು.
ತಬಲ ವಿದ್ವಾನ್ ಶ್ರೀನಿವಾಸ್ ತಮ್ಮ  ಪ್ರೇಕ್ಷರನ್ನು ರಂಜಿಸಿ ಮಾತನಾಡಿ ಆಡು ಭಾಷೆಯಲ್ಲಿ ದೇವರ ಆರಾಧನೆ ಮಾಡಿ ತೃಪ್ತಿ ಹೊಂದಲು ದಾಸವರೇಣ್ಯರು ಹಲವಾರು ಕೀರ್ತನೆಗಳು, ಭಕ್ತಿ ಗೀತೆಗಳನ್ನು ರಚನೆ ಮಾಡಿ ಉತ್ತಮ ರಾಗದೊಂದಿಗೆ ಪೋಣಿಸಿ ಎಂದಿಗೂ ಬಾಡದ ಹೂಮಾಲೆಯನ್ನು ದೇವರಿಗೆ ಅರ್ಪಿಸಿದ್ದಾರೆ. ಭಗವಂತ ತನ್ನ ಭಕ್ತರ ಮೂಲಕ ತನಗಿಷ್ಟವಾದ ಸೇವೆಯನ್ನು ನಿರಂತರ ಪಡೆಯುತ್ತಿದ್ದಾನೆ ಎಂದರು.
ಆರಾಧನಾ ಮಹೋತ್ಸವದಲ್ಲಿ ಗಾಯಕರಾದ ಶ್ಯಾಮಣ್ಣ, ಉಮಾಪತಿ, ನಿತ್ಯಶ್ರೀ, ಉಮಾ ಸುಧಾ ಪಂಚರತ್ನಗಳೂ ಸೇರಿದಂತೆ ಹಲವಾರು ಕೀರ್ತನೆಗಳನ್ನು ಹಾಡಿದರು. ಮೃದಂಗ ವಿದ್ವಾಂಸರಾದ ಕೃಷ್ಣಪ್ಪ, ವಾಸು, ನರಸಿಂಹ, ಸುದರ್ಶನ್, ಜುಗಲ್ ಬಂದಿ ನಡೆಸಿದರು. ವಯೋಲಿನ್ ವಾದಕರಾದ  ಹೊಸೂರು ಪದ್ಮನಾಭನ್ ಹಾಗೂ ವೇಣುಗೋಪಾಲ್ ಪ್ರೇಕ್ಷಕರನ್ನು ರಂಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.