ಬೆಂಗಳೂರು ಗ್ರಾಮಾಂತರ

ಕಗ್ಗಲೀಪುರದ ಮುಖ್ಯ ರಸ್ತೆಯಲ್ಲಿ ರೌಡಿಗಳ ಕಾಳಗ

Published On :

ಕ.ಪ್ರ.ವಾರ್ತೆ    ರಾಮನಗರ    ಫೆ.3
ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಮುಖ್ಯ ರಸ್ತೆಯಲ್ಲಿ ರೌಡಿಗಳು ಹಾಡ ಹಗಲೇ ಲಾಂಗ್ಗಳನ್ನು ಝಳಪಿಸಿದ್ದಾರೆ. ಸೋಮವಾರ ರೌಡಿಗಳ ಎರಡು ಗುಂಪಿನ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಕಗ್ಗಲೀಪುರದ ರೇಣುಕಾ ಮೆಡಿಕಲ್ಸ್ ಎದುರು ನಡೆದ ಈ ಮಾರಾಮಾರಿಯಲ್ಲಿ ಮೋಹನ್, ರೇಣುಕ, ಬಾಲರಾಜು, ಅರುಣ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬೈಕ್ ಮತ್ತು ಕಾರು ನಡುವೆ ಭಾನುವಾರ ಸಂಭವಿಸಿದ್ದ ಲಘು ಅಪಘಾತ ಸಂಬಂಧ ಶ್ರೀನಿವಾಸ ಹಾಗೂ ಹರೀಶ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಹೊತ್ತಿದ ದ್ವೇಷಾಗ್ನಿ ಉಭಯ ರೌಡಿ ಗುಂಪುಗಳ ನಡುವೆ ಕಾಳಗಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯ ಭೀತ ಜನತೆ: ಎರಡೂ ಗುಂಪಿನ ರೌಡಿಗಳು ಲಾಂಗ್ ಮತ್ತು ಮಚ್ಚು ಹಿಡಿದು ಘರ್ಷಣೆಗೆ ಇಳಿದಿದ್ದರಿಂದ ಜನರು ಭಯಭೀತರಾಗಿದ್ದರು. ಆ ವೇಳೆ ಕಗ್ಗಲೀಪುರದ ವರ್ತಕರು ಆತಂಕದಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದರು. ಫುಟ್ಪಾತ್ ವ್ಯಾಪಾರಿಗಳು, ಪಾದಾಚಾರಿಗಳು ಭೀತಿಯಿಂದ ಓಡಿದರು.
ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಸ್ಥಳಕ್ಕೆ ರಾಮನಗರ ಎಸ್ಪಿ ಅನುಪಮ್ ಅಗ್ರವಾಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಿದ್ದಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.