ಬೆಂಗಳೂರು ಗ್ರಾಮಾಂತರ

ಆಸೆಗಳಿಗೆ ಅಂಕೆಯಿರಲಿ: ಪೇಜಾವರ ಶ್ರೀ

Published On :

ಆನೇಕಲ್ಲು: ಮಾನವ ಕಷ್ಟ ಕೋಟಲೆಗಳನ್ನು ದಾಟಿ ಸುಖದ ಜೀವನ ಬೇಕೆಂದು ಅರಸುವುದು ತಪ್ಪಲ್ಲ. ಅತಿ ಆಸೆಯಿಂದ ಅನಾಹುತಗಳಿಗೆ ಎಡೆಕೊಡದೇ ಇರುವುದರಲ್ಲಿ ತೃಪ್ತಿ ಪಡಬೇಕು ಹಾಗೂ ಆಸೆಗಳಿಗೆ ಅಂಕೆಯಿರಬೇಕೆಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಅವರು  ತಾಲೂಕಿನ ಚಿಕ್ಕಹೊಸಹಳ್ಳಿಯಲ್ಲಿ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಹಾಗೂ ವಿಮಾನ ಗೋಪುರ ಲೋಕಾರ್ಪಣೆ ಮಾಡಿಮಾತನಾಡಿದರು.
ಡಾ. ಆನಂದ ಗುರೂಜಿ ಮಾತನಾಡಿದರು. ರಾಜಾಪುರ ಶ್ರೀಗಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮಿ, ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕುಂಭಕೋಣಂ, ಬಳ್ಳನಪುರ, ಬೆಳಗಾವಿ, ನಾಗಲಾಪುರ ಶ್ರೀಗಳು ಸಾನಿದ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಅಚ್ಯುತರಾಜು ಇತರರಿದ್ದರು.

ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ
ಚನ್ನಪಟ್ಟಣ: ಕಾಲು ಬಾಯಿ ಜ್ವರದ ತೀವ್ರತೆಯನ್ನು ಅರಿತಿರುವ ತಾಲೂಕು ಪಶುವೈದ್ಯ ಇಲಾಖೆ ಈಬಾರಿ ಮುನ್ನೆಚ್ಚರಿಕೆ ತೆಗೆದು ಕೊಂಡಿದ್ದು ತಾಲೂಕಿನಾದ್ಯಂತ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ. ಫೆ.15 ರಿಂದ ಮಾ.14ರ ವರೆಗೆ ಒಂದು ತಿಂಗಳ ಕಾಲ ಲಸಿಕೆ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ  ಎಲ್ಲಾ ಗ್ರಾಮಗಳ 46754 ರಾಸುಗಳಿಗೆ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿದೆ.

ಈಜು ಕೊಳದಲ್ಲಿ ಯುವಕ ಸಾವು
ರಾಮನಗರ: ಖಾಸಗಿ ಈಜು ಕೊಳದಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಮೆಹಬೂಬ್ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಗೀತಾ ಮಂದಿರ ಬಡಾವಣೆ ನಿವಾಸಿ ವೆಂಕಟೇಶ್ವವ ಅವರ ಪುತ್ರ ಯೋಗಾನಂದ್(17) ಮೃತಪಟ್ಟ ಯುವಕ. ತನ್ನ ಸ್ನೇಹಿತರೊಡಗೂಡಿ ಮೆಹಬೂಬ್ ನಗರದಲ್ಲಿರುವ ಜೆ.ಕೆ.ಎಚ್. ಈಜುಕೊಳದಲ್ಲಿ ಈಜಲು ತೆರಳಿದ್ದನು. ಈತನಿಗೆ ಅಲ್ಪಸ್ವಲ್ಪ ಈಜು ಬರುತ್ತಿತ್ತು, ಕೊಳದ ಮಧ್ಯದಲ್ಲಿ ಸಿಲುಕಿದ ಈತ ಮುಳುಗಿ ಸಾವನ್ನಪ್ಪಿದ್ದಾನೆ. ಯೋಗಾನಂದ್ ಸಾವಿಗೆ ಈಜುಕೊಳದ ಮಾಲೀಕ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ತಂದೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ
ಚನ್ನಪಟ್ಟಣ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟೆಂಪೋ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಸಿಪಿಟಿ ಗಾರ್ಡನ್ ಬಳಿ ನಡೆದಿದೆ. ಸುರೇಶ್(35) ಗಾಯಗೊಂಡ ವ್ಯಕ್ತಿ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ
ರಾಮನಗರ: ಫೆ.15ರ ಬೆ. 10ಕ್ಕೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ನಲಿಕಲಿ, ಗುಣಾತ್ಮಕ ಶಿಕ್ಷಣ, ಪಠ್ಯಕ್ರಮ ಸೇರಿದಂತೆ ಇನ್ನಿತರ ಶೈಕ್ಷಣಿಕ ವಿಷಯಗಳ ಬಗ್ಗೆ ಪ್ರಬಂಧ ಮಂಡನೆಯಾಗಲಿದೆ. ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪಾಲ್ಗೊಳ್ಳುವರು. ಈ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಫೆ.14ರಿಂದ 16ರವರೆಗೆ ಅನ್ಯಕಾರ್ಯನಿಮಿತ್ತ ರಜೆ(ಒಒಡಿ) ಸೌಲಭ್ಯವನ್ನು ಸರ್ಕಾರ ಮಂಜೂರು ಮಾಡಿದೆ.

ಬೆಸ್ಕಾಂ ಗ್ರಾಹಕರ ಸಭೆ
ರಾಮನಗರ: ಬೆಸ್ಕಾಂನಿಂದ ಫೆ.12ರ ಮ.3ಕ್ಕೆ ಚನ್ನಪಟ್ಟಣ ನಗರ ಉಪವಿಭಾಗೀಯ ಕಚೇರಿ ಆವರಣದಲ್ಲಿ ಗ್ರಾಹಕರ ಸಭೆ ನಡೆಯಲಿದೆ. ತಾಲೂಕಿನ ಬೆಸ್ಕಾಂ ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದೆಂದು ಬೆಸ್ಕಾಂ ಎಇಇ ತಿಳಿಸಿದ್ದಾರೆ.

ತಾಲೂಕು ಪಂಚಾಯತಿ 13ನೇ ಸಾಮಾನ್ಯ ಸಭೆ
ರಾಮನಗರ: ತಾಪಂ 13ನೇ ಸಾಮಾನ್ಯ ಸಭೆಯು ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಫೆ.15ರ ಬೆ.11ಕ್ಕೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾ.ಪಂ. ಇಒ ವೆಂಕಟೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.