ಸಾಂಸ್ಕೃತಿಕ ತಲ್ಲಣಗಳಿಂದ ಜನಪದಕ್ಕೆ ಆತಂಕ
ದೊಡ್ಡಬಳ್ಳಾಪುರ: ಜನಪದ ಸಂಸ್ಕೃತಿಯ ಜೀವಾಳವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ತಲ್ಲಣಗಳಿಂದ ಜನಪದ ಆತಂಕ ಎದುರಿಸುತ್ತಿದೆ ಎಂದು ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಲಕ್ಷ್ಮೀ ಅಭಿಪ್ರಾಯಪಟ್ಟರು.
ತಾಲೂಕಿನ ಕೋಲಿಗೆರೆ ಗ್ರಾಮದ ಸತೀಶ್ಚಂದ್ರ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಜಾನಪದ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆದ ಜಾನಪದ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಎಲ್ಲ ಸಾಹಿತ್ಯಗಳಿಗೂ ಮಾತೃ ಸಾಹಿತ್ಯವಿದ್ದಂತೆ. ಪಾಶ್ಚಿಮಾತ್ಯ ಮತ್ತು ಪೌರಾತ್ಯ ಸಂಸ್ಕೃತಿಗಳ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ತನ್ನ ಸತ್ವ ಕಳೆದುಕೊಳ್ಳದೆ ಹೊಸ ಬಗೆಯ ಅನ್ವೇಷಣೆಗಳಿಗೆ ಅದು ಸಾಕ್ಷಿಯಾಗಿದೆ. ಇಂದಿಗೂ ಜನಮಾನಸದ ಅವಿಚ್ಛಿನ್ನ ಆದರ್ಶವಾಗಿ ಜನಪದ ಉಳಿದಿದೆ ಎಂದರು.
ಹಿರಿಯ ಜಾನಪದ ಸಾಹಿತಿ ಟಿ.ಕೆಂಪಹನುಮಯ್ಯ ಮಾತನಾಡಿ ಜಾನಪದ ಗ್ರಾಮೀಣ ಜನರ ಜೀವನಾಡಿಯಾಗಿದೆ. ಸಂಸ್ಕೃತಿಯ ಅವಿಭಾಜ್ಯ ಅಂಗವೂ ಅದಾಗಿದ್ದು, ಗ್ರಾಮೀಣ ಜನರ ತಮ್ಮ ಬದುಕಿನ ನೈಜ ಅರ್ಥವಂತಿಕೆಯನ್ನು ಅದರ ಮೂಲಕ ಪಡೆಯುತ್ತಿದ್ದರು. ಇಂದು ವಿಶ್ವವಿದ್ಯಾಲಯಗಳೂ ಮಾಡದಿರುವ ಕೆಲಸವನ್ನು ಜನಪದರು ಮಾಡಿದ್ದಾರೆ ಎಂದರೆ ತಪ್ಪಲ್ಲ. ಜನಪದದ ಕುರಿತಾದ ಸಂಶೋಧನೆಗಳಿಗೆ ನೆರವಾಗವಂತೆ ಸಾಂಸ್ಕೃತಿಯ ಮೌಲ್ಯ ಹೊಂದಿರುವ ವಸ್ತು-ವಿಷಯಗಳನ್ನು ಜಾನಪದ ವಿಶ್ವವಿದ್ಯಾಲಯದ ಗಮನಕ್ಕೆ ತರುವ ಕೆಲಸ ಆಗಬೇಕು ಎಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎನ್. ಹನುಮಂತರಾಯಪ್ಪ ಮಾತನಾಡಿದರು. ಸತೀಶ್ಚಂದ್ರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ಆಂಜನೇಯಮೂರ್ತಿ, ಎಚ್.ಎನ್.ಕೆ. ರಾಜು, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಜಾನಪದ ಜಾಗೃತಿ ಸಮಾವೇಶದ ಸಂಚಾಲಕ ನಾಗಪ್ಪ, ಸತೀಶ್ಚಂದ್ರ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಿಯಾಜುದ್ದೀನ್ ಸೇರಿದಂತೆ ಅನೇಕರು ಹಾಜರಿದ್ದರು.
ಜಾನಪದ ಗೀತಗಾಯನ, ಕುಣಿತ, ಸುಗ್ಗಿ ಕುಣಿತ, ವಿವಿಧ ಬಗೆಯ ಮೂಲ ಜಾನಪದ ಗೀತವೈವಿಧ್ಯ, ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸುವ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

