ಬೆಂಗಳೂರು ಗ್ರಾಮಾಂತರ

ಇಂದು ಸೈಕಲ್ ಜಾಥಾ ಉದ್ಘಾಟನೆ

Published On :

ದೊಡ್ಡಬಳ್ಲಾಪುರ: ಇಲ್ಲಿನ ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ಟ್ರಸ್ಟ್ ಮತ್ತು ನಾಗದಳ ನೇತೃತ್ವದಲ್ಲಿ ಆಹಾರ ಜಾಗೃತಿಗಾಗಿ ನಡೆಯುತ್ತಿರುವ 6ನೇ ಸೈಕಲ್ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಫೆ.19ರ ಬುಧವಾರ ಬೆಳಗ್ಗೆ 8.30ಕ್ಕೆ ಮಾದಗೊಂಡನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಸಂಸ್ಥೆಗಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಚಿತ್ರದುರ್ಗಕ್ಕೆ ಜಾಥಾ ನಡೆಯಲಿದೆ. ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದು, ಆಹಾರ ತಜ್ಞ ಕೆ.ಸಿ.ರಘು ಮತ್ತಿತರರು ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ನಾಗದಳ ಮತ್ತು ತಾಲೂಕು ಬಳಕೆದಾರರ ಸಂಘವನ್ನು ಸಂಪರ್ಕಿಸಬಹುದು.
ಉದ್ಘಾಟನೆ
ಛಾಯಾಸುತ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಮೊದಲ ವರ್ಷದ ಧರ್ಮಸ್ಥಳ ಪಾದಯಾತ್ರೆ ಕಾರ್ಯಕ್ರಮ ಫೆ.19ರಂದು ಬೆಳಗ್ಗೆ 4 ಗಂಟೆಗೆ ಆರಂಭವಾಗಲಿದೆ. ತಾಲೂಕಿನ ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ಪಾದಯಾತ್ರಿ ಆರಂಭವಾಗಲಿದ್ದು, ಶ್ರೀಶನಿಮಹಾತ್ಮಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವುದು. ಆಸಕ್ತ ಭಕ್ತಾದಿಗಳು ಕೇಸರಿ ಸಮವಸ್ತ್ರ ಧರಿಸಿ ಅಗತ್ಯ ವಸ್ತುಗಳೊಂದಿಗೆ ಆಗಮಿಸಲು ಕೋರಲಾಗಿದೆ. ವಿವರಗಳಿಗೆ 9916666669 ಅಥವಾ 9620449168 ಸಂಪರ್ಕಿಸಿರಿ.
ಆಯ್ಕೆ
ತಾಲೂಕಿನ ಮೆಣಸಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರು  ಪದಾಧಿಕಾರಿಗಳ ಆಯ್ಕೆ ನಡೆದಿದೆ. ಎಂಪಿಸಿಎಸ್‌ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಸಿ.ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಸಿ.ಕೃಷ್ಣಪ್ಪ, ಎಂ.ಆರ್. ಚಂದ್ರಶೇಖರ್, ಎಚ್. ನಾರಾಯಣಪ್ಪ, ಜಿ. ನಂಜೇಗೌಡ, ಎಸ್. ಧರಣಿ, ಎಂ.ಮುನಿರಾಜು, ಎಂ.ಸಿ.ಮಾದೇಗೌಡ, ಮುನಿರತ್ನಮ್ಮ ಮತ್ತು ಜಯಮ್ಮ ಆಯ್ಕೆಯಾಗಿದ್ದಾರೆ.
ಇಂದು ಪ್ರತಿಭಟನೆ
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು 1 ವರ್ಷವಾಗುತ್ತಾ ಬಂದರೂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಅಂತಿಮಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ಹಲವು  ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಅನಾಥವಾಗಿದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕೂಡಲೇ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ ಮೀಸಲಾತಿ ಪ್ರಕಟಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮತ್ತು ದೊಡ್ಡಬಳ್ಳಾಪುರ ನಗರಸಭೆಯ ಅವ್ಯವಸ್ಥೆ ಖಂಡಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.