ಬೆಂಗಳೂರು ಗ್ರಾಮಾಂತರ

ಫುಟ್ಪಾತ್ ವ್ಯಾಪಾರಿಗಳ ಮುಂದುವರಿದ ರಾದ್ಧಾಂತ

Published On :

ಚನ್ನಪಟ್ಟಣ: ಪಟ್ಟಣದ ಫುಟ್ಪಾತ್ ತೆರವು ಹೈಡ್ರಾಮಾಗೆ ಇನ್ನೂ ಮುಕ್ತಿ ದೊರಕಲ್ಲ. ಬುಧವಾರ ಫುಟ್ಪಾತ್ನಲ್ಲಿ ಸಾಮಗ್ರಿಗಳನ್ನು  ಇರಿಸಲು ಮುಂದಾದ ವ್ಯಾಪಾರಿಗಳನ್ನು ನಗರಸಭೆ ಅಧಿಕಾರಿಗಳು ತೆರವು ಗೊಳಿಸಿದ್ದರಿಂದ ಮತ್ತೆ ರದ್ದಾಂತ ಮುಂದುವರೆದಿದೆ. ಫುಟ್ಪಾತ್ ತೆರವು ಗೊಳಿಸಿದ ಹಿನ್ನೆಲೆಯಲ್ಲಿ ರಸ್ತೆಬದಿ ವ್ಯಾಪಾರಿಗಳು ನಗರಸಭೆಗೆ ಮುತ್ತಿಗೆ ಹಾಕಿ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದರು. ಕೆಲ ಕಾಲ ನಗರಸಭೆ ಅಧಿಕಾರಿಗಳು ಮತ್ತು ಫುಟ್ಪಾತ್ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಸಚಿವರು ಹೇಳಿದ್ದಾರೆ: ಫುಟ್ಪಾತ್ ವ್ಯಾಪಾರಿಗಳು ತೆರವು ಗೊಳಿಸದಂತೆ ಸಮಾಜಕಲ್ಯಾಣ ಸಚಿವ ಆಂಜ ನೇಯ ಪತ್ರ ನೀಡಿದ್ದಾರೆ, ಆದರೂ ನೀವು ತೆರವು ಗೊಳಿಸುತ್ತಿರುವುದು ನ್ಯಾಯ ಸಮ್ಮತವೇ ಎಂದು ಪ್ರಶ್ನಿಸಿದರು. ನಗರಸಭಾ ಸದಸ್ಯರು ಫುಟ್ಪಾತ್ ತೆರವು ಗೊಳಿಸುವಂತೆ ಸೂಚಿಸಿದ್ದಾರೆ. ಸಚಿವರು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪತ್ರದಲ್ಲಿ ತಿಳಿಸಿದ್ದು, ತಾತ್ಕಾಲಿಕವಾಗಿ ಕರಬಲ ಮೈದಾನದಲ್ಲಿರುವ ಅಂಗಡಿ ಮಳಿಗೆಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸದ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ, ಫುಟ್ಪಾತ್ ವ್ಯಾಪಾರಿಗಳ ನಡುವೆ  ಈ ಸಂಬಂಧ ಸಾಕಷ್ಟು ವಾದ ವಿವಾದಗಳು ನಡೆದವು. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಪೌರಾಯುಕ್ತರು ತಿಳಿಸಿ ಡಿಸಿ ಕಚೇರಿಯತ್ತ ತೆರಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.