ಬೆಂಗಳೂರು ಗ್ರಾಮಾಂತರ

ಪ್ರತಿಭೆ ಅನಾವರಣಗೊಳಿಸುವ ಕಾರ್ಯ ನಡೆಯಲಿ

Published On :

ಕನಕಪುರ: ವಿದ್ಯಾರ್ಥಿಗಳಲ್ಲಿನ ವೈವಿಧ್ಯತೆಗಳನ್ನು ಅರಿತುಕೊಂಡು ಅವರಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಉತ್ತೇಜಿಸುವ ಅಗತ್ಯ ವೇದಿಕೆಗಳನ್ನು ಕಲ್ಪಿಸಿ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯವನ್ನು ಶಾಲಾ ಆಡಳಿತ ಮಂಡಳಿಗಳು ನಡೆಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಗಮಕಕಲಾ ಪರಿಷತ್ ಅಧ್ಯಕ್ಷ
ರಾಮಸುಬ್ರಾಯ ಶೇಠ್ ಹೇಳಿದ್ದಾರೆ.
ಅವರು ಕನಕಪುರದ ಮದರ್ ಥೆರೇಸಾ ಅಂತರರಾಷ್ಟ್ರೀಯ ಶಾಲಾ ವಾರ್ಷಿಕೋತ್ಸವದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜೋಗಿ ಚಲನಚಿತ್ರ ಖ್ಯಾತಿಯ ನಟಿ ಜನ್ನೀಫರ್ ಕೋತ್ವಾಲ್ ನೆರವೇರಿಸಿ ಶುಭ ಹಾರೈಸಿದರು. ತಿರುಮಲ ವಿದ್ಯಾಸಂಸ್ಥೆ ಸ್ಥಾಪಕ ಡಿ. ವೆಂಕಟರಮಣಸ್ವಾಮಿ (ಗುಂಡಣ್ಣ) ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನಗಳ ವಿತರಣೆಯನ್ನು ಟ್ರಸ್ಟಿಗಳಾದ ಡಾ.ಸೀನಪ್ಪ, ವೆಂಕಟೇಶ್ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳು ಟಿ.ಪಿ. ಕೈಲಾಸಂ ವಿರಚಿತ ಪೋಲಿಕಿಟ್ಟಿ ನಾಟಕದ ಪ್ರದರ್ಶನ ನೀಡಿ ಗಮನ ಸೆಳೆದರು. ಶಾಲಾಮಕ್ಕಳಿಂದ ಆಕರ್ಷಕ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು.
ಸಮಾರಂಭದ ಮುಖ್ಯಅತಿಥಿಗಳಾಗಿ ಪಿರಮಿಡ್ ವ್ಯಾಲಿಯ ಧರ್ಮದರ್ಶಿ ಐ.ವಿ.ರೆಡ್ಡಿ, ವ್ಯವಸ್ಥಾಪಕ ಕೆಬ್ಬೆದೊಡ್ಡಿ ನಾಗರಾಜು, ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ಆಗಮಿಸಿದ್ದರು. ಎಂಐಟಿಎಸ್ ಕಾರ್ಯನಿರ್ವಾಹಕ ಧರ್ಮದರ್ಶಿ ಕೆ.ವಿ. ಲಕ್ಷ್ಮೀಶ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪಪ್ರಾಂಶುಪಾಲ ಕೆ.ವಿ. ಸೀತಾರಾಮು ನಿರೂಪಿಸಿದರು. ಪ್ರಾಂಶುಪಾಲ ಮೋಹನಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.