ಫುಟ್ಪಾತ್ ವ್ಯಾಪಾರಕ್ಕೆ ಕೊನೆಗೂ ಪರಿಹಾರ
ಚನ್ನಪಟ್ಟಣ: ಕಳೆದ 10 ವರ್ಷಗಳಿಂದ ನಗರಸಭೆ ಪಾಲಿಗೆ ಕಗ್ಗಂಟಾಗಿರುವ ಫುಟ್ಪಾತ್ ವ್ಯಾಪಾರಕ್ಕೆ ಕೊನೆಗೂ ಪರಿಹಾರ ಹುಡುಕಿ ಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ಸಫಲ ಗೊಂಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಪೌರಾಯುಕ್ತ ಜಗದೀಶ್ ಅತಿಹೆಚ್ಚು ಜನಸಂದಣಿ ಇರುವ ಪಟ್ಟಣದ ಅಂಚೇ ಕಚೇರಿ, ಎಂ.ಜಿ.ರಸ್ತೆ ಮತ್ತು ರೈಲು ನಿಲ್ದಾಣ ರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರ ನಿಷೇಧಿಸಿದ್ದು ಜನ ಸಂಚಾರ ಕಡಿಮೆ ಇರುವ ಇತರ ರಸ್ತೆಗಳಲ್ಲಿ ಫುಟ್ಪಾತ್ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜ.18 ರಿಂದ ನಗರಸಭೆ ಫುಟ್ಪಾತ್ ಕಾರ್ಯಾಚರಣೆ ಆರಂಭಿಸಿದ್ದು ಕೆಲ ಸಂಘಟನೆಗಳು ವಿರೋಧಿಸಿದ್ದು ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಸಮಾಜಕಲ್ಯಾಣ ಇಲಾಖೆ ಸಚಿವರು ವ್ಯಾಪಾರ ನಡೆಸುವಂತೆ ಶಿಫಾರಸು ಪತ್ರ ನೀಡಿದ್ದಾರಾದರೂ ಫೆ.20 ರಂದು ಶಾಸಕರು ಮತ್ತು ನಗರಸಭಾ ಸದಸ್ಯರ ಸಭೆಯಲ್ಲಿ ವ್ಯಾಪಾರಕ್ಕೆ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ಮುಂದಿನ ಹಂತವಾಗಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಮೆಚ್ಚುಗೆ: ಫುಟ್ಪಾತ್ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ 18 ಮಂದಿ ನಗರಸಭಾ ಸದಸ್ಯರು, 8 ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ. ಎಂ.ಜಿ ರಸ್ತೆಯಲ್ಲಿರುವ ಬಾಲಕಿಯರ ಪದವಿಪೂರ್ವ ಕಾಲೇಜಿನಿಂದಸಹ ವ್ಯಾಪಾರದಿಂದ ಸಾಕಷ್ಟು ಕಿರಿಕಿರಿಯಾಗುತ್ತಿರುವ ಬಗ್ಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾನೂನು ಕ್ರಮ: ಮೊದಲ ಹಂತವಾಗಿ ಫುಟ್ಪಾತ್ ವ್ಯಾಪಾರಿಗಳಿಗೆ ಮನವರಿಕೆ ಮಾಡಿ ಕೊಡಲಾಗುವುದು, ಈಗಾಗಲೆ ತೆರವುಗೊಳಿಸಲಾಗಿದ್ದು ಇದಕ್ಕೂ ಮೀರಿ ಫುಟ್ಪಾತ್ ವ್ಯಾಪಾರ ನಿಷೇಧಿಸಿರುವ ಈ ಮೂರು ರಸ್ತೆಗಳಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದೇ ಆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಚಾಣೆ ಮುಂದೂಡಿಕೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ 5.5 ಗುಂಟೆ ಜಮೀನಿನ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಫೆ.28ಕ್ಕೆ ಮುಂದೂಡಲಾಗಿದೆ. ವಿವಾದಿತ ಸ್ಥಳದಲ್ಲಿ ಯಾರೂ ಸುಂಕ ವಸೂಲಿ ಮಾಡಲು ಯಾವುದೇ ಅವಕಾಶ ವಿಲ್ಲ. ಈಬಗ್ಗೆ ಕರಪತ್ರ ಮತ್ತು ಫಲಕ ಹಾಕುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಈ ಜಾಗವನ್ನು ನಗರಸಭೆಗೆ ಸೇರಿಸಿಕೊಳ್ಳಲು ನಾವು ನ್ಯಾಯಾಲಯದಲ್ಲಿ ಸೂಕ್ತವಾಗಿ ಕಾನೂನು ಹೋರಾಟ ನಡೆಸುತ್ತಿದ್ದು, ನಮ್ಮ ವಕೀಲರು ಸಮರ್ಥವಾಗಿ ದಾಖಲಾತಿಗಳನ್ನು ಮಂಡಿಸಿ ವಾದಮಂಡಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಚೇ ಕಚೇರಿ ರಸ್ತೆಯಲ್ಲಿ ಒನ್ವೇ : ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪುರ ಠಾಣೆ ಪಿಎಸ್ಐ ವಿಜಯ್ ಕುಮಾರ್ ಅಂಚೇಕಚೇರಿ ರಸ್ತೆಯಲ್ಲಿ ಆಟೋಗಳಿಂದ ಆಗುತ್ತಿರುವ ಸಂಚಾರ ನಿಯಂತ್ರಣವನ್ನು ನಿಯಂತ್ರಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಂಚೇ ಕಚೇರಿ ರಸ್ತೆಯನ್ನು ಆಟೋಗಳಿಗೆ ಒನ್ ವೇ ಮಾಡಿದ್ದು, ಇನ್ನು ಅಂಚೇಕಚೇರಿ ರಸ್ತೆಯಿಂದ ಆಟೋಗಳು ಬರಬಹುದೇ ವಿನಾ ಚರ್ಚ್ ರಸ್ತೆಕಡೆಯಿಂದ ಹೋಗುವಂತಿಲ್ಲ. ಅಣ್ಣೇಗೌಡ ವೃತ್ತವನ್ನು ಬಳಸಿ ಕೊಂಡು ಶಿವಾನಂದ ಚಿತ್ರ ಮಂದಿರದ ರಸ್ತೆ ಮೂಲಕ ಮಾತ್ರ ಪ್ರವೇಶಿಸ ಬೇಕಾಗಿದೆ ಎಂದು ತಿಳಿಸಿದರು.
ಖಾಸಗಿ ಬಸ್ಗಳು ಚರ್ಚ್ ರಸ್ತೆಯಬಳಿ ತಿರುಗಿಸಿ ಕೊಳ್ಳುತ್ತಿದ್ದು ಇದಕ್ಕೆ ನಿರ್ಬಂಧ ವಿದಿಸಲಾಗಿದೆ ಇನ್ನುಮುಂದೆ ಅಣ್ಣೇಗೌಡ ಸಕರ್ಲ್ನಿಂದಲೇ ಎಲ್ಲಾ ಖಾಸಗಿ ಬಸ್ಗಳು ತಿರುಗಿಸಿ ಕೊಂಡು ಬರಬೇಕಿದೆ ಎಂದು ತಿಳಿಸಿದ ಅವರು ಪ್ರಾಯೋಗಿಕವಾಗಿ ಕೆಲ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾಮಾಗಾರಿ ಆರಂಭ ಗೊಂಡಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ವೃತ್ತದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದ್ದು ಇದನ್ನು ನಿಯಂತ್ರಿಸಲು ತೀವ್ರ ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲೂ ನಮ್ಮ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

