ಭಾರತದ ಪ್ರಗತಿಗಾಗಿ ಮೋದಿ ಅನಿವಾರ್ಯ: ವಾಸು
ಆನೇಕಲ್ಲು: ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಸ್ವತಂತ್ರ ನಿರ್ಧಾರ ಕೈಗೊಳ್ಳುವಂತಹ ಪ್ರಭಾವಿ ನಾಯಕನ ಅವಶ್ಯಕತೆಯಿದೆ. ವರಿಷ್ಠರ ಅಣತಿಯಂತೆ ನಡೆದುಕೊಳ್ಳುವ ಕೈಗೊಂಬೆಯಂತಹ ವ್ಯಕ್ತಿಯಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಅವರು ರಾಷ್ಟ್ರೀಯ ಹೆದ್ದಾರಿ 7 ಕಿತ್ತಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಚಾಯ್ಪೆ ಚರ್ಚಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭ್ರಷ್ಟಾಚಾರ ಹಾಗೂ ವಂಶವಾಹಿನಿ ಆಡಳಿತ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಪ್ರತಿಭೆ ಹಾಗೂ ಅನುಭವ ಇರುವವರು ಮೂಲೆಗುಂಪಾಗುತ್ತಿದ್ದು ದೇಶವನ್ನು ಮುನ್ನಡೆಸುವ ದಿಟ್ಟ ರಾಜಕಾರಣಿಯ ಆಯ್ಕೆ ಅನಿವಾರ್ಯವಾಗಿದೆ ಎಂದರು.
ದೇಶದ ಉದ್ಗಗಲಕ್ಕೂ ಮೋದಿ ಅವರ ಭಾಷಣ ಕೇಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಅವರ ಸೂಜಿಗಲ್ಲಿನಂತಹ ಮಾತುಗಳನ್ನು ವಯೋಧರ್ವುದ ಭೇದವಿಲ್ಲದೇ ಎಲ್ಲರೂ ತದೇಕಚಿತ್ತರಾಗಿ ಆಲಿಸುತ್ತಾರೆ.
ಇದರರ್ಥ ದೇಶವನ್ನು ಸಮರ್ಥವಾಗಿ ಕೊಂಡೊಯ್ಯುವ ನಾಯಕನೊಬ್ಬ ಭಾರತಾಂಬೆಯ ಮಡಿಲಲ್ಲಿ ಉದಯಿಸಿದ್ದಾನೆ. ಯುಪಿಎ ನೀತಿಗಳಿಂದ ಬೇಸರಗೊಂಡ ದೇಶವಾಸಿಗಳಿಗೆ ಪರ್ಯಾಯ ಆಯ್ಕೆ ಬಿಜೆಪಿಯಿಂದ ಮಾತ್ರ. ಬಲಿಷ್ಠ ಭಾರತ ನಿರ್ಮಾಣಕ್ಕೆ ಲೋಕಸಭೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ಕೋರಿದರು.
ಮುಖಂಡರಾದ ತೇಜಸ್ವಿನಿ ನಟರಾಜ್, ಎಂ. ರಾಮಕೃಷ್ಣ, ಸಾ.ವ. ಪ್ರಕಾಶ್, ಹರಿಪ್ರಸಾದ್, ರಾಘವೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

