ಹೈನುಗಾರಿಕೆ: ಬೊಂಬೆನಾಡು ಮುಂಚೂಣಿಯಲ್ಲಿ
ಚನ್ನಪಟ್ಟಣ: ಹೈನುಗಾರಿಕೆಯಲ್ಲಿ ಬೊಂಬೆನಾಡು ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು ತಾಲೂಕಿನ 140 ಹಾಲು ಉತ್ಪಾದಕರ ಸಹಕಾರ ಸಂಘಗಳು ಸರಾಸರಿ 750 ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದು, ರಾಜ್ಯದಲ್ಲೇ
ಅತ್ಯಧಿಕ ಹಾಲು ಉತ್ಪಾದನೆ ಮಾಡುತ್ತಿರುವ ತಾಲೂಕು ಇದಾಗಿದೆ ಎಂದು ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಗುರುಲಿಂಗಯ್ಯ ತಿಳಿಸಿದರು. ತಾಲೂಕಿನ ನಾಗವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ನಿರ್ಮಿಸಿರುವ ಮೊದಲನೇ ಮಹಡಿಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, 2 ಸಾವಿರ ರಾಸುಗಳು ಕಾಲುಬಾಯಿ ಜ್ವರದಿಂದ ಸಾವಿಗೀಡಾಗಿದ್ದರೂ ಈ ತಾಲೂಕಿನ ಹಾಲು ಉತ್ಪಾದನೆಯಲ್ಲಿ ಯಾವುದೇ ಇಳಿಕೆ ಕಂಡಿಲ್ಲ ಎಂದರು.
ಸಾಕಷ್ಟು ಸಂಕಷ್ಟದ ನಡುವೆಯೂ ರೈತರು ಧೈರ್ಯದಿಂದ ಹೈನುಗಾರಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪ್ರತಿವರ್ಷ ಈ ತಾಲೂಕಿಗೆ 85 ಕೋಟಿ ರು. ಗಳಷ್ಟು ಹಣ ರೈತರಿಗೆ ಬಟವಾಡೆಯಾಗುತ್ತಿದೆ. ಇದರ ಜತೆಗೆ ಬಮೂಲ್ ಕಲ್ಯಾಣ ಟ್ರಸ್ಟ್‌ವತಿಯಿಂದ ಪ್ರತಿವರ್ಷ 10 ಕೋಟಿ ರೂ. ಗಳಿಗೂ ಹೆಚ್ಚು ಹಣ ವಿವಿಧ ಯೋಜನೆಗಳ ಮೂಲಕ ಬಿಡುಗಡೆಯಾಗುತ್ತಿದೆ ಎಂದರು.
ಕ್ಷೀರಭಾಗ್ಯಕ್ಕೆ ಹಾಲಿನ ಪುಡಿ: ಈ ಹಿಂದೆ ಒಕ್ಕೂಟದ ಹಾಲಿನ ಪುಡಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ, ಕ್ಷೀರಭಾಗ್ಯದ ಮೂಲಕ ಸರ್ಕಾರ ಪ್ರತಿ ಕೆ.ಜಿ ಹಾಲಿನ ಪುಡಿಗೆ 180ರೂ. ನೀಡುತ್ತಿದೆ. ಕೆಎಂಎಫ್ ಎಲ್ಲಾ ಹಾಲಿನ ಪುಡಿಯನ್ನು ಕ್ಷೀರಭಾಗ್ಯ ಯೋಜನೆಗೆ ನೀಡುತ್ತಿದ್ದು ಇದೀಗ ಮಾರುಕಟ್ಟೆಯಲ್ಲಿ ಹಾಲಿನ ಪುಡಿಗೆ ಕೊರತೆ ಉಂಟಾಗಿ ಪ್ರತಿ ಕೆ.ಜಿ.ಗೆ 280 ರೂ. ದರ ಸಿಗುತ್ತಿದೆಯಾದರೂ ನಮ್ಮ ಒಕ್ಕೂಟ ಮಕ್ಕಳಿಗೆ ಹಾಲು ನೀಡುವ ಸದುದ್ದೇಶದ ಕೆಲಸಕ್ಕೆ ನಷ್ಟವಾದರೂ ಹಾಲಿನ ಪುಡಿ ವಿತರಣೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಎನ್.ಎಸ್.ಗೌಡ, ಉಪವ್ಯವಸ್ಥಾಪಕ ಡಾ.ಕೆ.ಸಿ.ಶ್ರೀಧರ್, ವಿಸ್ತರಣಾಧಿಕಾರಿ ಶಿವಪ್ರಸನ್ನ, ಸಂಘದ ಅಧ್ಯಕ್ಷ ಕಾಡೇಗೌಡ, ಬಸವರಾಜು, ನಿಂಗೇಗೌಡ, ಗಂಗಯ್ಯ, ಕೃಷ್ಣಯ್ಯ, ಮರಿಸ್ವಾಮಿ, ಅಂಕಯ್ಯ, ಜಯಮ್ಮ ಕಾರ್ಯದರ್ಶಿ ಎನ್.ಎಸ್.ಆನಂದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

