ಬೆಂಗಳೂರು ಗ್ರಾಮಾಂತರ

ಪಡಿತರ ಚೀಟಿ ನೀಡಿ ಇಲ್ಲ, ರಾಜಿನಾಮೆ ಕೊಡಿ

Published On :

ಆನೇಕಲ್ಲು: ಪಟ್ಟಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಬಹುತೇಕ ಜನರು ಬಡತನ ರೇಖೆಗಿಂತ ಕಡಿಮೆ ಆದಾಯದವರಾಗಿದ್ದಾರೆ. ಅರ್ಹರನ್ನು ಗುರ್ತಿಸಿ ಶೀಘ್ರ ಪಡಿತರ ಕಾರ್ಡ್ ನೀಡಿ ಅಥವಾ ರಾಜೀನಾಮೆ ನೀಡಿ ಹೋಗಬೇಕೆಂದು ಪುರಸಭಾ ಸದಸ್ಯ ಪದ್ಮನಾಭ ಆಗ್ರಹಿಸಿದ್ದಾರೆ.ಅವರು ತಾಲೂಕು ಕಚೇರಿಯ ಪಡಿತರ ಚೀಟಿ ನೀಡುವ ವಿಭಾಗಕ್ಕೆ ಬಂದಾಗ ನೂರಾರು ಜನರು ಸರದಿ ಸಾಲಿನಲ್ಲಿ ನಿಂತಿದ್ದನ್ನು ಕಂಡು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದಿನದ ಕೂಲಿಯನ್ನೇ ನಂಬಿಕೊಂಡಿರುವ ಇವರು ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಪಡಿತರ ಚೀಟಿ, ಆಧಾರ್‌ಕಾರ್ಡ್ ನೆಪದಲ್ಲಿ ದಿನವಿಡೀ ಕಚೇರಿ ಬಾಗಿಲಲ್ಲಿದ್ದರೆ, ಸಂಸಾರ ನಡೆಯುವುದೆಂತು. ಒಂದು ವಾರ್ಡಿಗೆ 50 ರಿಂದ 100 ಬಿಪಿಎಲ್ ಕಾರ್ಡ್ ಗುರ್ತಿಸಿದ್ದು ಕೇವಲ 5 ರಿಂದ 10 ಕಾರ್ಡ್ ನೀಡಿದ್ದಾರೆ. ಉಳಿಕೆ ಕಾರ್ಡುಗಳನ್ನು ಪಲಾನುಭವಿಗೆ ನೀಡುವ ದಿನಾಂಕ ಹಾಗೂ ಸ್ಥಳ ತಿಳಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿ, ನ್ಯಾಯವಾಗಿ ಕೆಲಸ ಮಾಡಿ ರಾಜಿನಾಮೆ ನೀಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.