ಬೆಂಗಳೂರು ಗ್ರಾಮಾಂತರ

ಶಾಸಕ ಎಚ್.ಸಿ. ಬಾಲಕೃಷ್ಣ ಹುಟ್ಟುಹಬ್ಬ

Published On :

ಮಾಗಡಿ: ಶಾಸಕ ಎಚ್.ಸಿ. ಬಾಲಕೃಷ್ಣ ತಮ್ಮ 49ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಎಚ್.ಸಿ.ಬಾಲಕೃಷ್ಣ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಪಟ್ಟಣದ ಐತಿಹಾಸಿಕ ಪ್ರಸಿದ್ಧ ತಿರುಮಲೆ ರಂಗನಾಥಸ್ವಾಮಿ ದೇವರಿಗೆ ಹಾಗೂ ವರಸಿದ್ದಿವಿನಾಯಕಸ್ವಾಮಿಗೆ ಅಭಿಷೇಕ, ಅರ್ಚನೆ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು ಪ್ರಾರ್ಥಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
 ಇದೇ ವೇಳೆ ಶಾಸಕ ಎಚ್.ಸಿ. ಬಾಲಕೃಷ್ಣ ವಿನಾಯಕಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಾಲೂಕಿನಲ್ಲಿ ಉತ್ತಮ ಮಳೆ ಬೀಳಲಿ, ರೈತರ,ಮಹಿಳೆಯರ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿದರು.  
ಜಿಪಂ ಸದಸ್ಯರಾದ ಎಂ.ಕೆ.ಧನಂಜಯ, ಕೆ.ಮುದ್ದುರಾಜ ಯಾದವ್, ವಿಜಯಕುಮಾರ್, ಹಂಸಕುಮಾರಿ, ತಾಪಂ ಅಧ್ಯಕ್ಷ ಜಿ.ಕೃಷ್ಣ, ಎಸ್. ಕಾಂತರಾಜು, ಜಿ.ವಿ. ರಾಮಣ್ಣ, ಎಂ. ರಾಮಣ್ಣ, ಬಮೂಲಲ್ನರಸಿಂಹಮೂರ್ತಿ, ಎಚ್.ಸಿ. ಬಾಲಕೃಷ್ಣ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಸೀಬೇಗೌಡ, ರೂಪೇಶ್‌ಕುಮಾರ್, ಎಂ.ಆರ್. ಮಂಜುನಾಥ್, ನರಸಿಂಹಮೂರ್ತಿ, ಗಂಗರಾಜು, ಕೃಷ್ಣಪ್ಪ, ಜಯಕುಮಾರ್, ರಾಜಣ್ಣ, ಶಂಕರಪ್ಪ, ಮೂರ್ತಿ, ಬಿ.ಟಿ. ವೆಂಕಟೇಶ್,ಪುರಸಭಾ ಸದಸ್ಯರಾದ ನಾಗೇಂದ್ರ, ಬಸವರಾಜು, ಎಚ್.ಜೆ. ಪುರುಷೋತ್ತಮ್,ನವಾಬ್, ಇಲಿಯಾಜ್, ಫೈರೋಜ್, ಉದ್ದೀಶ್, ಕುದೂರು ಹನುಮಂತರಾಜಪ್ಪ, ವೀರಪ್ಪ ಸೇರಿದಂತೆ ನೂರಾರು ಮಂದಿ ಅಭಿಮಾನಿಗಳು ಜೆಡಿಎಸ್ ಮುಖಂಡರು ಶಾಸಕ ಬಾಲಕೃಷ್ಣ ಅವರಿಗೆ ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.