ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ
ಆನೇಕಲ್ಲು: ಬೆಂಗಳೂರು ದಕ್ಷಿಣ ಭೂತಾನಹಳ್ಳಿಯ ಸರ್ವೆ ನಂಬರುಗಳಾದ 67, 68, 69 ಹಾಗೂ 70ರ ವಿಸ್ತೀರ್ಣ 539.27 ಎಕರೆ ಅರಣ್ಯ ಇಲಾಖೆಗೆ ಸೇರಿದ ಜಮೀನಿನ ಒತ್ತುವರಿ ತೆರವು ಕಾರ್ಯಚರಣೆಗೆ ಉಪ ಅರಣ್ಯ ಸಂರಕ್ಷಕ ಮಂಜುನಾಥ್ ಚಾಲನೆ ನೀಡಿದರು.
ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಹಿರೇಮಠ್ ಅವರ ದಾವೆ ಅನುಸರಿಸಿ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ನೆರವಿನಿಂದ ಜೆಸಿಬಿ ಮೂಲಕ ಕಾರ್ಯ ಪ್ರಾರಂಭಿಸಿದಾಗ ಗ್ರಾಮಗಳಾದ ಬ್ಯಾಲದ ಮರದ ದೊಡ್ಡಿ, ತಿಮ್ಮಯ್ಯನದೊಡ್ಡಿ ಗ್ರಾಮಸ್ಥರು ಅಡ್ಡಿಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕಂದಕ ನಿರ್ಮಿಸುವ ಮೂಲಕ ಅರಣ್ಯ ಭೂಮಿ ಎಲ್ಲೆಯನ್ನು ನಿಗದಿ ಮಾಡಲು ಮುಂದಾದಾಗ ರೈತರು ಹಾಗೂ ಬಡಾವಣೆಯ ನಿವಾಸಿಗಳು ತಾವು ಅಮಾಯಕರೆಂದೂ ಸಾಕಷ್ಟು ವರ್ಷಗಳಿಂದ ಇಲ್ಲೇ ವಾಸವಿರುವುದಾಗಿ ಮನವರಿಕೆ ಮಾಡಿಕೊಟ್ಟು ಬದುಕಲು ಅವಕಾಶ ಮಾಡಿಕೊಡಬೇಕೆಂದು ಬೇಡಿಕೊಂಡರು. 182 ಎಕರೆ ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಲಯದಲ್ಲಿ ದಾವೆ ಇದ್ದು ತಡೆಯಾಜ್ಞೆ ಇದೆ ಎಂದು ಎಪಿಎಂಸಿ ಉಪಾಧ್ಯಕ್ಷ ಜಯರಾಂ ದಾಖಲೆ ತೋರಿಸಿದರು.
ಹೈಕೋರ್ಟ್ ಆದೇಶವನ್ನು ಮೀರುವಂತಿಲ್ಲ, 1934ರಲ್ಲಿ ಈ ಜಮೀನುಗಳನ್ನು ಕಾಯ್ದಿಟ್ಟ ಅರಣ್ಯ ಪ್ರದೇಶ ಎಂದು ಘೋಷಿಸಿದೆ. ಸಮಿತಿ ಹಾಗೂ ಉಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾಗಿದೆ ಎಂದು ನಿವಾಸಿಗಳ ಮನವೊಲಿಸಿ ತೆರವು ಕಾರ್ಯ ಮುಂದುವರಿಸಿದರು. ಕೆಲ ಕಾಲ ಪ್ರತಿರೋಧ ಹೆಚ್ಚಾದಂತೆ 182 ಎಕರೆ ಪ್ರದೇಶ ಬಿಟ್ಟು ಉಳಿಕೆ 367.27 ಜಮೀನು ಸುಪರ್ದಿಗೆ ಮುಂದಾದರು. ಸಂಜೆವರೆಗೆ ನಡೆದ ಒತ್ತುವರಿ ತೆರವಿಗೆ ಅಲ್ಲಲ್ಲಿ ಅಡ್ಡಿ ಹಾಗೂ ಪ್ರತಿಭಟನೆಗಳು ನಡೆದವು. ಟ್ರೆಂಚ್ ಮೂಲಕ ತಮ್ಮ ಸ್ಥಳದ ನಿಗದಿಯಲ್ಲಿ ಅಧಿಕಾರಿಗಳು ನಿರತರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

