ಬೆಂಗಳೂರು ಗ್ರಾಮಾಂತರ

ಸಾಂಪ್ರದಾಯಿಕ ಆಹಾರ ಸೇವನೆ: ಉತ್ತಮ ಆರೋಗ್ಯ ಸಾಧ್ಯ

Published On :

ನೆಲಮಂಗಲ: ಸಾಂಪ್ರದಾಯಿಕ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯದ ಭಾಗ್ಯ ಕಾಣಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಬ್ರಾಹ್ಮಣ ಸಭಾದ  ಜಿಲ್ಲಾಧ್ಯಕ್ಷ ಕೆ.ಎಸ್. ಮೃತ್ಯುಂಜಯ ಹೇಳಿದರು.
ಅವರು ಮಂಗಳವಾರ  ಪಟ್ಟಣದ ಮಹಂತಿ ಮಠದಲ್ಲಿ ಶ್ರೀ ಮಾತಾ ವಿಪ್ರ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಹವ್ಯಾಸಿ ತಿಂಡಿ ತಿನಿಸು ಮಾರಾಟ ಮೇಳ ಹಾಗೂ ಕರಕುಶಲ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಮನೆಯಲ್ಲಿ ತಮ್ಮ ಕೈಚಳಕದ ಮೂಲಕ ರುಚಿ ರುಚಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ ಸಂಘಗಳ ಮೂಲಕ ಮಾರಾಟ ಮಾಡುವುದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರು ಅತ್ಯಾಕರ್ಷಕ ವಸ್ತುಗಳನ್ನು ಸ್ವಯಂ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ  ಎಂದು ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ  ಡಿ.ಎನ್. ವಿಶ್ವನಾಥ್  ಹೇಳಿದರು.
ಹವ್ಯಾಸಿ ಆಹಾರ ಮಾರಾಟಮೇಳ ನಡೆಸುವುದರಿಂದ ಸಂಘದ ಸದಸ್ಯರು ತಾವು ಕೂಡ ವಿಶಿಷ್ಟ ತಿಂಡಿ ತಯಾರಿಸಿ ತಮ್ಮ ರುಚಿಯನ್ನು ಗ್ರಾಹಕರು ಸವಿಯುವುದನ್ನು ಕಾಣಲು ಸಾಧ್ಯವಾಗುತ್ತದೆ ಎಂದು ವಿಪ್ರ ಮಂಡಳಿ ಅಧ್ಯಕ್ಷೆ ಲಲಿತಾ.ಎನ್.ಸ್ವಾಮಿ ನುಡಿದರು.
ಆಹಾರ ಮಾರಾಟ ಮೇಳದಲ್ಲಿ ಗ್ರಾಹಕರು ವಿಪ್ರ ಮಹಿಳೆಯರು ತಯಾರಿಸಿದಂತಹ ವಿವಿಧ  ರುಚಿ ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ರುಚಿಯನ್ನು ಸ್ವಾಧಿಸಿದರು ಹಾಗೂ ಕರಕುಶಲ ಹಾಗೂ ಸಾಂಪ್ರಾದಾಯಿಕ ವಸ್ತುಗಳನ್ನು ಪ್ರದರ್ಶಿಸಿದರು.
ಪುರಸಭಾ ಸದಸ್ಯ ಎಸ್. ಗಣೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ರಾಜಶೇಖರ್, ಟೌನ್ ಕೋ-ಆಪರೇಟೀವ್ ಸೊಸೈಟಿ ನಿರ್ದೇಶಕ ಜಯರಾಮ್, ರುದ್ರೇಶ್ವರ  ಪ್ರಾರ್ಥನಾ ಮಂದಿರದ ಕಾರ್ಯದರ್ಶಿ ಎನ್.ಜಿ.ರುದ್ರಮೂರ್ತಿ, ಶಿವಾನಂದಕುಮಾರ್, ಮಂಡಳಿಯ ಉಪಾಧ್ಯಕ್ಷೆ ಉಮಾ ಸೀತಾರಾಮ್, ಕಾರ್ಯದರ್ಶಿ ಗಾಯಿತ್ರಿ, ಖಜಾಂಚಿ ಗಾಯಿತ್ರಿ ಸುಬ್ಬಣ್ಣ, ಪದಾಧಿಕಾರಿಗಳಾದ ಸರಸ್ವತಿ ಭೂಷಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.