ಹೊಲೆಯ- ಮಾದಿಗ ಸಮಾಗಮ ಶೀಘ್ರ ತೀರ್ಮಾನ: ಗಂಗಾಧರ್
ಮಾಗಡಿ: ಹೊಲೆಯ- ಮಾದಿಗ ಸಮಾಗಮಕ್ಕೆ ದಲಿತ ಸಂಘಟನೆಗಳು ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖಂಡ ಗಂಗಾಧರ್ ತಿಳಿಸಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೊಲೆಯ -ಮಾದಿಗರು ಸಹೋದರರಿದ್ದಂತೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆದರೂ ಇತರರಿಂದ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಹಾಗೂ ನಮಗೆ ಸಿಗಬೇಕಾದ ಸರ್ಕಾರದ ಸೌಲತ್ತುಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಹೊಲೆಯ- ಮಾದಿಗ ಜನಾಂಗ ಸಮಾಗಮಗೊಳಿಸಲು ಒಕ್ಕೊರಲಿನ ಅಭಿಪ್ರಾಯವಾಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಜ.21 ರಂದು ಅಂತಿಮವಾಗಿ ಸಭೆ ಕರೆದು ಸಕಾರಾತ್ಮಕವಾದ ತೀರ್ಮಾನ ಕೈಗೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಹೊಲೆಯ - ಮಾದಿಗ ಜನಾಂಗ ಒಗ್ಗಟ್ಟಿನ ಸಂಘಟನೆಗೆ ಹೊಸರೂಪ ನೀಡಲಿದ್ದೇವೆ ಎಂದರು.
ತಾ.ಪಂ. ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ ಅಸ್ಪೃಶ್ಯತೆಯ ಜನಾಂಗಕ್ಕೆ ಅನ್ಯಾಯವಾಗಬಾರದು ಎಂಬ ಮಹತ್ವದ ಚಿಂತನೆಯಿಂದ ಹೊಲಯ ಮಾದಿಗರು ಒಗ್ಗಟ್ಟಾಗಿ ತಮ್ಮ ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ಪ್ರಭಲವಾದ ಹೋರಾಟಕ್ಕಿಳಿಯಬೇಕಿದೆ ಎಂದರು.
ಹಿರಿಯ ಮುಖಂಡ ಎಲ್.ಎನ್.ಸ್ವಾಮಿ ಮಾತನಾಡಿ ಶೋಷಿತ ಜನಾಂಗ ಊರ ಮುಂದೆ ಹೊಲವಿಲ್ಲ, ಕೆರೆ ಹಿಂದೆ ಗದ್ದೆಗಳಿಲ್ಲ,ಕೂಲಿ ನಾಲಿ ಮಾಡುವ ಹೊಲೆಯ ಮಾದಿಗರ ಸ್ಥಿತಿ ನಿಜಕ್ಕೂ ಶೋಚನೀಯವಾದುದು. ಇವರಿಗೆ ಸಿಗಬೇಕಾದ ಸೌಲತ್ತಿಗಾಗಿ ಒಗ್ಗಟ್ಟಿನ ಹೋರಾಟ ಅನಿವಾರ್ಯವಾಗಿದೆ.ಈ ಹೋರಾಟಕ್ಕೆ ಹೊಲೆಯ ಮಾದಿಗರು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಅಸ್ಪೃಶ್ಯರ ಒಡೆದ ಮನಸ್ಸುಗಳು ಒಂದಾಗಬೇಕು ಎಂದು ಯುವ ಮುಖಂಡ ಲಕ್ಷ್ಮಣ್ ತಿಳಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ಎಂ. ನಾಗರಾಜು ತಾಲೂಕಿನಲ್ಲಿ ಹೊಲೆಯ ಮಾದಿಗ ಜನಾಂಗ ಅಂದಾಜು 1 ಲಕ್ಷಕ್ಕೂ ಹೆಚ್ಚಿದೆ. ಒಗ್ಗಟಾಗಲು ಎಲ್ಲರು ಬೆಂಬಲಿಸಬೇಕಿದೆ ಎಂದರು. ಕುದೂರು ಮಂಜೇಶ್ ಮಾತನಾಡಿ ರಾಜಕೀಯೇತರ ಸಂಘಟನೆಗಳು ಬೆಳೆದಾಗ ಮಾತ್ರ ದಲಿತರಿಗೆ ದ್ವನಿ ಸಿಗುತ್ತದೆ ಎಂದರು. ಸೀಗೇಕುಪ್ಪೆ ಗ್ರಾ.ಪಂ. ಸದಸ್ಯ ಬೆಂಕಿ ಮಹದೇವ್, ಬೆಳ್ಳಿಯಪ್ಪ, ತೊರೆರಾಮನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯ ನರಸಿಂಹಯ್ಯ, ಚೌಡಯ್ಯ, ಕುಮಾರ್, ಬೆಳಗುಂಬದ ನರಸಿಂಹಯ್ಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

