ಬೆಂಗಳೂರು ಗ್ರಾಮಾಂತರ

ಅಂಕಪಟ್ಟಿಯೊಂದೆ ಮಕ್ಕಳ ಪ್ರತಿಭೆ ಅಳೆಯುವ ಸಾಧನವಲ್ಲ

Published On :

ಚನ್ನಪಟ್ಟಣ: ಅಂಕಪಟ್ಟಿಯೊಂದೆ ಮಕ್ಕಳ ಪ್ರತಿಭೆಯನ್ನು ಅಳೆಯುವ ಸಾಧನವಲ್ಲ, ಪ್ರತಿಯೊಂದು ಮಗುವಿಗೂ ವಿಭಿನ್ನ
ಕ್ಷೇತ್ರಗಳತ್ತ ಆಸಕ್ತಿ ಹೊಂದಿದ್ದು ಅದನ್ನು ಗುರುತಿಸಿ ಅವರಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ  ಪ್ರಯತ್ನವನ್ನು ಶಾಲೆಗಳು ಮಾಡಬೇಕಿದೆ ಎಂದು ಜಿ.ಪಂ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಕೇಂಬ್ರಿಡ್ಜ್ ಶಾಲೆಯಲ್ಲಿ ನಡೆದ  ಚಿತ್ರಕಲಾ ಮತ್ತು  ಕರಕುಶಲ ಕಲಾಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಾಗ ಮಕ್ಕಳು ಮಹತ್ತರವಾದ ಸಾಧನೆ ಮಾಡುತ್ತಾರೆ. ಪೋಷಕರು ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಿಗೊಳಿಸ ಬಾರದು ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಘುಕುಮಾರ್ ಶಿಸ್ತು ಮತ್ತು ಏಕಾಗ್ರತೆ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದದ್ದು, ಇವೆರಡನ್ನು ಮೈಗೂಡಿಸಿ ಕೊಂಡಿದ್ದೇ ಆದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸಾಧನೆ ಗೈಯಬಹುದಾಗಿದ ಎಂದರು. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ಈ ತಾಲೂಕಿನ ವಿದ್ಯಾರ್ಥಿಗಳಿಗೆ ಮಹಾನಗರದಲ್ಲಿ ದೊರೆಯುತ್ತಿರುವಂತಹ ಶಿಕ್ಷಣ ದೊರಕುವಂತಾಗಲಿ ಎಂಬ ಕಾರಣಕ್ಕೆ ಸ್ಥಾಪಿಸಿದ್ದು ಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲೆ, ಕರಕುಶಲ ಕಲೆ, ವಿಜ್ಞಾನ ಪ್ರಾತ್ಯಕ್ಷಿಕೆಗಳು ಎಲ್ಲರ ಮೆಚ್ಚುಗೆಗ ಪಾತ್ರವಾದವು, ಶಾಲೆಯ ಧರ್ಮದರ್ಶಿ ಚಿತ್ರಾ ಲಿಂಗೇಶ್‌ಕುಮಾರ್, ಪ್ರಾಂಶುಪಾಲೆ ರೇಣುಕಾದೇವಿ, ಉಪ ಪ್ರಾಂಶುಪಾಲೆ ಇಂದ್ರಾಣಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.