ಬೆಂಗಳೂರು ಗ್ರಾಮಾಂತರ

'ವಿವೇಕರ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳಿ'

Published On :

ವಿಜಯಪುರ: ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಯುವ ಪೀಳಿಗೆಯನ್ನು ಬಡಿದೆಬ್ಬಿಸಿ ನವಭಾರತ ನಿರ್ಮಾಣ ಮಾಡುವ ಹೊಂಗನಸನ್ನು ಕಂಡ ಮಹಾಚೇತನ ಸ್ವಾಮಿ ವಿವೇಕಾನಂದ ಎಂದು ಭಾರತ ಸ್ವಾಭಿಮಾನ ಸೇವಾ ಟ್ರಸ್ಟ್‌ನ ಸಂಚಾರಿ ನಿತ್ಯಾನಂದ ತಿಳಿಸಿದರು.
ಅವರು ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಸ್ವಾಮಿ ವಿವೇಕಾನಂದರ  ಜನ್ಮ ದಿನಾಚರಣೆ ಸಮಿತಿ ಮತ್ತು ಶಕ್ತಿ ಸಂವರ್ಧಿನಿ ವತಿಯಿಂದ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬೇಕಾದರೆ ಹಾಗೂ ಸಾಧನೆ ಹಾದಿಯಲ್ಲಿ ನಡೆಯಬೇಕಾದರೆ ನಮ್ಮ ಜೀವನದಲ್ಲಿ ವಿವೇಕವಾಣಿಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇಂದಿನ ಯುವ ಪೀಳಿಗೆ ಬಣ್ಣದ ಲೋಕದ ಚಿತ್ರಗಳಿಗೆ ಮಾರು ಹೋಗಿ ಹಿಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯುವಂತಾಗಿರುವುದು ವಿಪರ್ಯಾಸವೇ ಸರಿ. ಇನ್ನು ಮುಂದಾದರೂ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಮಹನೀಯ ನಾಯಕರ ಭಾವಚಿತ್ರಗಳನ್ನು ಎಲ್ಲರೂ ಇರಿಸಿಕೊಳ್ಳುವಂತೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಇನ್ನರ್‌ವೀಲ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾ ಶೈಲೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದೀಪಾ ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ತೇಜಸ್ವಿನಿ ಸಂಘದ ವಾರ್ಷಿಕ ವರದಿ ಓದಿದರು. ಮಹಿಳಾ ಪುರಸಭಾ ಸದಸ್ಯರು ಅಧಿಕಾರಿಗಳು ಪಟ್ಟಣದ ಮಹಿಳಾ ವೈದ್ಯರು, ಸರೋವರ ಗಣಪತಿ ದೇವಾಲಯದ ಆವರಣದಲ್ಲಿರುವ ಸ್ವಚ್ಛತಾ ಶ್ರಮದಾನ ಶಿಬಿರದಲ್ಲಿ ಪಾಲ್ಗೊಂಡ ಶಾಲೆಗಳಿಗೆ ಶಕ್ತಿ ಸಂವರ್ಧಿನಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ,ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಪ್ರಭಾವತಿ ದೇವರಾಜ್, ನಗರ್ತ ಮಹಿಳಾ ಸಂಘ, ಮಹಂತಿ ಮಠ ಧರ್ಮ ಸಂಸ್ಥೆ, ಶಕ್ತಿ ಸಂವರ್ಧಿನಿ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ, ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನ ಬಳಗ, ಗಾಣಿಗ ಮಹಿಳಾ ಸಂಘ, ಗಣಪತಿ ಶ್ರೀ ಶಕ್ತಿ ಸಂಘ, ಸಾಯಿ ಸ್ತ್ರೀ ಶಕ್ತಿ ಸಂಘ ಇತರೆ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.