ಬೆಂಗಳೂರು ಗ್ರಾಮಾಂತರ

ಸೂಚನಾ ಫಲಕ ಗಮನಿಸಿ ಸಂಚರಿಸಿ: ಮಲ್ಲೇಶ್

Published On :

ನೆಲಮಂಗಲ: ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಸೂಚನಾ ಫಲಕವನ್ನು ಗಮನಿಸಿ ಚಾಲನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಡಿ.ವೈ.ಎಸ್ಪಿ ಆರ್. ಮಲ್ಲೇಶ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ದಿವ್ಯಜ್ಯೋತಿ ವಿದ್ಯಾ ಕೇಂದ್ರದ ಆವರಣದಲ್ಲಿ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2014ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆ ಹಾಗೂ ಗ್ರಾಮಗಳು ಹತ್ತಿರವಿದ್ದಾಗ ವೇಗ ಮಿತಿಯನ್ನು ಕಡಿಮೆ ಮಾಡಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಿ ಸುರಕ್ಷತೆ ಕಾಪಾಡಿ. ಅಜಾಗರೂಕತೆ ಮತ್ತು ಅವಸರದಿಂದಾಗುವ ಅನಾಹುತ, ನಷ್ಟಗಳನ್ನು ಭರಿಸಲು ಯಾರಿದಂಲೂ ಸಾಧ್ಯವಿಲ್ಲ. ಇದರಿಂದಾಗಿ ಅದೇಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ನಿಮ್ಮ ಅಜಾಗರೂಕತೆಯಿಂದ ಮತ್ತೊಂದು ಕುಟುಂಬಕ್ಕೆ ತೊಂದರೆಯುಂಟು ಮಾಡಬೇಡಿ. ಯುವಕರು ತಮ್ಮಲ್ಲಿರುವ ಉತ್ಸಾಹ ಹಾಗೂ ಯೌವ್ವನದಿಂದಾಗಿ ಬೈಕ್‌ಗಳಲ್ಲಿ ಕಸರತ್ತು ಮಾಡುವುದನ್ನು ಬಿಟ್ಟು ಎಲ್ಲರಂತೆ ತಾವುಗಳು ನಿಧಾನ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸಿ. ವೀಲಿಂಗ್, ಡ್ರ್ಯಾಗ್‌ರೇಸ್, ಒಂಟಿ ಚಕ್ರದ ಚಾಲನೆಯಿಂದಾಗಿ ತೊಂದರೆಗಳಾಗುತ್ತವೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಯ ಹಿರಿಯ ಇನ್ಸ್‌ಪೆಕ್ಟರ್ ಕೆ.ವಿ.ಉದಯ್‌ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಕೊಡಿಸಿ ಅವರನ್ನು ಅಪಘಾತದ ಕೂಪಕ್ಕೆ ತಾವೇ ತಳ್ಳಿದಂತಾಗುತ್ತದೆ. ತಮ್ಮ ಮಕ್ಕಳಿಗೆ ವಾಹನದ ಜೊತೆಗೆ ಚಾಲನಾ ಪರವಾನಗಿ ಹಾಗೂ ವಾಹನದ ವಿಮೆಯನ್ನು ಮಾಡಿಸಿ ಕಾಲ ಕಾಲಕ್ಕೆ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದರು.
ಪಟ್ಟಣ ಠಾಣೆ ಸಬ್‌ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹದಂತಹ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಸಂಚಾರ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದರಿಂದ ಜನತೆಗೆ ಅರಿವುಂಟಾಗಿ ರಸ್ತೆ ಅಪಘಾತಗಳು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ನುಡಿದರು. ಸಂದರ್ಭದಲ್ಲಿ ಸಂಸ್ಥೆಯ ಶ್ರೀನಿವಾಸ, ಪ್ರಕಾಶ್, ಪ್ರಾಂಶುಪಾಲ ಸಿ.ಎಸ್.ಪ್ರಕಾಶ್,ರವೀಂದ್ರ, ರೇಣುಕಮ್ಮ, ವೆಂಕಟೇಶ್, ಆರ್. ಚೌಥಾಯಿ ಹಾಗೂ ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.