ಡಿವಿಜಿ ಮಂಕುತಿಮ್ಮನಕಗ್ಗ ವಾಚನ ಸ್ಪರ್ಧೆ
ಕನಕಪುರ: ಡಿವಿಜಿಯವರ ಮಂಕುತಿಮ್ಮನಕಗ್ಗ ವಾಚನ ಮತ್ತು ವ್ಯಾಖ್ಯಾನದ ಸ್ಪರ್ಧೆ ಕನಕಪುರದ ಲಿಟಲ್ ಹಾರ್ಟ್ಸ್ ಎಲಿಮೆಂಟರಿ ಶಾಲೆಯಲ್ಲಿ ಫೆ.1 ರಂದು ನಡೆಯಲಿದೆ. ಸಂಸ್ಥೆಯ ವತಿಯಿಂದ 3ನೇ ವರ್ಷ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ ಕನಕಪುರ ತಾಲೂಕಿನ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದ್ದು, ಮಕ್ಕಳು ಡಿವಿಜಿಯವರ ಕಗ್ಗದ 2 ಮುಕ್ತಕಗಳನ್ನು ನಾಲ್ಕು ನಿಮಿಷಗಳ ಅವಧಿಯಲ್ಲಿ ರಾಗವಾಗಿ ಹಾಡಬೇಕು ಹಾಗೂ ವ್ಯಾಖ್ಯಾನ ಮಾಡಬೇಕು. ಮಂಕುತಿಮ್ಮನ ಕಗ್ಗವನ್ನು ಜನಪ್ರಿಯಗೊಳಿಸುವ ಈ ಯತ್ನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಸಂಚಾಲಕರು ಕೋರಿದ್ದಾರೆ. ವಿವರಗಳಿಗೆ ಮೊಬೈಲ್-96630 92030 ಸಂಪರ್ಕಿಸಲು ಕೋರಿದೆ.
ಸ್ಫೂರ್ತಿ ಭವನದಲ್ಲಿ ಜಿಲ್ಲಾ ಸಮಾವೇಶ
ರಾಮನಗರ: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕವು ಜ.23ರ ಬೆಳಗ್ಗೆ 10ಕ್ಕೆ ನಗರದ ಸ್ಫೂರ್ತಿ ಭವನದಲ್ಲಿ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಂಡಿದೆ. ಸಮಾವೇಶವನ್ನು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಉದ್ಘಾಟಿಸುವರು. ಮಾಜಿ ಉಪ ಸಭಾಪತಿ ಪುಟ್ಟಣ್ಣ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಶಿವನಂಜಯ್ಯ, ಎ.ಟಿ.ಮನು, ಬಿ.ರಾಜಶೇಖರಮೂರ್ತಿ, ಎನ್.ಶ್ರೀನಿವಾಸಚಾರ್, ಕೆ.ಎಂ.ಶ್ರೀನಿವಾಸಗೌಡ ಭಾಗವಹಿಸುವರು.
ವಿನಯದಿಂದ ಯಶಸ್ಸು ಸಾಧಿಸಲು ಸಾಧ್ಯ
ರಾಮನಗರ: ವಿನಯ, ದೇಶಭಕ್ತಿ ಹಾಗೂ ಹಿರಿಯರ ಮೇಲೆ ಗೌರವ ಭಾವನೆಯಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದಲ್ಲಿರುವ ವಾಗ್ದೇವಿ ವಿಲಾಸ ಶಿಕಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳು ಶಿಸ್ತಿನಿಂದ ಅಭ್ಯಾಸ ಮಾಡಿದಾಗ ಮಾತ್ರ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು ಎಂದು ತಿಳಿಸಿದರು.ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನಣತ್ಯ, ಗಾಯನ, ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಲೆಯ ಅಧ್ಯಕ್ಷ ಕೆ. ಹರೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸೇನಾಭರ್ತಿ ರ್ಯಾಲಿ
ರಾಮನಗರ: ಯುನಿಟ್ ಹೆಡ್ ಕ್ವಾರ್ಟರ್ ಕೋಟಾದಡಿಯಲ್ಲಿ ಲಕ್ನೌದ ಮೆಡಿಕಲ್ ಕೋರ್ಸ್ ಸೆಂಟರ್ ಮತ್ತ್ತು ಕಾಲೇಜಿನಲ್ಲಿ ಸೇನಾಭರ್ತಿ ರ್ಯಾಲಿ ನಡೆಯಲಿದೆ. ಸೈನಿಕರು, ಮಾಜಿ ಸೈನಿಕರು ಹಾಗೂ ವಿಧವೆಯರ ಮಕ್ಕಳಿಗಾಗಿ ಭರ್ತಿ ನಡೆಸಲಾಗುವುದು. ಅರ್ಹ ಹಾಗೂ ಆಸಕ್ತ ಯುವಕರು ಈ ಭರ್ತಿಯ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ 080-25588718 ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

