ಬೆಂಗಳೂರು ಗ್ರಾಮಾಂತರ

ಪ್ರಾಣ ಕೊಟ್ಟೇವು; ಮನೆ ಕೆಡವಲು ಬಿಡೆವು

Published On :

ಕ.ಪ್ರ.ವಾರ್ತೆ   ನೆಲಮಂಗಲ   ಜ.22
ಅರ್ಕಾವತಿ ನದಿ ಪಾತ್ರದ ಗ್ರಾಮಗಳ ವ್ಯಾಪ್ತಿಯ ಎಲ್ಲಾ ರೀತಿಯ ಮನೆ ಕಟ್ಟಡ ಹಾಗೂ ಗೋಡೌನ್ಗಳನ್ನಾಗಲಿ ಬಿಡಿಎ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವುದಕ್ಕೆ ನೊಂದ ಗ್ರಾಮಸ್ಥರು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಹೇಳಿದರು.
ಬುಧವಾರ ಮಾದನಾಯಕನಹಳ್ಳಿ ವೃತ್ತದಲ್ಲಿ ಅರ್ಕಾವತಿ ನದಿ ತೀರದ ನೊಂದ ಸಾರ್ವಜನಿಕ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಈ ನದಿ ಪಾತ್ರದ ಜನತೆಯ ಕಟ್ಟಡವನ್ನು ಕೆಡವಲು ಪ್ರಕಟಣೆ ಹೊರಡಿಸಿದ್ದಾರೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ತಮ್ಮ ಬದುಕು, ಕಟ್ಟಡ, ಮನೆ ಉಳಿಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಸರ್ಕಾರದ ಅಧಿಕಾರಿಗಳೇ ಹತ್ತಾರು ವರ್ಷಗಳಿಂದಲೂ ಇಲ್ಲಿಯ ರೈತರಿಗೆ ತಮ್ಮ ಜಮೀನುಗಳಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿ ನಡೆಸಲು ಸ್ಥಳೀಯ ಗ್ರಾಪಂ, ತಾಪಂ ಮತ್ತು ಜಿಲ್ಲಾಧಿಕಾರಿಗಳು ಸಹ ಅನುಮತಿ ನೀಡಿದ್ದರಿಂದ ಬಡ ಜನತೆ ಬ್ಯಾಂಕ್ಗಳಲ್ಲಿ ಸಾಲ ಪಡೆದು ಕಟ್ಟಿರುವ ಕಟ್ಟಡಗಳ ತೆರವುಗೊಳಿಸುತ್ತಿರುವುದು ಅನ್ಯಾಯವಾಗಿದೆ. ಜನತೆಗೆ ಸರ್ಕಾರ ನ್ಯಾಯ ಒದಗಿಸುವವರೆಗೂ ಕಾನೂನು ಹೋರಾಟ ಮಾಡಲಾಗುತ್ತದೆ ಎಂದರು.   ಮುಖ್ಯಮಂತಿ ಸಿದ್ದರಾಮಯ್ಯ ಅವರು ನದಿ ಪಾತ್ರದಲ್ಲಿನ 30ಕ್ಕೂ ಹೆಚ್ಚು ಗ್ರಾಮಗಳ ರೈತರು ಹಾಗೂ ಬಡ ಜನತೆಯ ಕಷ್ಟವನ್ನರಿತು ಅವರ ಕಟ್ಟಡಗಳನ್ನು ಉಳಿಸಿಕೊಡಬೇಕು. 25 ವರ್ಷಗಳಿಂದಲೂ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟು, ತೆರವುಗೊಳಿಸದಿರುವುದಕ್ಕೆ ಖಂಡಿಸಿದರು. ಅರ್ಕಾವತಿ ಪಾತ್ರದಲ್ಲಿನ ಮನೆಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಲು ಮುಂದಾದರೆ ನಮ್ಮ ಪ್ರಾಣವನ್ನಾದರೂ ನೀಡಿ ಮನೆ ಕೆಡುವಲು ಬಿಡುವುದಿಲ್ಲ. ವಿಧಾನ ಸಭೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸುವುದಾಗಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಸರ್ಕಾರವು ನವೆಂಬರ್ 2003ರ ನೋಟಿಫಿಕೇಷನ್ ಪುನರ್ ಪರಿಶೀಲನೆ ಮಾಡಬೇಕು. ಬಿಡಿಎ, ಎನ್ಪಿಎ, ಬಿಎಂಐಸಿ ಇಲಾಖೆಗಳ ನಿರಂತರ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು. ಕಂದಾಯ ನಿವೇಶನಗಳಲ್ಲಿ ಬಡವರು, ನಿರ್ಗತಿಕರು ನಿರ್ಮಿಸಿಕೊಂಡಿರುವ ಮನೆಗಳನ್ನು ರಕ್ಷಿಸುವ ಕಾರ್ಯ ಸರ್ಕಾರ ನಿರ್ವಹಿಸಬೇಕು ಎಂದು ದಾಸನಪುರ ಜಿಲ್ಲಾ ಪಂಚಾಯ್ತಿ ಸದಸ್ಯ ಚಂದ್ರಪ್ಪ ಆಗ್ರಹಿಸಿದರು.
ಪ್ರತಿಭಟನಾಕಾರರು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಿಡಿಎ ವಿರುದ್ದ ಘೋಷಣೆ ಕೂಗುತ್ತಾ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.