ವಿದ್ಯಾವಂತರಾದರೆ ಮಾತ್ರ ಸಮಾನತೆ ಸಾಧ್ಯ
ನೆಲಮಂಗಲ: ದೇಶದಲ್ಲಿ ಎಲ್ಲರೂ ವಿದ್ಯಾವಂತರಾದರೆ ಮಾತ್ರ ಸಾಮಾಜಿಕ ಸಮಾನತೆ ಮೂಡಿ, ಬಡತನ ನಿವಾರಣೆಯಾಗಿ ಅಭಿವೃದ್ಧಿಯಾಗಬೇಕು ಎಂದು ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಹೇಳಿದರು.
ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಲ್ಲಿ ಭಾರತ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ನಿಸ್ವಾರ್ಥವಾಗಿ ದುಡಿಯಬೇಕೆಂದರು. ಪ್ರತಿಯೊಬ್ಬ ಯುವಕರು ರಾಷ್ಟ್ರಪ್ರೇಮವನ್ನು ರಕ್ತಗತವಾಗಿ ಬೆಳೆಸಿಕೊಳ್ಳುವ ಸ್ವಾಭಿಮಾನಿಗಳಾಗಬೇಕು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ವೀರಯೋಧರು ಹಾಗೂ ವೀರ ಮಹಿಳೆಯರ ಸಾಹಸ ನೆನೆಯುತ್ತಾ, ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಯುವಕರು ದೇಶವನ್ನು ಮಾದರಿ ಮಾಡುವುದಕ್ಕಾಗಿ ಕಂಕಣಬದ್ಧರಾಗಿ ನಿಲ್ಲಬೇಕು. ಭಯೋತ್ಪದನೆಯನ್ನು ನಿಗ್ರಹಿಸಲು ಭಾರತ ದೇಶ ಶಕ್ತಿಯುತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ. ಎನ್.ಆರ್. ಗೀತಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಶಾಲಾಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದಂತಹ ಪತ್ರಕರ್ತ ಎನ್.ಜಿ.ಗೋಪಾಲ್, ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ, ನಿವೃತ್ತ ಸೈನಿಕ ಕೃಷ್ಣಪ್ಪ, ಕ್ರೀಡಾಪಟು ಜಯರಾಜ್, ಸಮಾಜ ಸೇವಕ ಮುನೀರ್ ಪಾಷ ಅವರನ್ನು ತಾಲೂಕು ಆಡಳಿತ ಗೌರವಿಸಿತು. ಪಟ್ಟಣದ ಕೋಟೆಬೀದಿ ಸರ್ಕಾರಿ ಶಾಲೆ ಮಕ್ಕಳು ನಾಡಗೀತೆ,
ರೈತಗೀತೆ, ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ದೇಶಭಕ್ತಿ ಗೀತೆಗಳುಳ್ಳ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಉತ್ತಮ ಕಾರ್ಯಕ್ರಮ ನೀಡಿದ ಶಾಲಾ ಮಕ್ಕಳಿಗೆ ವೇದಿಕೆಯಲ್ಲಿ ಪುರಸ್ಕಾರ ನೀಡಿದರು.
ತಾ.ಪಂ. ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಇ.ಓ. ಕೆ.ಸಿ.ನಾರಾಯಣಸ್ವಾಮಿ, ಜಿ.ಪಂ.ಸದಸ್ಯ ರಾಮು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್, ಡಿ.ವೈ.ಎಸ್ಪಿ. ಆರ್. ಮಲ್ಲೇಶ್, ಪುರಸಭಾ ಸದಸ್ಯರಾದ ಶಿವಕುಮಾರ್, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

