ದೇವನಹಳ್ಳಿ: ಬಿ.ಟಿ. ಓಬಳೇಶಪ್ಪಗೆ ಸನ್ಮಾನ
ದೇವನಹಳ್ಳಿ: ತಾಲೂಕು ಆವತಿ ಗ್ರಾಮದ ಬಳಿ ಇರುವ ಕೋರಮಂಗಲ ಬಯಲು ಬಂಧೀಖಾನೆಯ ಸಹಾಯಕ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಟಿ.ಓಬಳೇಶಪ್ಪ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ವಿಶೇಷ ಸೇವಾಪದಕಕ್ಕೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಓಬಳೇಶಪ್ಪ ಅವರಿಗೆ ಬಯಲು ಬಂಧೀಖಾನೆಯ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಸುತ್ತಮುತ್ತ ಗ್ರಾಮದ ರೈತರು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.
ಅಧ್ಯಕ್ಷತೆಯನ್ನು ಚಿಕ್ಕಬಳ್ಳಾಪುರ ಬಂಧೀಖಾನೆಯ ಅಧೀಕ್ಷಕ ಲಕ್ಷ್ಮೀನಾರಾಯಣಪ್ಪ ವಹಿಸಿ ಮಾತನಾಡಿ ಓಬಳೇಶಪ್ಪ ಅವರ ನಿಸ್ವಾರ್ಥ ಸೇವೆಯನ್ನು ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಓಬಳೇಶಪ್ಪ ಮಾತನಾಡಿ ತಮಗೆ ರಾಷ್ಟ್ರಪ್ರಶಸ್ತಿ ದೊರೆತಿರುವುದಕ್ಕೆ ತಮಗೆ ಜನ್ಮ ನೀಡಿದ ತಂದೆ ತಾಯಿಗಳು ಅಲ್ಲದೆ ವಿದ್ಯೆ ಕೊಟ್ಟ ಗುರುಗಳು ಮುಖ್ಯ ಕಾರಣ ಎಂದು ತಿಳಿಸಿ ತಾವು ಈ ಮಟ್ಟಕ್ಕೆ ಬೆಳೆಯಲು ಸಹಕಾರ ನೀಡಿದ ಇಲಾಖೆಯ ಅಧಿಕಾರಿಗಳು ಬಂಧೀಖಾನೆಯ ಸಿಬ್ಬಂದಿಗಳು ಸುತ್ತಮುತ್ತ ಗ್ರಾಮದ ರೈತರ ಮತ್ತು ಶಿಕ್ಷಕರುಗಳು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಕೃಷಿ ಅಧಿಕಾರಿಗಳಾದ ಅನ್ಸಾರಿ, ದೇವನಹಳ್ಳಿ ಖಜಾನೆ ಅಧಿಕ್ಷಕರಾದ ಟೇಕಲ್ ರಾಮಪ್ರಸಾದ್, ಶಿಕ್ಷಕರಾದ ಚಂದ್ರಪ್ಪ, ಶಾಂತಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಕೆಂಪೇಗೌಡ, ವಿಜಯಪುರದ ನಗರ್ತ ಸಂಘದ ಭಾರತಿ ಅವರು ಶುಭ ಕೋರಿ ಮಾತನಾಡಿದರು. ಬಂಧೀಖಾನೆಯ ಅಧಿಕಾರಿ ಕೃಷ್ಣಮೂರ್ತಿ ಸ್ವಾಗತ ಕೋರಿದರು, ರಾಜಣ್ಣ ವಂದನೆ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

