ಧರ್ಮದ ಚಿಂತನೆಯಿಂದ ಸುಂದರ ಬದುಕು ಸಾಧ್ಯ
ಮಾಗಡಿ: ಧಾರ್ಮಿಕ ಆಚರಣೆ, ಧರ್ಮದ ಚಿಂತನೆಯಿಂದ ಪ್ರತಿಯೊಬ್ಬರು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಿದ್ಧಗಂಗಾ ಕಿರಿಯ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಸೋಲೂರು ಹೋಬಳಿ ಲಕ್ಕೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋರಮಂಗಲದಲ್ಲಿ ಶ್ರೀ ಚನ್ನಿಗರಾಯಸ್ವಾಮಿ, ಆಂಜನೇಯಸ್ವಾಮಿ, ಲಕ್ಷ್ಮೀದೇವಿ ಪುನರ್ ಮೂರ್ತಿಗಳ ಜೀರ್ಣೋದ್ಧಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ, ನೂತನ ದೇವಸ್ಥಾನದ ದೀಪ ಸ್ತಂಭ ಉದ್ಘಾಟಿಸಿ ಮಾತನಾಡಿದರು. ಈ ಜ್ಯೋತಿ ಪ್ರತಿಯೊಬ್ಬ ಭಕ್ತನನ್ನು ಕೈಹಿಡಿದು ಮುನ್ನಡೆಸುತ್ತದೆ. ಬಾಳು ಬಂಗಾರವಾಗುತ್ತದೆ. ಧಾರ್ಮಿಕ ಮತ್ತು ಕಾಯಕ ನಿಷ್ಠೆಯ ಜೊತೆಗೆ ಪ್ರತಿಯೊಬ್ಬರು ಹಂಚಿ ತಿನ್ನುವ ಅರಿವಿನ ಜಾಗೃತಿ ಅವಶ್ಯಕ. ಯುವ ಪೀಳಿಗೆಯಲ್ಲಿ ಧಾರ್ಮಿಕ ಆಚರಣೆಯ ಜ್ಞಾನದ ಜ್ಯೋತಿ ಹಚ್ಚುವ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಸನ್ನದ್ಧರಾಗಬೇಕು. ಈ ನಿಟ್ಟಿನಲ್ಲಿ ಯುವಪೀಳಿಗೆಯಲ್ಲಿ ಧರ್ಮದ ಜ್ಞಾನದೀವಿಗೆ ಅನಾವರಣಗೊಂಡಾಗ ಮಾತ್ರ ಸಮೃದ್ಧ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದರು.
ರಥ ಸಮರ್ಪಣೆ: ಕಂಚಗಲ್ಬಂಡೇಮಠದ ಬಸವಲಿಂಗ ಸ್ವಾಮೀಜಿ ನೂತನ ರಥ ಸಮರ್ಪಣೆ ನಂತರ ಮಾತನಾಡಿ ಗುರುವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಮುಕ್ತಿ ಇಲ್ಲ.ದೇವರು, ಧರ್ಮದ ಹೆಸರಿನಲ್ಲಿ ವೈಭವೀಕರಣ ಸಲ್ಲದು, ಕಣ ಕಣದಲ್ಲೂ ದೇವರಿದ್ದಾನೆ. ಇಲ್ಲಿನ ಚನ್ನಿಗರಾಯಸ್ವಾಮಿ ದೇಗುಲ ಅತ್ಯಂತ ಸುಂದರವಾಗಿದೆ. ಮೂರ್ತಿಯೂ ಸಹ ಅಷ್ಟೆ ಅದ್ಭುತ ಶಕ್ತಿಯಿಂದಲೂ ಕೂಡಿದೆ. ದೇವರ ಆರಾಧನೆಯಿಂದ ಮನಸ್ಸು ನಿರ್ಮಲಗೊಳ್ಳುತ್ತದೆ, ಭಾವನೆಗಳು ವಿಕಸಿಸುತ್ತದೆ. ಮಾನಸಿಕವಾಗಿ ಸುಖ, ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು. ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಚನ್ನಿಗರಾಯಸ್ವಾಮಿ ಭೋಜನ ಶಾಲೆಯನ್ನು ಉದ್ಘಾಟಿಸಿದರು. ಕೇರಳ ಪಯ್ಯನೂರು ಜೋತಿಷಿ ನಾರಾಯಣ್ ಪದುವಾಳ್, ದಾನಿಗಳಾದ ಸಿ. ಗಂಗಾಧರಮೂರ್ತಿ, ಕುಸುಮ, ಟಿ. ಗಂಗಾಧರ್, ಮಧು,ಲೋಕೇಶ್, ಜಿ.ಪಂ. ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯ ಶಿವರುದ್ರಪ್ಪ, ಶಾಸಕರಾದ ವಿಶ್ವನಾಧ್, ಗೋಪಾಲಯ್ಯ, ರಾಮಚಂದ್ರೇಗೌಡ, ದೇವಾಲಯದ ಮಂಡಳಿ ಅಧ್ಯಕ್ಷ ಕೆ.ಪಿ. ವಿಜಯ್, ತಾ.ಪಂ. ಸದಸ್ಯ ಶಂಕರಪ್ಪ, ಬಿಬಿಎಂಪಿ ಸದಸ್ಯ ರಂಗಣ್ಣ, ಮಾಜಿ ಸದಸ್ಯ ಕೃಷ್ಣಪ್ಪ, ಪ್ರಕಾಶ್, ಕೆ.ಪಿ. ಬೃಂಗೇಶ್, ಲಕ್ಕೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗರಾಜು, ಕರವೇ ಘಟಕದ ಅಧ್ಯಕ್ಷ ಚನ್ನಗಂಗಯ್ಯ, ಮೋಹನ್, ಮಹೇಶ್, ರಂಗಸ್ವಾಮಿ, ಮೂರ್ತಿ, ಜಯರಾಮು ಪರಮೇಶ್ವರನ್ ಸೇರಿದಂತೆ ಸಹಸ್ರಾರು ಭಕ್ತರು, ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

