ಬೆಂಗಳೂರು ಗ್ರಾಮಾಂತರ

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಚಾಲಕ ಸಾವು

Published On :

ದೇವನಹಳ್ಳಿ; ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರೊಂದು ಭಾನುವಾರ ಸಂಜೆ ಬಚ್ಚಹಳ್ಳಿ ಗೇಟ್ ಪ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಚಾಲಕ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಇಲ್ಲಿನ ಸಂಚಾರಿ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಸಾವಿಗೀಡಾದ ಕಾರಿನ ಚಾಲಕ ವಿದ್ಯಾರಣ್ಯಪುರದ  ಅರ್ಜುನ್ (27)  ಪೆನೋಸಾನಿಕ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು ಎನ್ನಲಾಗಿದ್ದು, ಮತ್ತೋರ್ವ ನಾಗರಬಾವಿಯ ಉಮೇಶ್  ತೀವ್ರಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಭೇಟಿ ನೀಡಿ ಅತಿಯಾದ ವೇಗ ಮತ್ತು ಅಜಾಗರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.



ಎಂ.ಟಿ.ಬಿ.ಕ್ರಿಕೆಟ್ ಕಪ್


ಹೊಸಕೋಟೆ: ಶಾಸಕರಾದ ಎಂ.ಟಿ. ಬಿ. ನಾಗರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಸಾರಥ್ಯದಲ್ಲಿ ಹೊಸಕೋಟೆ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಎಂ.ಟಿ.ಬಿ.ಕ್ರಿಕೆಟ್ ಕಪ್-2014 ಟೂರ್ನಿ ಜು.12,13,18,19,20  ರವರೆಗೆ ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಮೊದಲ ಬಹುಮಾನ ರು.20,000- ಮತ್ತು ಟ್ರೋಫಿ, 2ನೇ ಬಹುಮಾನ ರು.10,000- ಮತ್ತು ಟ್ರೋಫಿ ಸೆಮಿ ಫೈನಲ್ ಲೂಸರ್ಸ್ ತಲಾ ರು.5000 ಮತ್ತು ಕ್ವಾಟರ್ ಫೈನಲ್ ಲೂಸರ್ಸ್ಗೆ ತಲಾ ರು.2500 ನೀಡಲಾಗುವುದು. ಜು.7ರೊಳಗೆ ತಂಡದ ಹೆಸರನ್ನು ನೋಂದಾಯಿಸಬೇಕು. ಮಾಹಿತಿಗೆ ಮೊಬೈಲ್ ಸಂಪರ್ಕಿಸಿ: ಶ್ರೀಧರ್ - 9880819566.


ನೇತ್ರಧಾಮ ಆಸ್ಪತ್ರೆಯ 999 ನೇ ಶಿಬಿರ



ಕನಕಪುರ: ಲಯನ್ಸ್ ಕ್ಲಬ್ ಹಾರೋಹಳ್ಳಿ ಹಾಗೂ ಬೆಂಗಳೂರಿನ ನೇತ್ರಧಾಮ ಆಸ್ಪತ್ರೆ, ಶ್ರದ್ಧಾ ಐ ಕೇರ್ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು  ಶಸ್ತ್ರಚಿಕಿತ್ಸಾ ಶಿಬಿರ ಪಿಚ್ಚನಕೆರೆ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆಯಿತು. ಡಾ. ರಂಗಸ್ವಾಮಿ ಉದ್ಘಾಟನೆಯನ್ನು ನೆರವೇರಿಸಿದರು. ಜಿ.ಟಿ.ರವಿಶಂಕರಗೌಡ ಅಧ್ಯಕ್ಷತೆ ವಹಿಸಿದ್ದರು. ನೇತ್ರಧಾಮ ಆಸ್ಪತ್ರೆಯ 999 ನೇ ಶಿಬಿರ ಇದಾಗಿದ್ದು ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಲು ಸಾವಿರಾರು ಜನರನ್ನು ಬೆಳಕಿನೆಡೆಗೆ ಕರೆತರಲು ಶಿಬಿರಗಳಿಂದ ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಚಿಕಿತ್ಸೆ ಒದಗಿಸಲು ಲಯನ್ಸ್ ಸಂಸ್ಥೆ ದುಡಿಯುತ್ತಿದೆ ಎಂದು ಡಾ.ರಂಗಸ್ವಾಮಿ ನುಡಿದರು.  ಶಿಬಿರದಲ್ಲಿ ಲಯನ್ಸ್ ಕಾರ್ಯದರ್ಶಿ ರಾಮಕೃಷ್ಣಯ್ಯ, ಖಜಾಂಚಿ  ಮುದ್ದೇಗೌಡ, ಕಾಡೇಗೌಡ, ಸೋಮಶೇಖರ್, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.