ಕುವೆಂಪು ನೆನಪು ಉಪನ್ಯಾಸ ಕಾರ್ಯಕ್ರಮ
ಕನಕಪುರ: ರಾಮನಗರ ಜಿಲ್ಲಾ ಹಾಗೂ ಕನಕಪುರ ತಾಲೂಕು ಕಸಾಪ ಸಂಯುಕ್ತ ಆಶ್ರಯದಲ್ಲಿ ಕಸಾಪ ಶತಮಾನೋತ್ಸವದ ಅಂಗವಾಗಿ ಕುವೆಂಪು-ನೆನಪು ಉಪನ್ಯಾಸ ಕಾರ್ಯಕ್ರಮ ಕನಕಪುರ ತಾಲೂಕು ಪಡುವಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಉದ್ಘಾಟನೆಯನ್ನು ನೆರವೇರಿಸಿದರು. ತಾ.ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಕೂ.ಗಿ. ಗಿರಿಯಪ್ಪ ಮಾತನಾಡಿ ಯುಗದ ಕವಿ, ಜಗದ ಕವಿಯಾಗಿ ಬೆಳೆದು ನಿಂತ ಕುವೆಂಪು ಅವರು ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ನಡೆಸಿದ್ದು 20ನೇ ಶತಮಾನದಲ್ಲಿಯೂ ಮಹಾಕಾವ್ಯ ನೀಡಿದ ಅಸಾದೃಶ ಪ್ರತಿಭೆಯಾಗಿದ್ದಾರೆ ಎಂದರು.
ಪ್ರಾಧ್ಯಾಪಕ ವೃಷಭೇಂದ್ರಮೂರ್ತಿ ಮಾತನಾಡಿ, ಭಾಷೆ ಹರಿಯುವ ನೀರಾಗಬೇಕೇ ಹೊರತು ನಿಂತನೀರಾಗಬಾರದು. ಭಾಷೆಯನ್ನು ಬಳಸದಿದ್ದರೆ ಮೂಲೆಗುಂಪಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವಚನಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗೇಶ್,
ಜಿಪಂ ಸದಸ್ಯೆ ಗೀತಾ ಈಶ್ವರ್, ಪಿಡಿಓ ರಾಮಯ್ಯ, ಕೆಂಪೇಗೌಡ ಜಿಲ್ಲಾ ಖಜಾಂಚಿ ಎಂ.ಎಸ್.ಮಹೇಶ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

